ಮೇಘನಾ ಹಾಗೂ ಚಿರು ಯಾವಾಗಲೂ ಒಟ್ಟಾಗಿ ವರ್ಕೌಟ್ ಮಾಡುತ್ತಿದ್ದರು. ನಿತ್ಯ ಮುಂಜಾನೆ ಇಬ್ಬರೂ ಜಿಮ್ನಲ್ಲಿ ಬೆವರು ಹರಿಸುತ್ತಿದ್ದರು. ಈ ವರ್ಕೌಟ್ ವಿಡಿಯೋ ಈಗ ವೈರಲ್ ಆಗುತ್ತಿದೆ.
ಜೂನ್ ಏಳರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟಿದ್ದರು. ಹಾಯಾಗಿ ಓಡಾಡಿಕೊಂಡಿದ್ದ ಅವರನ್ನು ಕಳೆದುಕೊಂಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿತ್ತು. ಚಿರು ಕೊನೆಯುಸಿರೆಳೆವಾಗ ಮೇಘನಾ ಐದು ತಿಂಗಳ ಗರ್ಭಿಣಿ ಎನ್ನುವ ವಿಚಾರ ತಿಳಿದಮೇಲಂತೂ ಅಭಿಮಾನಿಗಳು ಮತ್ತಷ್ಟು ಮರುಕ ಹೊರ ಹಾಕಿದ್ದರು.
ಮೇಘನಾ-ಚಿರು ಸದಾ ಒಟ್ಟಿಗೇ ಇರುತ್ತಿದ್ದರು. ಸರ್ಜಾ ಕುಟುಂಬ ಫಿಟ್ನೆಸ್ ವಿಚಾರದಲ್ಲಿ ಎತ್ತಿದ ಕೈ. ಅರ್ಜುನ್ ಸರ್ಕಾ, ಚಿರು, ಧ್ರುವ ಸರ್ಜಾ, ಮೇಘನಾ ರಾಜ್ ಫಿಟ್ನೆಸ್ಗೆ ಹೆಚ್ಚು ಒತ್ತು ನೀಡಿದವರು. ಹೀಗಾಗಿ ನಿತ್ಯ ಇವರೆಲ್ಲರೂ ಜಿಮ್ನಲ್ಲಿ ಬೆವರು ಹರಿಸುತ್ತಿದ್ದರು.
ಮೇಘನಾ ಹಾಗೂ ಚಿರು ಯಾವಾಗಲೂ ಒಟ್ಟಾಗಿ ವರ್ಕೌಟ್ ಮಾಡುತ್ತಿದ್ದರು. ನಿತ್ಯ ಮುಂಜಾನೆ ಇಬ್ಬರೂ ಜಿಮ್ನಲ್ಲಿ ಬೆವರು ಹರಿಸುತ್ತಿದ್ದರು. ಈ ವರ್ಕೌಟ್ ವಿಡಿಯೋ ಈಗ ವೈರಲ್ ಆಗುತ್ತಿದೆ.