ಮಿಥುನ ರಾಶಿ

ಮಿಥುನ ರಾಶಿಯವರು ತಮ್ಮ ಲೈಫ್ ಪಾರ್ಟ್‌ನರ್ ಹೇಗಿರ್ಬೇಕು ಅಂತ ಬಯಸ್ತಾರೆ ಗೊತ್ತಾ?

Heap/ರಾಶಿ ಭವಿಷ್ಯ

ಪ್ರತಿ ರಾಶಿಗೂ ಹಲವಾರು ಗುಣ ಸ್ವಭಾವಗಳಿರುತ್ತವೆ. ತಮ್ಮ ಜೀವನ ಸಂಗಾತಿ ಕೂಡ ಅದಕ್ಕೆ ಒಪ್ಪುವಂತೆ ಇರಬೇಕು ಎಂದವರು ಬಯಸುತ್ತಾರೆ. ಹಾಗಿದ್ದರೆ ಮಿಥುನ ರಾಶಿಯವರು ತಮ್ಮ ಬಾಳಸಂಗಾತಿಯಲ್ಲಿ ಬಯಸುವ ಗುಣಗಳೇನು? ಬನ್ನಿ ತಿಳಿಯೋಣ.

ಮಿಥುನ ರಾಶಿಯವರು ಎಂಥ ಸಂಗಾತಿಯನ್ನು ಅಪೇಕ್ಷಿಸುತ್ತಾರೆ ಎಂದು ತಿಳಿಯುವ ಮೊದಲು, ಮಿಥುನ ರಾಶಿಯವರ ಗುಣ ಸ್ವಭಾವಗಳೇನು ಎಂದು ನೋಡೋಣ.

ಮಿಥುನ ರಾಶಿಯವರು ಸಾಮಾಜಿಕವಾಗಿ ಚಿಟ್ಟೆಯಂಥ ಜನಗಳು. ಅವರು ಸಾಮಾನ್ಯವಾಗಿ ಯಾವಾಗಲೂ ಜನರಿಂದ ಸುತ್ತುವರೆದು ಇರುವುದನ್ನು ಇಷ್ಟಪಡುತ್ತಾರೆ. ಸ್ನೇಹಪರವಾಗಿರುತ್ತಾರೆ, ಸುಲಭವಾಗಿ ಲಭ್ಯವಾಗಿರುತ್ತಾರೆ ಮತ್ತು ಬೆಚ್ಚಗಿನ ಸ್ವಭಾವದವರು. ಇವರು ಸೌಹಾರ್ದಯುತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದ್ದರಿಂದ ಸುಲಭವಾಗಿ ಇವರನ್ನು ಸ್ನೇಹಿತರನ್ನಾಗಿ ಪಡೆಯಬಹುದು. ಅವರು ಸರಳವಾದ ಜೀವನವನ್ನು ನಡೆಸುತ್ತಾರೆ. ಸಾಮಾನ್ಯವಾಗಿ ಮನೆಯ ಪಾರ್ಟಿಗಳು, ಕೂಟಗಳು ಮತ್ತು ಪೂರ್ವಸಿದ್ಧತೆಯಿಲ್ಲದ ಡ್ಯಾನ್ಸ್‌ಗಳಿಂದ ತುಂಬಿರುತ್ತದೆ! ಮಿಥುನ ರಾಶಿಯವರು ನಿಜವಾಗಿಯೂ ಯಾವುದೇ ಹಂಗು ಅಥವಾ ಅಟ್ಯಾಚ್‌ಮೆಂಟ್ ಹೊಂದಿರುವುದಿಲ್ಲ. ಹೀಗಾಗಿ ಹೆಚ್ಚಿನ ಜನರೊಂದಿಗೆ ಚೆನ್ನಾಗಿ ಮಾತನಾಡುತ್ತಾರೆ. ಇವರು ತಮ್ಮ ಜೀವನ ಸಂಗಾತಿಯಲ್ಲಿ ಕಾಣಲು ಬಯಸುವ ವ್ಯಕ್ತಿತ್ವದ ಲಕ್ಷಣಗಳು ಹೀಗಿವೆ.

