megha-shetty-video

ಮೇಘನಾ ಶೆಟ್ಟಿ ವಿರುದ್ಧ ಕೆಂಡಮಾಡಲವಾದ ದರ್ಶನ್ ಪತ್ನಿ ವಿಜಯಲಕ್ಷ್ಮಿ ,ಅಷ್ಟಕ್ಕೂ ಆಗಿದ್ದು ಏನು ,ಅಸಲು ವಿಚಾರ ಏನು ..

CINEMA/ಸಿನಿಮಾ Entertainment/ಮನರಂಜನೆ

Vijayalakshmi Against Megha Shetty Vedio: ಕನ್ನಡದ ಖ್ಯಾತ ನಟ ದರ್ಶನ್ (Darshan) ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೆ ಫೆಬ್ರವರಿ 16 ರಂದು ನಟ ದರ್ಶನ್ ತಮ್ಮ 46 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ನಟ ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಸಾಕಷ್ಟು ಅಭಿಮಾನಿಗಳು ಮನೆಗೆ ಬಂದು ಸಹ ಶುಭ ಕೋರಿದ್ದಾರೆ. ಅದೇ ರೀತಿ ನಟ ದರ್ಶನ್ ಮನೆಗೆ ಬಂದ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಕೂಡ ಮಾಡಿದ್ದರು.

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಕೂಡ ವಿಶೇಷವಾದ ಪೋಸ್ಟ್ ಹಂಚಿಕೊಂಡು ದರ್ಶನ್ ಅವರಿಗೆ ವಿಶ್ ಮಾಡಿದರು. ಇದೀಗ ವಿಜಯಲಕ್ಷ್ಮಿ ಅವರು ಮೇಘಾ ಶೆಟ್ಟಿ (Megha Shetty)ವಿರುದ್ಧ ಗರಂ ಆಗಿದ್ದಾರೆ.

ದರ್ಶನ್ ಅವರ ದೊಡ್ಡ ಅಭಿಮಾನಿ ಮೇಘಾ ಶೆಟ್ಟಿ
ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ನಾನು ದೊಡ್ಡ ದರ್ಶನ್ ಅಭಿಮಾನಿ ಅಂತ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡ ಮೇಘ ಶೆಟ್ಟಿ ಅವರ ತಾನು ದರ್ಶನ್ ಅವರ ಅಭಿಮಾನಿ ಎಂದು ಹೇಳಿಕೊಂಡಾಗ ದರ್ಶನ್ ಅಭಿಮಾನಿಗಳಿಗೂ ಖುಷಿ ಆಯಿತು. ಮೇಘಾ ಶೆಟ್ಟಿ ದರ್ಶನ್ ಫ್ಯಾನ್ ಎಂದೆ ಗುರುತಿಸಿಕೊಂಡಿದ್ದಾರೆ.

Megha Shetty: ದರ್ಶನ್ ಜೊತೆ ಸಿನಿಮಾ ಮಾಡ್ತಾರಾ ಜೊತೆ ಜೊತೆಯಲಿ ಮೇಘಾ ಶೆಟ್ಟಿ..? | Jothe Jotheyali Serial Fame Megha Shetty Met Darshan; Know why - Kannada Filmibeat

ಮೇಘಾ ಶೆಟ್ಟಿ ವಿಡಿಯೋ ವಿರುದ್ಧ ತಿರುಗಿ ಬಿದ್ದ ವಿಜಯಲಕ್ಷ್ಮಿ
ನಟಿ ಮೇಘಾ ಶೆಟ್ಟಿ ಆಗಾಗ ದರ್ಶನ್ ಜೊತೆಗೊಂದು ಫೋಟೋ ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಫ್ಯಾನ್ಸ್ ಬೇರೆ ಇತ್ತೀಚಿಗೆ ದರ್ಶನ್ ಮತ್ತು ಮೇಘಾ ಶೆಟ್ಟಿ ಫೋಟೋ ಎಡಿಟ್ ಮಾಡಿ ಒಳ್ಳೆ ಹಾಡನ್ನು ಮಿಕ್ಸ್ ಮಾಡಿದ್ದರು.

