ಮೇಘನಾ ರಾಜ್

ಎರಡನೇ ಮದುವೆ ಆಗು ಅಂತಿದ್ದಾರೆ..ನೆರವಾಗಿ ಮೇಘನಾ ರಾಜ್ ಹೇಳಿದ್ದೆನು ನೋಡಿ..

CINEMA/ಸಿನಿಮಾ

ಮೇಘನಾ ರಾಜ್.. ಸ್ಯಾಂಡಲ್ವುಡ್ ನ ಖ್ಯಾತ ನಟಿ.. ಉದಯೋನ್ಮುಕ ನಟಿಯಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವ ಸಮಯದಲ್ಲಿ ಇದೇ ಚಿತ್ರರಂಗದ ನಟನ ಜೊತೆ ಪ್ರೀತಿ.. ಪ್ರೀತಿ ನಂತರ ಮದುವೆ.. ಸಾವಿರಾರು ಕನಸಿನ ಜೊತೆ ಹೊಸ ಜೀವನದ ಆರಂಭ.. ಆದರೆ ಆ ಹೊಸ ಬದುಕಿನ ಆರಂಭ ಶುರುವಿನಲ್ಲಿಯೇ ಅಂತ್ಯವಾಗಿದ್ದು ನಿಜಕ್ಕೂ ಅವರ ಜೀವನದ ಪರಿಸ್ಥಿತಿ ಕಣ್ಣೀರು ತರಿಸುವಂತಿತ್ತು.. ಅದರಲ್ಲೂ ಚಿರು ಹೋದ ಸಮಯದಲ್ಲಿ ಮೇಘನಾ ರಾಜ್ ಗರ್ಭಿಣಿಯಾಗಿದ್ದು ಅದು ಇನ್ನಷ್ಟು ಸಂಕಟ ತರುವಂತಾಗಿತ್ತು..

ನಾಡಿನ ಕೋಟ್ಯಾಂತರ ಮಂದಿ ಮೇಘನಾಗಾಗಿ ಪ್ರಾರ್ಥಿಸಿದ್ದರು.. ಮಗುವಿಗೆ ಹಾರೈಸಿದ್ದರು.. ಎಲ್ಲರ ಹಾರೈಕೆಯಂತೆಯೇ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದು ಚಿರು ಮತ್ತೆ ಹುಟ್ಟಿ ಬಂದನೆಂದು ಭಾವಿಸಿದರು..

ಚಿರು ಇಲ್ಲದ ನೋವಿನ ಜೊತೆಯೇ ಮಗುವಿನ ಹಾರೈಕೆಯ ಜೊತೆ ವರ್ಷಗಳನ್ನು ಕಳೆದ ಮೇಘನಾ ರಾಜ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುವ ಮೂಲಕ ತಮ್ಮ ವೃತ್ತಿ ಬದುಕಿನ ಹೊಸ ಆರಂಭವನ್ನು ಮಾಡಿದರು.. ಕಿರುತೆರೆಯಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಜಡ್ಜ್ ಆದ ಮೇಘನಾ ರಾಜ್ ಇದೀಗ ಗಿಚ್ಚಿ ಗಿಲಿಗಿಲಿ ಶೋನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.. ಜೊತೆಗೆ ಸಾಲು ಸಾಲು ಸಿನಿಮಾಗಳು ಜಾಹಿರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ..

ಇನ್ನು ಈ‌ ನಡುವೆ ಇದೀಗ ಮೇಘನಾ ರಾಜ್ ತಮ್ಮ ಎರಡನೇ ಮದುವೆ ಬಗ್ಗೆ ಮಾತನಾಡಿದ್ದು ನನ್ನ ಜಿವನದ ನಿರ್ಧಾರ ನನ್ನದು ಎಂದಿದ್ದಾರೆ.. ಹೌದು ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಚಿರುವನ್ನು ಮೇಘನಾ ಸಂಪೂರ್ಣವಾಗಿ ಮರೆತು ಎಂಜಾಯ್ ಮಾಡುತ್ತಿದ್ದಾರೆ ಎಂದು ಟ್ರೋಲ್ ಮಾಡಿದ್ದರು.. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಮೇಘನಾ ರಾಜ್ ನಾನು ಯಾರಿಗೂ ಯಾವುದನ್ನೂ ಸಾಬೀತು ಮಾಡಬೇಕಿಲ್ಲ ಎಂದಿದ್ದರು..