ಜೀವನದ ಲೆಕ್ಕ ತಪ್ಪದ ಮಿಥುನ ರಾಶಿಯವರ ಬಗ್ಗೆ ನಿಮಗೆಷ್ಟು ಗೊತ್ತು? | Gemini zodiac  sign complete details according to Vedic astrology - Kannada Oneindia

ಬೆಚ್ಚಗಿನ ಸ್ವಭಾವ
ಮಿಥುನ ರಾಶಿಯವರ ಹೃದಯದಲ್ಲಿ ತುಂಬಾ ಪ್ರೀತಿ ಇರುತ್ತದೆ. ಇವರು ತಮ್ಮ ಹತ್ತಿರದವರು ಮತ್ತು ಪ್ರೀತಿಪಾತ್ರರಿಗೆ ಒಳ್ಳೆಯದನ್ನು ಬಯಸುತ್ತಾರೆ ಮತ್ತು ಅವರ ಸಂಬಂಧಗಳನ್ನು ಗೌರವಿಸುತ್ತಾರೆ. ಇವರು ತಮ್ಮ ಜೀವನ ಸಂಗಾತಿಯೂ ತಮ್ಮಂತೆ ಬೆಚ್ಚಗಿನ ಸ್ವಭಾವದವರಾಗಿರಬೇಕು, ದಯೆ ತೋರಬೇಕು ಮತ್ತು ಪ್ರೀತಿಸಬೇಕು ಎಂದು ಬಯಸುತ್ತಾರೆ. ಕಠಿಣ ಸ್ವಭಾವದವರನ್ನು, ಒರಟಾಗಿ ಮಾತಾಡುವವರನ್ನು, ಸಿಕ್ಕಾಪಟ್ಟೆ ಶಿಸ್ತು ಬಯಸುವವರನ್ನು ಇಷ್ಟಪಡುವುದಿಲ್ಲ.

ಸುಲಭವಾಗಿ ಸಿಗುವುದು
ಮಿಥುನ ರಾಶಿಯವರಿಗೆ ಯಾವುದೇ ಹಮ್ಮು ಬಿಮ್ಮುಗಳಿಲ್ಲ. ಅವರು ವಿಷಯಗಳನ್ನು ನೇರವಾಗಿ, ಇದ್ದುದನ್ನು ಇದ್ದಂತೆ ತೆಗೆದುಕೊಳ್ಳುತ್ತಾರೆ. ಆರಾಮವಾಗಿ, ಸುಲಭವಾಗಿ, ಸರಳವಾಗಿ ಬದುಕಲು ಇಷ್ಟಪಡುತ್ತಾರೆ. ತಮ್ಮ ಬೆಟರ್ ಹಾಫ್ ವಿಷಯಕ್ಕೆ ಬಂದಾಗ, ಮಿಥುನ ರಾಶಿಯವರು ತಮ್ಮಂತೆಯೇ ಮುಕ್ತ ಚೈತನ್ಯ ಮತ್ತು ಗಡಿಬಿಡಿಯಿಲ್ಲದ ವ್ಯಕ್ತಿಗಳು ಜೊತೆಗೆ ಇರಬೇಕೆಂದು ಬಯಸುತ್ತಾರೆ. ಇವರ ಫೋನ್ ಕಾಲ್‌ಗಳಿಗೆ ಕೂಡಲೇ ಉತ್ತರಿಸುವವರು, ಇವರು ಕರೆದಾಗ ನಾನು ಬ್ಯುಸಿ ಎಂದು ಬಡಬಡಾಯಿಸದ ಜನರು ಇವರಿಗೆ ಇಷ್ಟ.

ಕುತೂಹಲದವರು
ಈ ರಾಶಿಗೆ ಸೇರಿದ ಜನರು ಕುತೂಹಲದಿಂದ ಕೂಡಿರುತ್ತಾರೆ. ಅವರು ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾರೆ. ಬೌದ್ಧಿಕ ಆಸಕ್ತಿ ಹೆಚ್ಚು. ಹೆಚ್ಚು ಕಲಿಯಲು ಸದಾ ಉತ್ಸುಕರಾಗಿರುತ್ತಾರೆ. ಇವರು ತಮ್ಮ ಜೀವನ ಸಂಗಾತಿಯು ಉತ್ಸಾಹದಿಂದ ಮತ್ತು ಜಿಜ್ಞಾಸೆಯಿಂದ ಕೂಡಿರಬೇಕೆಂದು ಬಯಸುತ್ತಾರೆ. ಜ್ಞಾನಪ್ರಧಾನತೆ ಇವರ ಗುಣ ಆದ್ದರಿಂದ, ಜ್ಞಾನದ ಹಸಿವು ತಮ್ಮ ಸಂಗಾತಿಯಲ್ಲೂ ಇರುವುದನ್ನು ಇಷ್ಟಪಡುತ್ತಾರೆ. ಹೀಗಿದ್ದರೆ ಪರಸ್ಪರ ಸಂಗಾತಿಗಳಾಗಿ ಮನಸ್ಸನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎಂದುಕೊಳ್ಳುತ್ತಾರೆ.

