ಮೈಕಲ್ ಜಾಕ್ಸನ್ ಡ್ಯಾನ್ಸ್ ಅನ್ನು ಅದ್ಭುತವಾಗಿ ಮಾಡಿದ ವ್ಯಕ್ತಿ – ರಸ್ತೆಯಲ್ಲಿ ಕುಣಿದರೂ ಟ್ಯಾಲೆಂಟ್ ಮಾತ್ರ ಶಾಕಿಂಗ್!

ಸೋಶಿಯಲ್ ಮೀಡಿಯಾ ಗಳಲ್ಲಿ ಒಂದನ್ನು ಮೀರಿಸುವಂತೆ ಮತ್ತೊಂದು ವೀಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಅದರಲ್ಲೂ ಕೆಲವೊಂದು ವೀಡಿಯೋಗಳು ತೆರೆ ಮರೆಯ ಪ್ರತಿಭೆಗಳನ್ನು ಜನರ ಮುಂದೆ ತಂದು ಇರಿಸಿ ಅಚ್ಚರಿಯನ್ನು ಮೂಡಿಸಿಬಿಡುತ್ತವೆ. ಅಂತಹದೊಂದು ಅಚ್ಚರಿಯನ್ನು ಮೂಡಿಸುವ ವೀಡಿಯೋ ಈಗ ಭರ್ಜರಿಯಾಗಿ ವೈರಲ್ ಆಗಿದೆ. ಡ್ಯಾನ್ಸ್ ನ ವಿಚಾರ ಬಂದಾಗ ಅಲ್ಲಿ ಡ್ಯಾನ್ಸ್ ಪ್ರಿಯರು ತಪ್ಪದೇ ಮೈಕೆಲ್ ಜಾಕ್ಸನ್ ಹೆಸರನ್ನು ಹೇಳುತ್ತಾರೆ.

ವಿಶ್ವ ಪ್ರಸಿದ್ಧ ಡ್ಯಾನ್ಸರ್ ಆಗಿದ್ದ ಮೈಕಲ್ ಜಾಕ್ಸನ್ ಅನ್ನು ಅಭಿಮಾನಿಸುವ ಅಸಂಖ್ಯಾತ ಮಂದಿ ಡ್ಯಾನ್ಸ್ ಪ್ರಿಯರು ವಿಶ್ವದ ಎಲ್ಲೆಡೆ ಇದ್ದಾರೆ. ಡ್ಯಾನ್ಸ್ ಪ್ರಿಯರ ಆರಾಧ್ಯ ದೈವವೇ ಮೈಕಲ್ ಜಾಕ್ಸನ್ ಎನ್ನುವುದು ಕೂಡಾ ಒಂದು ಪ್ರಚಲಿತವಾದ ಮಾತಾಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋ ಒಂದು ಡ್ಯಾನ್ಸ್ ವೀಡಿಯೋ ಆಗಿದೆ.

ಈ ವೀಡಿಯೋದಲ್ಲಿ ರಸ್ತೆ ಒಂದರಲ್ಲಿ ವ್ಯಕ್ತಿಯೊಬ್ಬರು ಮೈಕಲ್ ಜಾಕ್ಸನ್ ಹಾಡಿಗೆ ಅದ್ಭುತವಾಗಿ ಡಾನ್ಸ್ ಮಾಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಮೈಕಲ್ ಜಾಕ್ಸನ್ ರೀತಿಯಲ್ಲಿ ಭರ್ಜರಿಯಾಗಿ ಸಖತ್ ಸ್ಟೆಪ್ ಗಳನ್ನು ಆ ವ್ಯಕ್ತಿಯು ಹಾಕುತ್ತಿರುವುದು ಅಚ್ಚರಿಯನ್ನು ಮೂಡಿಸುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ ಇಂತಹದೊಂದು ಅಸಾಮಾನ್ಯ ಎನಿಸುವ ಡ್ಯಾನ್ಸ್ ಮಾಡುತ್ತಿರುವುದು ಪ್ರತಿಯೊಬ್ಬರ ಗಮನವನ್ನು ಸೆಳೆದಿದೆ.