ಅಷ್ಟೇ ಅಲ್ಲದೇ ಅಯ್ಯೋ ಈಗ ನಿಮಗೆ ಚಿರು ನೆನಪಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದು ಅದಕ್ಕೆ ಉತ್ತರ ನೀಡಿದ ಮೇಘನಾ ರಾಜ್ “ಸಹೋದರ ನಾನು ಅವನನ್ನು ನೆನಪಿಸಿಕೊಳ್ಳುತ್ತೇನೆಯೋ ಇಲ್ಲವೋ ಎಂಬುದನ್ನು ನಾನು ಯಾರುಗೂ ಸಾಬೀತು ಮಾಡಬೇಕಿಲ್ಲ.. ಅವನ ಬಗ್ಗೆ ಯೋಚಿಸುವುದು ನನಗೆ ಬಿಟ್ಟಿದ್ದು.. ನಾನು ಇದನ್ನು ಮಾಡುತ್ತಿದ್ದೇನೆ.. ಇದನ್ನು ತಿನ್ನುತ್ತಿದ್ದೇನೆ.. ನಾನು ಏನು ಮಾಡುತ್ತಿದ್ದೇನೆ.. ನಾನು ಈ ವ್ಯಕ್ತಿಯನ್ನು ಹಿಂಬಾಲಿಸುತ್ತಿದ್ದೇನೆ.. ಅಥವಾ ನಾನು ಈ ವ್ಯಕ್ತಿಯನ್ನು ಹಿಂಬಾಲಿಸುತ್ತಿದ್ದೇನೆ ಎಂದು ಪ್ರತಿದಿನ ಒಂದು ಪೋಸ್ಟ್ ಹಾಕಬೇಕಿಲ್ಲ.. ಆ ರೀತಿ ಮಾಡುತ್ತೇನೆ ಎಂದು ನಾನು ಯಾರ ಜೊತೆಯೂ ಕಾನೂನಿನ ಒಪ್ಪಂದ ಮಾಡಿಕೊಂಡಿಲ್ಲ.. ಎಂದಿದ್ದರು.. ಅಷ್ಟೇ ಅಲ್ಲದೇ ಮಾದ್ಯಮದ ಜೊತೆ ತಮ್ಮ ಎರಡನೇ ಮದುವೆ ಬಗ್ಗೆಯೂ ಮಾತನಾಡಿದ್ದಾರೆ..

ಹೌದು ಬಾಲಿವುಡ್ ನ ಬಬಲ್ ಗೆ ಮೇಘನಾ ರಾಜ್ ಸಂದರ್ಶನ ನೀಡಿದ್ದು ಅದರಲ್ಲಿ ಎರಡನೇ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದರು.‌. “ನನಗೆ ಮತ್ತೊಂದು ಮದುವೆಯಾಗು ಎಂದು ಶಿಫಾರಸ್ಸು ಮಾಡುವ ಜನರ ಒಂದು ಗುಂಪೂ ನನ್ನ ಸುತ್ತ ಇದೆ.. ಮಗನನ್ನು ನೋಡಿಕೊಂಡು ಒಂಟಿಯಾಗಿ ಇರಿ ಎಂದು ಸಹ ಹೇಳುವ ಜನರ ಒಂದು ವರ್ಗವೂ ನನ್ನ ಜೊತೆ ಇದೆ.. ನಮ್ಮ ಸಮಾಜದ ಮನಸ್ಥಿತಿಯು ನನಗೆ ಮದುವೆಯಾಗಲು ಸಲಹೆ ನೀಡುವ ಜನರ ಗುಂಪಾಗಿದೆ ಎಂದು ನಾನು ಭಾವಿಸುತ್ತೇನೆ.. ನೀವು ನಿಮ್ಮ ಮಗನೊಂದಿಗೆ ಸಂತೋಷವಾಗಿರಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳುವ ಜನರ ಗುಂಪೊಂದು ಇದೆ.. ಹಾಗಾದರೆ ನಾನು ಯಾರ ಮಾತು ಕೇಳಲಿ..

ಎಲ್ಲ ಗದ್ದಲದ ನಡುವೆಯೂ ನಾನು ನನ್ನ ಮಾತನ್ನು ಕೇಳಲು ಆಯ್ಕೆ ಮಾಡಿಕೊಂಡಿದ್ದೇನೆ.. ಜಗತ್ತು ಏನೇ ಹೇಳಿದರೂ ಸಹ ನೀನು ನಿನ್ನ ಮಾತನ್ನು ಮಾತ್ರ ಕೇಳು ಎಂದು ಚಿರು ಯಾವಾಗಲೂ ಹೇಳುತ್ತಿದ್ದರು.. ನಾನು ಸಹ ಅದನ್ನೇ ಮಾಡುತ್ತಿದ್ದೇನೆ ಎಂದಿದ್ದಾರೆ.. ಎರಡನೇ ಮದುವೆ ವಿಚಾರವನ್ನು ಆ ಪ್ರಶ್ನೆಯನ್ನು ನಾನು ಇನ್ನೂ ನನಗೆ ನಾನು ಕೇಳಿಕೊಂಡಿಲ್ಲ.. ಚಿರು ಬಿಟ್ಟು ಹೋದ ಒಂದು ವಿಷಯ ಎಂದರೆ ಅದು ವ್ಯಕ್ತಿ ಒಬ್ಬ ಬದುಕಬೇಕಾದ ರೀತಿ.. ಹಾಗಾಗಿ ನಾನು ನಾಳೆ ಏನಾಗುತ್ತದೆ ಎಂದು ನಾನು ಯೋಚಿಸುವುದಿಲ್ಲ.. ಒಂದೆರೆಡು ದಿನಗಳ ನಂತರ ನನ್ನ ಜೀವನ ಏನಾಗಲಿದೆ ಎಂದು ನಾನು ಯೋಚಿಸುವುದಿಲ್ಲ.. ಬದಲಿಗೆ ಈಗಿನ ಬಗ್ಗೆ ಮಾತ್ರ ನಾನು ಯೋಚನೆ ಮಾಡುತ್ತೇನೆ ಎಂದಿದ್ದಾರೆ..
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.