ನಮಸ್ಕಾರ ಸ್ನೇಹಿತರೆ ಚಿರು ಸರ್ಜಾ ಅವರನ್ನು ಕಳೆದುಕೊಂಡ ನಂತರ ಸಾಕಷ್ಟು ಒಂಟಿಯಾಗಿದ್ದ ಮೇಘನ ರಾಜ್ ನಂತರ ಮತ್ತೆ ಈಗ ಸಿನಿಮಾ ಹಾಗೂ ಕಿರುತೆರೆಯ ಕಾರ್ಯಕ್ರಮಗಳಿಗೆ ಭಾಗಿಯಾಗಲು ಪ್ರಾರಂಭಿಸಿದ್ದಾರೆ. ಜೀವನ ಈಗ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಲು ಆರಂಭಿಸಿದೆ. ಇದರ ನಡುವಲ್ಲಿಯೇ ಮೇಘನರಾಜ್ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೌದು ಗೆಳೆಯರೇ ಮೇಘನಾ ರಾಜ್ ಅವರು ಎರಡನೇ ಮದುವೆ ಅಗಲಿದ್ದಾರೆ ಎಂಬುದಾಗಿ ಎಲ್ಲಾ ಕಡೆ ಸುದ್ದಿಗಳು ಹರಿದಾಡುತ್ತಿವೆ.

ಮೇಘನಾ ರಾಜ್ ಅವರು ಸಂದರ್ಶನ ಒಂದರಲ್ಲಿ ಮಾತನಾಡಿರುವ ಮಾತನ್ನು ಎಲ್ಲರೂ ತಪ್ಪಾಗಿ ಅರ್ಥೈಸಿಕೊಂಡಿದ್ದು ಇದೇ ವಿಚಾರ ಎರಡನೇ ಮದುವೆಯ ಚರ್ಚೆ ಏಳುವಂತೆ ಮಾಡಿದೆ. ಈ ಸಂದರ್ಶನದಲ್ಲಿ ಅವರು ನನ್ನ ಸುತ್ತಮುತ್ತ ಎರಡನೇ ಮದುವೆ ಮಾಡಿಕೋ ಎಂದು ಹೇಳುವವರು ಕೂಡ ಇದ್ದಾರೆ, ಅದೇ ರೀತಿ ರಾಯನ್ ಅನ್ನು ನೋಡಿಕೊಂಡು ಚೆನ್ನಾಗಿರು ಎಂಬುದಾಗಿ ಹೇಳುವವರು ಕೂಡ ಇದ್ದಾರೆ ಎಂದು ಹೇಳುವಾಗ ಸೃಷ್ಟಿಯಾಗಿತ್ತು. ಈ ಸಂದರ್ಶನವನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲವು ಮಂದಿ ಮೇಘನಾ ರಾಜ್ ಎರಡನೇ ಮದುವೆ ಆದರೂ ಕೂಡ ಆಗಬಹುದು ಎನ್ನುವ ಊಹೆಯನ್ನು ಸೃಷ್ಟಿಸಿಕೊಳ್ಳಲು ಬುನಾದಿ ಹಾಕಿತ್ತು. ಇನ್ನೊಂದು ಕಡೆಯಲ್ಲಿ ಮೇಘನಾ ರಾಜ್ ಇದಕ್ಕೆ ಉತ್ತರ ಎಂಬಂತೆ ಎರಡನೇ ಮದುವೆ ಬಗ್ಗೆ ನಾನು ಯೋಚಿಸಿಲ್ಲ ಇಂದು ನಾವು ಹೇಗಿರುತ್ತೇವೆ ನಾಳೆ ಇರುತ್ತೇವೋ ಇಲ್ಲವೋ ಎಂಬುದು ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಆದರೂ ಕೂಡ ಈ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ನಿಂತಿರಲಿಲ್ಲ. ಈಗ ಆ ಎಲ್ಲಾ ಪ್ರಶ್ನೆಗಳಿಗೂ ಮೇಘನ ರಾಜ್ ತಮ್ಮ ಕೈಯಲ್ಲಿ ಪರಮನೆಂಟ್ ಟ್ಯಾಟು ಹಾಕಿಸಿಕೊಳ್ಳುವ ಮೂಲಕ ಉತ್ತರ ನೀಡಿದ್ದಾರೆ. ಹೌದು ಸ್ನೇಹಿತರೆ, ಚಿರು ಹಾಗೂ ರಾಯನ್ ಇಬ್ಬರ ಹೆಸರನ್ನು ಪರಮನೆಂಟ್ ಟ್ಯಾಟು ಹಾಕಿಸಿಕೊಂಡಿರುವ ಮೇಘನ, ನನ್ನ ಜೀವನದಲ್ಲಿ ಇವರಿಬ್ಬರನ್ನು ಬಿಟ್ಟರೆ ಬೇರೆ ಯಾರು ಪ್ರಮುಖರಿಲ್ಲ ಎಂಬುದಾಗಿ ಪರೋಕ್ಷವಾಗಿ ಹೇಳಿದ್ದಾರೆ. ಸದ್ಯಕ್ಕೆ ಅಮೆರಿಕಾದಲ್ಲಿ ಕಾರ್ಯಕ್ರಮ ಒಂದನ್ನು ಅಟೆಂಡ್ ಮಾಡುವ ಸಲುವಾಗಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಮೇಘನಾ ಇನ್ನಷ್ಟು ಹೆಚ್ಚೆಚ್ಚು ಸಿನಿಮಾಗಳಲ್ಲಿ ಹಾಗೂ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ನಿರೀಕ್ಷಿಸಬಹುದಾಗಿದೆ.