ಮೋದಿಯನ್ನು ನೋಡಲು ಎದ್ದು ಬಿದ್ದು ಓಡಿ ಬಂದ ಮುಸ್ಲಿಂ ಮಹಿಳೆ,ಇಡೀ ದೇಶವೇ ಶಾಕ್

Today News / ಕನ್ನಡ ಸುದ್ದಿಗಳು

ಮೋದಿ ಎನ್ನುವ ಹೆಸರಿನಲ್ಲಿದೆ ಅದೇನೋ ಮಾಯೆ ಹೌದು ಇತ್ತೀಚಿಗೆ ಅವರು ಬೆಂಗಳೂರಿಗೆ ಬಂದಾಗ ಜನಸಾಗರ ಅದ್ಯಾವ ರೀತಿಯಲ್ಲಿ ಸೇರಿತ್ತು ಎಂದರೆ ಅಚ್ಚರಿ ಆಗುತ್ತದೆ ಹೌದು ಪ್ರಧಾನಿ ನರೇಂದ್ರ ಮೋದಿ  ಅವರ ರೋಡ್‌ ಶೋವನ್ನ ವೀಕ್ಷಿಸಲು ತಾಯಿಯೊಬ್ಬರು  ಆರು ತಿಂಗಳ ಮಗುವನ್ನು ಕರೆದುಕೊಂಡು ಬಂದಿದ್ದಾರೆ.ಅಂದು ನಡೆದ ರೋಡ್ ಶೋದಲ್ಲಿ ಮೋದಿ ಅವರನ್ನು ಹತ್ತಿರದಿಂದ ನೋಡಬೇಕೆಂಬ ಆಸೆಯಿಂದ ಬೆಂಗಳೂರು ಮೂಲದ ಶೋಭಾ ಎಂಬುವವರು ರಾತ್ರಿ ಸಮಯದಲ್ಲೇ ತನ್ನ ಆರು ತಿಂಗಳ ಮಗುವನ್ನು ಕರೆದುಕೊಂಡು ಬಂದಿದ್ದಾರೆ.

ಈ ವೇಳೆ ಮಗುವಿಗೆ ಬಾಟಲಿಯಲ್ಲೇ ಹಾಲು ಕುಡಿಸುತ್ತಾ ರೋಡ್‌ ಶೋವನ್ನು ಹತ್ತಿರದಿಂದ ವೀಕ್ಷಿಸಿ ಖುಷಿಪಟ್ಟರು.ನಿನ್ನೆ ಬೆಂಗಳೂರಿನಲ್ಲಿ ನಡೆಸಿದಂತೆ ಅರಮನೆ ನಗರಿ ಮೈಸೂರಿನಲ್ಲಿ ಇವತ್ತು ಸುಮಾರು 4 ಕಿ.ಮೀ. ರೋಡ್ ಶೋ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ಅವರು ಕೇಸರಿ ಶಾಲು ಧರಿಸಿ ಗಮನ ಸೆಳೆದರು. ರೋಡ್ ಶೋದ ರಸ್ತೆ ಇಕ್ಕೆಲೆಗಳಲ್ಲಿ ಕೇಸರಿ ಕಾರ್ಯಕರ್ತರು, ಅಭಿಮಾನಿಗಳು ಮೋದಿ ನೋಡಿ ಪುಳಕಿತರಾದರು. ದಾರಿಯುದ್ಧಕ್ಕೂ ಹೂಮಳೆ ಸುರಿಸಿದರು.

ಇನ್ನು ಮುಸ್ಲಿಂ ಮಹಿಳೆಯರು ಕೂಡ ಮೋದಿಯನ್ನು ನೋಡಲು ಸುಡು ಬಿಸಿಲನ್ನು ಲೆಕ್ಕಿಸದೆ ಬಂದು ದಾರಿಯಲ್ಲಿ ನಿಂತಿದ್ದರು. ಇನ್ನು ಹಿಂದುತ್ವ ಉಳಿಸಲು ಮೋದಿಗೆ ನಾವು ವೋಟ್ ಮಾಡ್ತೇವೆ ಎಂದು ವಯಸ್ಸಾದ ಮುದುಕಿಯಿಂದ ಹಿಡಿದು ನವ ತರುಣಿಯರು ಕೂಡ ಮೋದಿ ರೋಡ್ ಶೋ ಅಲ್ಲಿ ಹೇಳಿ ಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ  ಬೆಂಗಳೂರಿನಲ್ಲಿ ರೋಡ್ ಶೋ ವೇಳೆ ಜನರತ್ತ ಕೈ ಬೀಸಿದನ್ನು ಕಂಡು ನಮ್ಮ ಮೋದಿ ನಮ್ಮ ಮೋದಿ ಎಂದು ಜನರೆಲ್ಲ ಕೂಗಿದ್ದಾರೆ. ಅದನ್ನೆಲ್ಲ ನೋಡುತ್ತಿದ್ದರೆ ಮತ್ತೊಮ್ಮೆ ಮೋದಿ ಹವಾ ಜೋರಾಗಿಯೇ ಇದೆ ಅನ್ನಬಹುದಾಗಿದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...