ಮೈದುನ ಧೃವ ಸರ್ಜಾಗೆ ಮಾತು ಕೊಟ್ಟ ಮೇಘನಾ ರಾಜ್..ಅದಕ್ಕೇ ಹೇಳೋದು ಅತ್ತಿಗೆ ತಾಯಿಯಂತೆ ಎಂದು..

CINEMA/ಸಿನಿಮಾ Today News / ಕನ್ನಡ ಸುದ್ದಿಗಳು

ಸರ್ಜಾ ಕುಟುಂಬ ಈ ವರ್ಷ ಸಾಕಷ್ಟು ನೋವುಗಳನ್ನು ಅನುಭವಿಸಿ ಇದೀಗ ಚೇತರಿಸಿಕೊಳ್ಳುತ್ತಿದೆ.. ಮೇಘನಾ ವಾಸ್ತವ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾರೆ.. ಸುಂದರ್ ರಾಜ್ ಅವರು ಹಾಗೂ ಪ್ರಮಿಳಾ ರಾಜ್ ಅವರು ಮಗಳ ಸಂತೋಷವನ್ನು ಮಗುವಿನ ಮೂಲಕ ಕಾಣಲು ಕಾತುರರಾಗಿದ್ದಾರೆ.. ಇನ್ನು ಧೃವ ಸರ್ಜಾ ಮಾತ್ರ ಅಣ್ಣ ಇಲ್ಲವೆಂಬ ಸತ್ಯವನ್ನು ಒಪ್ಪಿಕೊಳ್ಳಲು ಕಷ್ಟ ಪಡುತ್ತಿರುವುದು ಮೊನ್ನೆ ಮೇಘನಾ ಅವರ ಸೀಮಂತ ಶಾಸ್ತ್ರದಲ್ಲಿ ಅಣ್ಣನ ಫೋಟೋ ಕಂಡೊಡನೆ ಕಣ್ಣೀರಿಡುತ್ತಾ ನಿಂತ ಜಾಗದಿಂದ ಹೊರ ನಡೆದುಬಿಟ್ಟದ್ದ ಕಂಡರೆ ಅರ್ಥವಾಗುತ್ತದೆ..

ಈ ಎಲ್ಲಾ ನೋವುಗಳಿಗೆ ಒಂದೇ ಪರಿಹಾರವೆಂದರೆ ಅದು ಚಿರು ಮತ್ತೊಮ್ಮೆ ಹುಟ್ಟಿ ಬಂದು ಆ ಕುಟುಂಬದವರ ಮುಖದಲ್ಲಿ ಸಂತೋಷ ತರಿಸುವುದು.. ಹೌದು ಇನ್ನೇನು ಕೆಲ ದಿನಗಳಲ್ಲಿ ಮೇಘನಾರ ಒಡಲಲ್ಲಿ ಚಿರುವಿನ ಪ್ರತಿರೂಪದ ಜನನವಾಗಲಿದ್ದು ಕುಟುಂಬ ಮಾತ್ರವಲ್ಲದೇ ಅಭಿಮಾನಿಗಳು ಸಹ ಮುದ್ದು ಕಂದನ ನೋಡಲು ಕಾತುರರಾಗಿದ್ದು ತಾಯಿ ಹಾಗೂ ಮಗುವಿಗೆ ಆರೋಗ್ಯವಾಗಿರಲೆಂದು ಹಾರೈಸಿದ್ದಾರೆ..

meghana | Asin

ಇನ್ನು ಇಂದು ಧೃವ ಸರ್ಜಾರ ಹುಟ್ಟುಹಬ್ಬವಿದ್ದು ಅಣ್ಣನಿಲ್ಲದ ಕಾರಣ ಹುಟ್ಟುಹಬ್ಬದ ಆಚರಣೆ ಬೇಡವೆಂದರು.. ಆದರೆ ಈ ದಿನ ಮೇಘನಾ ರಾಜ್ ಅವರು ಮೈದುನನಿಗೆ ಶುಭಾಶಯ ತಿಳಿಸಿ ಮಾತು ನೀಡಿದ್ದಾರೆ.. ಹೌದು ನಿನ್ನೆಯೇ ತಮ್ಮ ಬೇಬಿ ಶೋವರ್ ಕಾರ್ಯಕ್ರಮದಲ್ಲಿ ಮೈದುನನ ಹುಟ್ಟುಹಬ್ಬ ಆಚರಿಸಿ ಚಿರುವಿನ ಕರ್ತವ್ಯವನ್ನು ಸಹ ಮೇಘನಾ ಅವರೇ ನಿಭಾಯಿಸಿದ್ದರು..

