ಮೇಘನಾರಾಜ್ ಅವರ ಬಾಲ್ಯದ ಕ್ಯೂಟ್ ವಿಡಿಯೋ ಎಷ್ಟು ಮುದ್ದಾಗಿದೆ…

ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದರೂ ತಮ್ಮದೆ ಆದ ಸರಳ ನಟನೆಯಿಂದ ಅಭಿಮಾನಿ ಬಳಗವನ್ನು ಹೊಂದಿರುವವರು ನಟಿ ಮೇಘನಾ ರಾಜ್. ನಟ ಚಿರಂಜೀವಿ ಸರ್ಜಾ ಅವರನ್ನು ವಿವಾಹವಾಗಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾರೆ. ಮಗನೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಮೊದಲ ಬಾರಿಗೆ ಆಚರಿಸಿಕೊಂಡಿದ್ದಾರೆ. ಮೇಘನಾ ರಾಜ್ ಅವರ ಸಿನಿಮಾ ಬಗ್ಗೆ ಹಾಗೂ ಅವರ ಕುಟುಂಬದವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ

ಮೇಘನಾ ರಾಜ್ ಅವರು 1990 ಮೇ ಮೂರರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ನಟಿಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಟಗಾರ, ರಾಜಾಹುಲಿ, ಪುಂಡ ಮುಂತಾದ ಸಿನಿಮಾಗಳಲ್ಲಿ ನಟಿಯಾಗಿ ನಟಿಸಿದ್ದಾರೆ. ಇವರ ತಂದೆಯ ಹೆಸರು ಸುಂದರರಾಜ್, ತಾಯಿಯ ಹೆಸರು ಪ್ರಮೀಳಾ. ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

ಇದೆ ತಿಂಗಳು 3 ರಂದು ತಮ್ಮ ಹುಟ್ಟುಹಬ್ಬವನ್ನು ತಮ್ಮ ಮುದ್ದಿನ ಮಗನೊಂದಿಗೆ ಆಚರಿಸಿಕೊಂಡರು. ಮೇಘನಾ ಅವರ ಹುಟ್ಟುಹಬ್ಬ ಆಚರಿಸಲು ಪತಿ ಚಿರಂಜೀವಿ ಸರ್ಜಾ ಅವರು ಇಲ್ಲದೆ ಇರುವುದು ವಿಷಾದವೆನಿಸುತ್ತದೆ. ಮೇಘನಾ ರಾಜ್ ಅವರು ಕನ್ನಡ ಮಾತ್ರವಲ್ಲದೆ ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೇಘನಾ ಅವರು ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ನಾಲ್ಕಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೇಘನಾ ಅವರು ಸಿನಿಮಾದಲ್ಲಿ ನಟಿಸುವ ಮೊದಲು ಚೈಲ್ಡ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು. ಪತಿ ಚಿರಂಜೀವಿ ಸರ್ಜಾ ನಿಧನರಾದ ನಂತರ ಮಗು ಜನಿಸಿದ್ದು, ಮಗುವಿನ ಪಾಲನೆಯಲ್ಲಿ ತೊಡಗಿದ್ದಾರೆ, ಇತ್ತೀಚೆಗೆ ಅವರು ಸಿನಿಮಾಗಳಲ್ಲಿ ನಟಿಸಿಲ್ಲ.

ತಮ್ಮ ಹುಟ್ಟುಹಬ್ಬದ ದಿನದ ಹಿಂದಿನ ದಿನವಷ್ಟೆ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮೂರನೆ ಮದುವೆ ವಾರ್ಷಿಕೋತ್ಸವವನ್ನು ಪತಿ ಚಿರಂಜೀವಿ ಸರ್ಜಾ ಇಲ್ಲದೆ ಆಚರಿಸಿಕೊಂಡರು. ಮೇಘನಾ ಅವರು ತಮ್ಮ ಮಗ ಚಿರಂಜೀವಿ ಸರ್ಜಾ ಅವರ ಫೋಟೋವನ್ನು ಟಚ್ ಮಾಡುತ್ತಿರುವ ದೃಶ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಅಲ್ಲದೆ ಪತಿ ಚಿರುಗೆ ಮರಳಿ ಬಾ ಎಂಬ ಭಾವನಾತ್ಮಕ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು, ಕನ್ನಡ ಚಿತ್ರರಂಗದ ಕಲಾವಿದರು,

ತಂತ್ರಜ್ಞರು ಮೇಘನಾ ರಾಜ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಮೇಘನಾ ಅವರು ತಮ್ಮ ಹುಟ್ಟುಹಬ್ಬವನ್ನು ಮೊದಲ ಬಾರಿಗೆ ಮಗನೊಂದಿಗೆ ಆಚರಿಸಿಕೊಂಡು ಸಂತೋಷಪಟ್ಟಿದ್ದಾರೆ. ಅವರ ಬಾಲ್ಯದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ವಿಷ್ಣುವರ್ಧನ್, ರಾಜಕುಮಾರ್ ಅವರೊಂದಿಗಿನ ಫೋಟೋಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ನೋಡಬಹುದಾಗಿದೆ. ಮೇಘನಾ ರಾಜ್ ಅವರಿಗೆ ಚಿರು ಸರ್ಜಾ ಅವರ ನಿಧನದ ದುಃಖ ಸಹಿಸಲು ಶಕ್ತಿ ನೀಡಲಿ, ಮಗನೊಂದಿಗೆ ಸಂತೋಷದ ದಿನಗಳನ್ನು ಅನುಭವಿಸಲಿ ಎಂದು ಆಶಿಸೋಣ.

You might also like

Comments are closed.