ಅಲ್ಲದೆ ನಟಿ ಮೇಘ ಶೆಟ್ಟಿ ದರ್ಶನ್ ಬರ್ತ್ ಡೇ ಅನ್ನು ತಮ್ಮ ಫ್ರೆಂಡ್ಸ್ ಜೊತೆ ಸೇರಿ ಸೆಲೆಬ್ರೆಷನ್ ಮಾಡಿದ್ದರು. ಇದರ ಕುರಿತಾಗಿ ಮೇಘಾ ಶೆಟ್ಟಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಇದೆ ವಿಡಿಯೋ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಿರುಗಿಬಿದ್ದಿದ್ದಾರೆ.




ತನ್ನ ನೋವನ್ನು ಬಿಚ್ಚಿಟ್ಟ ವಿಜಯಲಕ್ಷ್ಮಿ
ಹುಟ್ಟುಹಬ್ಬದ ದಿನ ಶೇರ್ ಮಾಡಿದ ವಿಡಿಯೋಗೆ ವಿಜಯಲಕ್ಷ್ಮಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಅದೇ ವಿಡಿಯೋ ತಮ್ಮ ಪ್ರೊಫೈಲ್ ನಲ್ಲಿ ಹಂಚಿಕೊಂಡು, ನನ್ನ ಕುಟುಂಬಕ್ಕೆ ಹಾನಿಯುಂಟು ಮಾಡುವ ವಿಡಿಯೋಗಳು, ಚಿತ್ರಗಳು ಮತ್ತು ಇತರ ವಿಷಯಗಳನ್ನು ಪೋಸ್ಟ್ ಮಾಡುವ ಮತ್ತು ಮರು ಪೋಸ್ಟ್ ಮಾಡುತ್ತಿರುವ ಜನರು ಮತ್ತು ಅಭಿಮಾನಿಗಳಿಗೆ ನನ್ನ ಪ್ರಾಮಾಣಿಕ ವಿನಂತಿ. ತಕ್ಷಣವೇ ಆ ರೀತಿಯಾದ ಪೋಸ್ಟ್ ಗಳನ್ನೂ ನಿಲ್ಲಿಸಿ. ಮಹಿಳೆಯರಿಗಾಗಿ ಈ ವಿಡಿಯೋವನ್ನು ಪೋಸ್ಟ್ ಮಾಡುವ ಮೊದಲು ಒಬ್ಬರು ಎರಡು ಬಾರಿ ಯೋಚಿಸಬೇಕಾಗಿತ್ತು.

ಏಕೆಂದರೆ, ಇದು ನನಗೆ ಮತ್ತು ನನ್ನ ಮಗನಿಗೆ ಅಪಾರ ನೋವನ್ನು ಉಂಟುಮಾಡಿದೆ. ನಿಮ್ಮ ಈ ಕೃತ್ಯ ನಿಮ್ಮ ನೈತಿಕತೆಯನ್ನು ತೋರಿಸುತ್ತದೆ. ವ್ಯಕ್ತಿತ್ವವನ್ನು ಗಮನಿಸಿ. ನನ್ನ ಮೌನದ ಅರ್ಥ ನಾನು ನಾನ್‌ಸೆನ್ಸ್ ಅನ್ನು ತೆಗೆದುಕೊಳ್ಳುತ್ತೇನೆ ಎಂದು ಅರ್ಥವಲ್ಲ, ನೇರವಾಗಿ ವಿಜಯಲಕ್ಷ್ಮಿ ನಟಿ ಮೇಘಾ ಶೆಟ್ಟಿ ಗೆ ಟ್ಯಾಗ್ ಮಾಡಿ ಹೇಳಿದ್ದಾರೆ.

ವಿಜಯಲಕ್ಷ್ಮಿ ಈ ರೀತಿಯಾಗಿ ಹೇಳುತ್ತಿದಂತೆ ಅಭಿಮಾನಿಗಳು ವಿಜಯಲಕ್ಷ್ಮಿ ಅವರಿಗೆ ಸಪೋರ್ಟ್ ಮಾಡಿದ್ದಾರೆ. ಅಲ್ಲದೆ ನಟಿ ಮೇಘಾ ಶೆಟ್ಟಿ ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.