ಮೇಘನಾ ರಾಜ್

ನಟಿ ಮೇಘನಾ ರಾಜ್ ಜಿಮ್ ನಲ್ಲಿ ಹೇಗೆ ವರ್ಕೌಟ್ ಮಾಡ್ತಾರೆ ಗೊತ್ತಾ? ವಿಡಿಯೋ ನೋಡಿ.!

CINEMA/ಸಿನಿಮಾ

ಸ್ನೇಹಿತರೆ, ಸ್ಯಾಂಡಲ್ವುಡ್ನ ಟಾಪ್ ನಟಿ ಮೇಘನರಾಜ್ ತಮ್ಮ ಬಾಲ್ಯದಿಂದಲೂ ಕನ್ನಡ ಚಿತ್ರರಂಗದಲ್ಲಿ ಆಡಿ ಬೆಳೆದವರು. ನಿಮಗೆಲ್ಲರಿಗೂ ತಿಳಿದ ಹಾಗೆ ಇವರ ತಂದೆ ತಾಯಿ ಹಿರಿಯ ಕಲಾವಿದರಾದ ಪ್ರಮೀಳಾ ಜೋಷಾಯಿ ಹಾಗೂ ಸುಂದರರಾಜ್ರವರು. ಈ ಇಬ್ಬರು ಖ್ಯಾತ ದಂಪತಿಗಳು 4 ದಶಕಗಳಿಗಿಂತ ಹೆಚ್ಚಿನ ವರ್ಷಗಳ ಕಾಲ ಸ್ಯಾಂಡಲ್ವುಡ್ಗೆ ಸೇವೆ ಸಲ್ಲಿಸಿದ್ದಾರೆ.

ಹಾಗಾಗಿ ಕನ್ನಡ ಚಿತ್ರರಂಗ ಮೇಘನ ರಾಜ್ ಅವರಿಗೆ ಹೊಸದೇನಲ್ಲ ಬಾಲನಟಿಯಾಗಿ ಜೋಕುಮಾರಸ್ವಾಮಿ ನಾಟಕದಲ್ಲಿ ನಟಿಸಿದ ನಂತರ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಲಾಗಿದೆ ಸೈಕಾಲಜಿ ವಿಷಯದಲ್ಲಿ ಪದವಿ ಪಡೆದ ನಂತರ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟರು. ಪುಂಡ ಸಿನಿಮಾದ ಮೂಲಕ ನಾಯಕಿಯಾದ ಮೇಘನರಾಜ್ ನಂತರ ಮಲಯಾಳಂ ಚಿತ್ರರಂಗಕ್ಕೆ ಅದ್ದೂರಿ ಎಂಟ್ರಿಕೊಟ್ಟರು.

ಮಲಯಾಳಂ ಚಿತ್ರದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಯಶಸ್ಸುಗಳಿಸಿದರೂ ಮೇಘನಾ. ನಂತರ ರಾಜಾಹುಲಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ಗೆ ವಾಪಸ್ ಬಂದು, ಆಟಗಾರ, ಇರುವುದೆಲ್ಲವ ಬಿಟ್ಟು, ಕುರುಕ್ಷೇತ್ರಗಳಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಅಲ್ಲದೆ ಕಾಲಿವುಡ್ ಸಿನಿಮಾಗಳಲ್ಲಿಯೂ ಕೂಡ ಮೇಘನರಾಜ್ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಮಲಯಾಳಂ ಮತ್ತು ಕನ್ನಡದಲ್ಲಿ ಇವರಿಗೆ ದೊಡ್ಡ ಫ್ಯಾನ್ ಬೇಸ್ ಇದೆ.

ಮೇಘನ ರಾಜ್ ಹಾಗೂ ಚಿರಂಜೀವಿ ಸರ್ಜಾ ಬಹಳ ವರ್ಷಗಳ ಕಾಲ ಪ್ರೀತಿಸಿ 2 ಕುಟುಂಬದವರನ್ನು ಒಪ್ಪಿಸಿ ಮದುವೆಯಾದರು. ಅನ್ಯೋನ್ಯವಾದ ದಾಂಪತ್ಯ ಜೀವನ ನಡೆಸುತ್ತಿದ್ದರು, ಚಿರು ಮತ್ತು ಮೇಘನ ಇವರಿಬ್ಬರನ್ನು ಜೊತೆಯಾಗಿ ನೋಡುವುದೇ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತೋಷ ತರುತ್ತಿತ್ತು. ವಿಧಿ-ಬರಹವೋ, ದುರದೃಷ್ಟವೋ ಗೊತ್ತಿಲ್ಲ ಈ ಜೋಡಿಯ ಮೇಲೆ ಯಾರದ್ದೋ ಕಣ್ಣು ತಗುಲಿ ಮದುವೆಯಾದ ಎರಡೇ ವರ್ಷಕ್ಕೆ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಮೇಘನ ರಾಜ್ ಅವರನ್ನು ಬಿಟ್ಟು ಬಾರದ ಲೋಕಕ್ಕೆ ಮರಳಿದರು.

ಸದ್ಯ ಮೇಘನ ಬಳಿಗೆ ಬೆಳಕಾಗಿ ಬಂದಿರುವುದು ಅವರಿಬ್ಬರ ಪ್ರೀತಿಯ ಸಂಕೇತ ಜೂನಿಯರ್ ಚಿರು. ಮೇಘನರಾಜ್ ತಮ್ಮ ಇಡೀ ಜೀವನವನ್ನು ಜೂ.ಚಿರುಗೆ ಮೀಸಲಿಟ್ಟಿದ್ದಾರೆ. 9 ತಿಂಗಳು ತುಂಬಿರುವ ಜೂನಿಯರ್ ಚಿರುಗೆ ಹೊಸ ಬಟ್ಟೆಗಳನ್ನು ಹಾಕಿ ಮೇಘನಾ ರಾಜ್ ಫೋಟೋಶೂಟ್ ಮಾಡಿದ್ದಾರೆ. ಅಲ್ಲದೆ ಎಲ್ಲಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನನ್ನು ತಮ್ಮ ಮಗನ ರೂಪದಲ್ಲಿ ನೋಡುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಜೂನಿಯರ್ ಚಿರುವಿನ ಮುದ್ದಾದ ಫೋಟೋಗಳ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ತಾಯಿ ತಲೆತಗ್ಗಿಸುವಂತಹ ಕೆಲಸ ಮಾಡಿದ್ದ ನಟ ರಾಕೇಶ್ ! ಮಾಡಿದ್ದ ಅ 'ಶ್ಲೀಲ ಕೆಲಸ ಏನು...