ಮೇಘಾ ಶೆಟ್ಟಿ

ಒಂದೇ ಸೀರಿಯಲ್ ನಲ್ಲಿ ನಟಿಸಿ,ಎರಡು ಐಷಾರಾಮಿ ಕಾರುಗಳನ್ನು ಖರೀದಿಸಿದ ಮೇಘಾ ಶೆಟ್ಟಿ! ಇದರ ಬೆಲೆ ಎಷ್ಟು ಗೊತ್ತಾ?

CINEMA/ಸಿನಿಮಾ

ಸ್ನೇಹಿತರೆ, ಜೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆಜೊತೆಯಲಿ ಧಾರಾವಾಹಿ ಎಂದರೆ ನೆನಪಿಗೆ ಬರುವುದೇ ಅನು ಸಿರಿಮನೆ ಹಾಗೂ ಆರ್ಯವರ್ಧನ್ ಜೋಡಿ. ಇವರಿಬ್ಬರ ಕಾಂಬೀನೇಶನ್ ಹಾಗೂ ನಟನೆ ಎಷ್ಟು ಸೊಗಸಾಗಿ ಇದೆಯೆಂದರೆ, ಆರ್ಯವರ್ಧನ್ ಅನುಗಿಂತಲೂ 25 ವರ್ಷ ದೊಡ್ದವನು ಎಂಬುದನ್ನೇ ಎಲ್ಲರೂ ಮರೆತಿದ್ದಾರೆ. ಇನ್ನು ಈ ಜೋಡಿಯನ್ನು ಮೆಚ್ಚಿಕೊಳ್ಳದವರೇ ಇಲ್ಲ.

ಜೊತೆ ಜೊತೆಯಲಿ ಧಾರಾವಾಹಿ ಇತ್ತೀಚಿಗೆ ಸಾಕಷ್ಟು ಏಳು ಬೀಳುಗಳನ್ನು ಕಂಡಿದೆ. ಕೆಲವು ಇಷ್ಟವಾಗುವಂಥ ಟ್ವಿಸ್ಟ್ ಗಳಿದ್ದರೆ ಇನ್ನೂ ಕೆಲವು ಅನಗತ್ಯವಾಗಿದ್ದವು. ಆದರೆ ಇದೀಗ ಅನು ಹಾಗೂ ಆರ್ಯವರ್ಧನ್ ಅವರ ಮದುವೆ ಸಂಭ್ರಮ ಮತ್ತೆ ವೀಕ್ಷಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಅನು ಸಿರಿಮನೆಯ ಪಾತ್ರದಲ್ಲಿ ಮೇಘಾ ಶೆಟ್ಟಿ ಹಾಗೂ ಆರ್ಯವರ್ಧನ್ ಆಗಿ ಅನಿರುದ್ದ್ ತುಂಬಾನೇ ಅದ್ಭುತವಾಗಿ ನಟಿಸುತ್ತಿದ್ದಾರೆ. ಇದೀಗ ಮೇಘಾ ಶೆಟ್ಟಿ ತಮ್ಮ ಅಭಿಮಾನಿಗಳೊಂದಿಗೆ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದ್ದಾರೆ.

ಹೌದು ಸ್ನೇಹಿತರೆ, ಮೇಘಾ ಶೆಟ್ಟಿ ಇದೀಗ 2 ಐಷಾರಾಮಿ ಕಾರ್ ಗಳ ಒಡತಿ. ತಮ್ಮ ಮನೆಗೆ ಬಂದ ಬಿಎಂಡಬ್ಲ್ಯು ಹಾಗೂ ಎಂಜಿ ಹೆಕ್ಟರ್ ಕಾರುಗಳ ಚಿತ್ರವನ್ನು ಪೋಸ್ಟ್ ಮಾಡುವುದರ ಮೇಘಾ ಶೆಟ್ಟಿ ಸಂತೋಷ ಹಂಚಿಕೊಂಡಿದ್ದಾರೆ. ಮೇಘಾ ಶೆಟ್ಟಿ ಚಂದನ್ ಶೆಟ್ಟಿಯವರ ಅಲ್ಭಂ ಸಾಂಗ್ ಒಂದರಲ್ಲಿ ನಟಿಸಿದ್ದರು. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ನಾಯಕಿಯಾಗಿಯೂ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗೆ ಜೊತೆ ಜೊತೆಯಲಿ ಧಾರಾವಾಹಿ ತಂಡದೊಂದಿಗೆ ಭಿನ್ನಾಭಿಪ್ರಾಯವನ್ನು ತಂದುಕೊಂಡಿದ್ದ ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿಯ ಅನು ಸಿರಿಮನೆ ಪಾತ್ರಕ್ಕೆ ಗುಡ್ ಬೈ ಹೇಳಿರುವುದಾಗಿ ಸುದ್ಧಿಯಾಗಿತ್ತು.

ನಂತರ ತಂಡದೊಂದಿಗೆ ರಾಜಿ ಮಾಡಿಕೊಂಡ ಮೇಘಾ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ತಾನು ಜೊತೆ ಜೊತೆಯಲಿ ಸೀರಿಯಲ್ ಪ್ರಸಾರವಾಗುವವರೆಗೂ ಅನು ಸಿರಿಮನೆ ಪಾತ್ರವನ್ನು ನಿರ್ವಹಿಸುತ್ತೇನೆ. ಇಷ್ಟು ದಿನದ ಗೊಂದಲಗಳಿಗೆ ಕ್ಷಮೆ ಯಾಚಿಸುತ್ತೇನೆ ಎಂದು ಅನು ಪಾತ್ರವನ್ನು ಮುಂದುವರೆಸುವುದಾಗಿ ಸ್ಪಷ್ಟನೆ ನೀಡಿದ್ದರು.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ತುಂಬು ಗರ್ಭಿಣಿಯಾದ ನಟಿ ತಾರಾ,ತಾರಾ ಅವರನ್ನ ನೋಡಿ ಬೆಚ್ಚಿಬಿದ್ದ ಜನತೆ!