ಮಿಥುನ ರಾಶಿ ಭವಿಷ್ಯ 2022 - Gemini Yearly Horoscope 2022 in Kannada

ಅಭಿವ್ಯಕ್ತಿಶೀಲತೆ
ಮಿಥುನ ರಾಶಿಯವರು ತಮ್ಮ ಹೃದಯದಲ್ಲಿರುವುದನ್ನು ಹೇಳುತ್ತಾರೆ. ಅವರು ತಮ್ಮ ಭಾವನೆಗಳ ಬಗ್ಗೆ ಮುಕ್ತ ಧ್ವನಿಯಾಗಿರುತ್ತಾರೆ ಮತ್ತು ಅವುಗಳನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಅವರು ತಮ್ಮ ಭಾವಿ ಜೀವನ ಸಂಗಾತಿ ಅವರಂತೆಯೇ ಅಭಿವ್ಯಕ್ತಿ ಪರಿಪೂರ್ಣರಾಗಿರಬೇಕು ಎಂದು ಬಯಸುತ್ತಾರೆ. ಇವರು ತಮ್ಮ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಭಯ ಅಥವಾ ಹಿಂಜರಿಕೆಯ ಪ್ರಜ್ಞೆಯನ್ನು ಅನುಭವಿಸುವುದಿಲ್ಲ.

ಇದನ್ನೂ ಓದಿ >>>  ಇಂದಿನ ಮಧ್ಯರಾತ್ರಿ ಇಂದ 512 ವರ್ಷಗಳ ನಂತರ ಎಂಟು ರಾಶಿಯವರಿಗೆ ಅದೃಷ್ಟ...

ಸಾಂಗತ್ಯದ ಬಯಕೆ
ತಮ್ಮ ಸಂಗಾತಿ ರೊಮ್ಯಾನ್ಸ್ ಅಥವಾ ಲೈಂಗಿಕ ಬಯಕೆಗಳಲ್ಲಿ ತಮಗೆ ಸೂಕ್ತ ಸಾಂಗತ್ಯ ತೋರಬೇಕು ಎಂದು ಇವರು ಬಯಸುತ್ತಾರೆ. ಸೆಕ್ಸ್‌ನಲ್ಲಿ ವೈವಿಧ್ಯಮಯ ಆಸಕ್ತಿಗಳನ್ನು ಹೊಂದಿರುತ್ತಾರೆ ಮತ್ತು ವಿವಿಧತೆಯನ್ನು ಅಪೇಕ್ಷಿಸುತ್ತಾರೆ. ಭಾವಿ ಸಂಗಾತಿಯಲ್ಲಿ ಲೈಂಗಿಕ ಹಸಿವು ಇರುವುದನ್ನು ಬಯಸುತ್ತಾರೆ.

ಹಣಕಾಸು ಮುಕ್ತ
ಹಣಕಾಸಿನ ವಿಚಾರದಲ್ಲಿ ಸಂಗಾತಿಯ ಕೆಲಸ, ಪರ್ಸ್ ಇತ್ಯಾದಿಗಳಲ್ಲಿ ಹಸ್ತಕ್ಷೇಪ ಮಾಡಲು ಇವರು ಇಷ್ಟಪಡುವುದಿಲ್ಲ. ಹಾಗೇ ತಮ್ಮ ಹಣಕಾಸಿನಲ್ಲಿ ಸಂಗಾತಿ ಕೈಯಾಡಿಸುವದನ್ನೂ ಇವರು ಇಷ್ಟಪಡುವುದಿಲ್ಲ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...