ಮೈಕಲ್ ಜಾಕ್ಸನ್ ಡ್ಯಾನ್ಸನ್ನು ಇಷ್ಟೊಂದು ಸುಲಭವಾಗಿ ಮಾಡುತ್ತಿರುವ ವ್ಯಕ್ತಿ ಈಗ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ. ವೈರಲ್ ವೀಡಿಯೋಗೆ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿವೆ. ಟ್ವಿಟರ್ ನಲ್ಲಿ ಸುಬ್ಬರಾವ್ ಹೆಸರಿನ ಖಾತೆಯಲ್ಲಿ ಈ ಸುಂದರವಾದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ವೀಡಿಯೋ ಹಂಚಿಕೊಂಡ ಟ್ವಿಟರ್ ಬಳಕೆದಾರರು ವೀಡಿಯೋ ಶೀರ್ಷಿಕೆಯಲ್ಲಿ, ಮೈಕಲ್ ಜಾಕ್ಸನ್ ನ‌‌‌‌ ಒಂದು ಡ್ಯಾನ್ಸ್ ಕಾರ್ಯಕ್ರಮ ಆಯೋಜಿಸಲು 70 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿತ್ತು. ಆದರೆ ವಿಡಿಯೋ ದಲ್ಲಿರುವ ವ್ಯಕ್ತಿಯು ಕೇವಲ 70 ರೂಪಾಯಿಗಳಲ್ಲಿ ಅದ್ಭುತವನ್ನು ಮಾಡಿದ್ದಾನೆ ಎಂದು ಡ್ಯಾನ್ಸ್ ಮಾಡಿರುವ ವ್ಯಕ್ತಿಯ ಬಗ್ಗೆ ಬಹಳ ಮೆಚ್ಚುಗೆಯ ಮಾತನ್ನು ಹೇಳಿದ್ದಾರೆ.

ಅವರು ಹೇಳಿದ ಮಾತು ಅಕ್ಷರಶಃ ಸತ್ಯವಾಗಿದೆ. ಏಕೆಂದರೆ ಡ್ಯಾನ್ಸ್ ಮಾಡಿರುವ ವ್ಯಕ್ತಿಯ ಕೌಶಲ್ಯ ಅಷ್ಟೊಂದು ಅದ್ಭುತವಾಗಿದೆ. ವೈರಲ್ ಆಗಿರುವ ವಿಡಿಯೋವನ್ನು 17000ಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ ಸುಮಾರು 285 ಜನರು ವಿಡಿಯೋವನ್ನು ರಿಟ್ವೀಟ್ ಮಾಡಿಕೊಂಡು ಶೇರ್ ಮಾಡಿದ್ದಾರೆ. ಇದೇ ವೇಳೆ ಸಹಸ್ರಾರು ಮಂದಿ ವಿಡಿಯೋಗೆ ಲೈಕ್ ಗಳನ್ನು ನೀಡಿದ್ದಾರೆ.

ಇನ್ನೂ ಕೆಲವರು ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಮೆಚ್ಚುಗೆಗಳನ್ನು ನೀಡಿದ್ದಾರೆ. ಕಾಮೆಂಟ್ ಗಳನ್ನು ಮಾಡಿದವರಲ್ಲಿ ಬಹುತೇಕ ಎಲ್ಲರೂ ಕೂಡಾ ಆ ವ್ಯಕ್ತಿಯ ಪ್ರತಿಭೆಯನ್ನು ಅದ್ಭುತ ಎಂದು ಹೊಗಳಿದ್ದಾರೆ. ಇಂತಹ ವ್ಯಕ್ತಿಗಳಿಗೆ ಸರಿಯಾದ ವೇದಿಕೆ ಮತ್ತು ಪ್ರೋತ್ಸಾಹ ಸಿಗಬೇಕು ಎಂದು ಹಾರೈಸಿದ್ದಾರೆ.

ಆ ವಿಡಿಯೊ ಕೆಳಗಿದೆ ನೋಡಿ…

You might also like

Comments are closed.