ಇನ್ನು ಇಂದು ಸಾಮಾಜಿಕ ಜಾಲತಾಣದಲ್ಲಿ ಧೃವ ಸರ್ಜಾರ ಫೋಟೋ ಹಂಚಿಕೊಂಡು ಅವರಿಗೆ ಶುಭಾಶಯದ ಜೊತೆಗೆ ಮಾತು ನೀಡಿದ್ದಾರೆ.. ಹೌದು ಮೊದಲಿನಿಂದಲೂ ಚಿರು ಮೇಘನಾ ಹಾಗೂ ಧೃವ ಸರ್ಜಾ ಮೂವರೂ ಸಹ ಸ್ನೇಹಿತರಂತೆ ಇದ್ದವರು.. ಸದಾ ಜೊತೆಯಾಗಿಯೇ ಇದ್ದವರು.. ಆದರೆ ಚಿರು ಇಲ್ಲವಾದ ನಂತರ ಧೃವ ಅತ್ತಿಗೆಗೆ ಮೈದುನನಾಗಿ ಮಾತ್ರವಲ್ಲ ಮಗನಾಗಿ ಶಕ್ತಿ ತುಂಬಿದ್ದಾರೆ ಎನ್ನಬಹುದು.. ಎಲ್ಲಾ ಕಷ್ಟದ ಸಮಯದಲ್ಲಿ ಮೇಘನಾರ ಬೆನ್ನೆಲುಬಾಗಿ ನಿಂತಿದ್ದಾರೆ.. ಇದೀಗ ಮೇಘನಾ ಅವರೂ ಸಹ ಧೃವ ರಿಗೆ ಮಾತು ನೀಡಿದ್ದಾರೆ.. ಇಲ್ಲಿದೆ ನೋಡಿ ಮೇಘನಾ ಅವರು ಆಡಿದ ಮಾತುಗಳು..

“ನೀನು ಹೇಗೆ ಗಟ್ಟಿಯಾಗಿ ಸದಾ ನನ್ನ ಜೊತೆಯಾಗಿ ನಿಂತಿರುವೆಯೋ.. ಅದೇ ರೀತಿ ನಾನು ಸದಾ ನಿನ್ನ ಜೊತೆಯಾಗಿ ನಿಲ್ಲುವೆ.. ಇದು ನಾನು ನಿನಗೆ ಕೊಡುತ್ತಿರುವ ಮಾತು.. ನನ್ನ ಪ್ರೀತಿಯ ಬರ್ತ್ ಡೇ ಬಾಯ್.. ನಾನು ನಿನಗೆ ಸಂತೋಷ ಮಾತ್ರ ಸಿಗಲಿ ಎಂದು ಬೇಡುವೆ.. ಚಿರು ನಗುತ್ತಿದ್ದ ರೀತಿಯಲ್ಲಿಯೇ ಸದಾ ನಗುನಗುತಾ ಇರು.. ಹುಟ್ಟು ಹಬ್ಬದ ಶುಭಾಶಯಗಳು ಬಿಲ್” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.‌

Meghana-raj-in-Jakkamma-036 | vasanth_pits270 | Flickr

ಅದಕ್ಕೇ ಇರಬೇಕು ಅತ್ತಿಗೆ ಎಂದರೆ ಮನೆಯ ಎರಡನೇ ತಾಯಿಯ ರೀತಿ ಎನ್ನುವುದು.. ನಿಜಕ್ಕೂ ಚಿರು ಇಲ್ಲದ ಸಮಯದಲ್ಲಿ ಅಣ್ಣ ಅತ್ತಿಗೆ ಇಬ್ಬರ ಪ್ರೀತಿಯನ್ನೂ ಸಹ ಮೇಘನಾ ಅವರು ಒಬ್ಬರೇ ಧೃವರಿಗೆ ನೀಡುತ್ತಿದ್ದು ಧೃವ ಸದಾ ಸಂತೋಷವಾಗಿರುವಂತೆ ಮನತುಂಬಿ ಹಾರೈಸಿದ್ದಾರೆ.. ಇವರ ಈ ಬಾಂಧವ್ಯ ಸದಾ ಕಾಲ ಹೀಗೆ ಇರಲಿ.. ಇನ್ನೇನು ಕೆಲ ದಿನಗಳಲ್ಲಿ ಬರುವ ಆ ಪುಟ್ಟ ಕಂದನಿಗೆ ಚಿಕ್ಕಪ್ಪನಾಗಿ ಎಲ್ಲಾ ಪ್ರೀತಿಯನ್ನು ನೀಡಿ ಆ ಕುಟುಂಬದ ಮುಖದಲ್ಲಿ ಮತ್ತೆ ಸಂತೋಷ ಮೂಡುವಂತಾಗಲಿ.‌.





ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.