ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘನಾ ರಾಜ್, ಸದ್ಯ ಅಭಿಮಾನಿಗಳಿಗೆ ಶುಭ ಸುದ್ಧಿ ನೀಡಿದ್ದಾರೆ.
ಹೌದು ಮೇಘನಾ ರಾಜ್ ಅವರನ್ನು ಮತ್ತೆ ತೆರೆಯ ಮೇಲೆ ನೋಡಬೇಕು ಎಂದು ಅಭಿಮಾನಿಗಳು ಆಸೆ ಪಟ್ಟಿದ್ದರು. ಇದಕ್ಕೆ ಈಗ ಕಾಲ ಕೂಡಿಬಂದಿದ್ದು ಮೇಘನಾ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.
ಈ ಕುರಿತು ಸ್ವತಃ ಸೋಶಿಯಲ್ ಮಿಡಿಯಾದಲ್ಲಿ ಮೇಘನಾ ಸಂತಷ ಹಂಚಿಕೊಂಡಿದ್ದಾರೆ. ಇನ್ನೂ ಮೇಘನಾ ರಾಜ್ ಅವರ ಹೊಸ ಸಿನಿಮಾದ ಹೆಸರು ಶಬ್ದ. ಮೇಘನಾ ಅವರಿಗೆ ರಾಜ್ಯ ಪ್ರಶಸ್ತಿ ತಂದುಕೊಟ್ಟ ‘ಇರುವುದೆಲ್ಲವ ಬಿಟ್ಟು’ ಸಿನಿಮಾ ತಂಡದ ಜೊತೆಗೆ ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ತಂಡದ ಜೊತೆ ಕೆಲಸ ಮಾಡುವುದು ವರ ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿ ಮೇಘನಾ ರಾಜ್ ಅವರ ಅಭಿಮಾನಿಗಳಿಗೆ ಬಹಳ ಸಂತೋಷದ ತಂದಿದೆ. ಮತ್ತೊಮ್ಮೆ ಮೇಘನಾ ಅವರನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
View this post on Instagram