ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೊಗಳು ಪ್ರತಿದಿನ ವೈರಲ್ ಆಗುತ್ತವೆ. ವಿಶೇಷವಾಗಿ ಜನರು ನೃತ್ಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನೋಡಲು ಇಷ್ಟಪಡುತ್ತಾರೆ. ಅಂತರ್ಜಾಲದಲ್ಲಿ ನೃತ್ಯ ಮಾಡುತ್ತಿರುವ ದೃಶ್ಯಗಳನ್ನು ಪೋಸ್ಟ್ ಮಾಡುವ ಮುಖಾಂತರ ಹಲವು ಜನರು ರಾತ್ರೋರಾತ್ರಿ ಪ್ರಸಿದ್ಧಿ ಗಳಿಸಿದ್ದಾರೆ. ಅಂಥದ್ದೇ ಒಂದು ವಿಡಿಯೊ ಈಗ ಟ್ರೆಂಡ್ ಆಗುತ್ತಿದ್ದು, ಒಬ್ಬ ವ್ಯಕ್ತಿ ಪಾಪ್ ಸ್ಟಾರ್ ಮೈಕೆಲ್ ಜಾಕ್ಸನ್ರಂತೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಇದರಲ್ಲಿ ನೃತ್ಯ ಮಾಡುತ್ತಿರುವ ವ್ಯಕ್ತಿಯ ಚಲನವಲನಗಳು ಥೇಟ್ ಮೈಕಲ್ ಜಾಕ್ಸನ್ರಂತಿದೆ. ಆದ್ದರಿಂದಲೇ ನೆಟ್ಟಿಗರು ಅವರನ್ನು ‘ದೇಸಿ ಮೈಕಲ್ ಜಾಕ್ಸನ್’ ಎಂದು ಕರೆದಿದ್ದಾರೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ಹಲವಾರು ಜನ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ದರಿಂದಲೇ ಈ ದೇಸಿ ಮೈಕಲ್ ಜಾಕ್ಸನ್ ಎಲ್ಲೆಡೆ ಸಖತ್ ಸುದ್ದಿಯಾಗಿದ್ದಾರೆ.
ವೈರಲ್ ಆದ ವಿಡಿಯೋ ಕ್ಲಿಪ್ನಲ್ಲಿ, ಮೈಕಲ್ ಜಾಕ್ಸನ್ ಅವರ ಸೂಪರ್ ಹಿಟ್ ಹಾಡೊಂದಕ್ಕೆ ವ್ಯಕ್ತಿ ನೃತ್ಯ ಮಾಡುತ್ತಿದ್ದಾರೆ. ಮೊದಲಿಗೆ ತಮಾಷೆಯಂತೆ ಕಾಣುವ ಈ ನೃತ್ಯ, ನಂತರದಲ್ಲಿ ಅಚ್ಚರಿ ಹುಟ್ಟಿಸುತ್ತೆದ. ಕಾರಣ, ಆ ವ್ಯಕ್ತಿಯ ನೃತ್ಯದ ಪಟ್ಟುಗಳಿಗೆ ಎಂಥವರೂ ತಲೆದೂಗಲೇ ಬೇಕು. ಮಮೈಕಲ್ ಜಾಕ್ಸನ್ ಸ್ಟೈಲ್ ಹಾಗೂ ತಮ್ಮದೇ ಶೈಲಿಯನ್ನು ಮಿಶ್ರಣ ಮಾಡಿ ಅದ್ಭುತವಾಗಿ ನೃತ್ಯ ಮಾಡುತ್ತಿರುವ ವ್ಯಕ್ತಿಯ ವಿಡಿಯೊ ಇಲ್ಲಿದೆ.
ಈ ವಿಡಿಯೋ ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಹಲವರು ಮೆಚ್ಚುಗೆ ಸೂಚಿಸುವ ಕಾಮೆಂಟ್ ಕೂಡ ಮಾಡಿದ್ದು, ‘ನಿಜವಾಗಿಯೂ ಆ ಸಹೋದರ ಅದ್ಭುತ ನೃತ್ಯ ಮಾಡಿದ್ದಾರೆ’ ಎಂದು ಬರೆದಿದ್ದಾರೆ. ಮತ್ತೋರ್ವರು, ‘ತುಂಬಾ ಉತ್ಸಾಹದಿಂದ ನೃತ್ಯ ಮಾಡಿದ್ದಾರೆ’ ಎಂದಿದ್ದಾರೆ. ಹೆಚ್ಚಿನ ಜನರು ಎಮೋಜಿಗಳ ಮುಖಾಂತರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
View this post on Instagram