ಜಿಮ್ ನಲ್ಲಿ ಬೆವರು ಹರಿಸ್ತಿರೋ ಮೇಘಾ ಶೆಟ್ಟಿ: ಯಾವುದಕ್ಕೆ ಈ ತಯಾರಿ ಎಂದು ಕೇಳಿದ ಅಭಿಮಾನಿಗಳು

Today News / ಕನ್ನಡ ಸುದ್ದಿಗಳು

Megha Shetty : ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಕೆಲವೇ ದಿನಗಳ ಹಿಂದೆಯಷ್ಟೇ ಮುಕ್ತಾಯಗೊಂಡಿದೆ. ನಾಲ್ಕು ವರ್ಷಕ್ಕೂ ಅಧಿಕ ಸಮಯ ಕಿರುತೆರೆಯ ಪ್ರೇಕ್ಷಕರನ್ನು ರಂಜಿಸಿದ್ದು ಈ ಧಾರಾವಾಹಿ ಆರಂಭದಿಂದಲೇ ಅಪಾರ ಜನಮೆಚ್ಚುಗೆಯನ್ನು ಪಡೆದುಕೊಂಡು, ದಾಖಲೆಯ ಮಟ್ಟದಲ್ಲಿ ವೀಕ್ಷಕರನ್ನು ಪಡೆದುಕೊಂಡು, ಕಿರುತೆರೆಯ ಲೋಕದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಸೀರಿಯಲ್ ಮೂಲಕವೇ ಜನಪ್ರಿಯತೆ ಪಡೆದು, ಇಂದು ಸ್ಯಾಂಡಲ್ವುಡ್ ನಲ್ಲಿ ನಾಯಕಿಯಾಗಿ ಯಶಸ್ಸು ಪಡೆಯುವ ಹಾದಿಯಲ್ಲಿ ಇದ್ದಾರೆ ನಟಿ ಮೇಘಾ ಶೆಟ್ಟಿ.

ಜೊತೆ ಜೊತೆಯಲಿ ಸೀರಿಯಲ ನ ಅನು ಸಿರಿಮನೆ ಪಾತ್ರದ ಮೂಲಕ ಮನೆ ಮನೆ ಮಾತಾದವರು ಮೇಘಾ‌ ಶೆಟ್ಟಿ. ಅವರ ಈ ಜನಪ್ರಿಯತೆಯೇ ಅವರನ್ನು ಸಿನಿಮಾ ರಂಗದ ಕಡೆಗೆ ನಡೆಸಿತು. ಹೊಸ ಅವಕಾಶಗಳನ್ನು ನಟಿಗಾಗಿ ಹೊತ್ತು ತಂದಿತ್ತು.

ನಟಿ ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ (Ganesh) ಜೊತೆಗೆ ತ್ರಿಬಲ್ ರೈಡಿಂಗ್, ಡಾರ್ಲಿಂಗ್ ಕೃಷ್ಣ (Darling Krishna) ಜೊತೆಗೆ ದಿಲ್ ಪಸಂದ್ ಸಿನಿಮಾಗಳಲ್ಲಿ ನಟಿಸಿ ಸಿನಿ ಪ್ರೇಮಿಗಳ ಗಮನವನ್ನು ಸೆಳೆದಿದ್ದಾರೆ. ಸದ್ಯ ಮೇಘಾ ಶೆಟ್ಟಿ ಅವರ ಕೈವಾ ಮತ್ತು ಆಪರೇಷನ್ ಲಂಡನ್ ಕೆಫೆ ಬಿಡುಗಡೆ ಆಗಬೇಕಿದೆ.

ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ಇವರಿಗೆ ಮಿಲಿಯನ್ ಗಿಂತಲೂ ಅಧಿಕ ಮಂದಿ ಇನ್ಸ್ಟಾಗ್ರಾಂ ಫಾಲೋಯರ್ಸ್ ಇದ್ದಾರೆ.‌ ನಟಿ ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

ಇದೀಗ ನಟಿಯು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು , ಅವರ ಫೋಟೋಗಳಿಗೆ ಅವರ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಗಳು ಹರಿದು ಬರುತ್ತಿವೆ.‌

ನಟಿಯು ಜಿಮ್ ನಲ್ಲಿ ವರ್ಕೌಟ್ ಮತ್ತು ಯೋಗ ಮಾಡುತ್ತಿರುವ, ಮೇಕಪ್ ಇಲ್ಲದ ಸಾಮಾನ್ಯ ಫೋಟೋಗಳನ್ನು ಶೇರ್ ಮಾಡಿದ್ದು, ಅವರ ಮುಖದಲ್ಲಿ ವರ್ಕೌಟ್ ಮಾಡಿದ್ದರ ಪರಿಣಾಮ ಬೆವರು ಹರಿಯುತ್ತಿರುವುದು ಸಹಾ ಕಂಡಿದೆ.

ಸದ್ಯಕ್ಕೆ ಮೇಘಾ ಶೆಟ್ಟಿ ಹಿರಿ ತೆರೆಯಲ್ಲಿ ಹೊಸ ಹೊಸ ಸಿನಿಮಾ ಗಳಲ್ಲಿ ತೊಡಗಿಸಿಕೊಂಡು ಸಾಕಷ್ಟು ಬ್ಯುಸಿಯಾಗಿದ್ದಾರೆ. ತಮ್ಮ ಮುಂದಿನ ಹೊಸ ಸಿನಿಮಾ ಪ್ರಾಜೆಕ್ಟ್ ಗಳ ಕಡೆಗೆ ಗಮನವನ್ನು ನೀಡುವ ಕಡೆಗೆ ಆಸಕ್ತಿಯನ್ನು ತೋರಿಸುತ್ತಿದ್ದಾರೆ.‌

ಮೇಘಾ ಶೆಟ್ಟಿ ಮತ್ತೆ ಕಿರುತೆರೆಗೆ ಬರ್ತಾರಾ ಅನ್ನೋದಕ್ಕೆ ಕಾದು ನೋಡಬೇಕಿದೆ. ಏಕೆಂದರೆ ನಟಿ ಸದ್ಯಕ್ಕಂತೂ ತಮ್ಮ ಗಮನ ಸಿನಿಮಾಗಳ ಕಡೆ ಎಂದು ಇತ್ತೀಚಿಗೆ ಹೇಳಿದ್ದರು. ಕಿರುತೆರೆಯ ಅವರ ಅಭಿಮಾನಿಗಳು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಮೇಘಾ ಶೆಟ್ಟಿ ಅವರ ಆಪರೇಷನ್ ಲಂಡನ್ ಕೆಫೆ (operation London Cafe) ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತದೆ ಎನ್ನುವ ಸುದ್ದಿಗಳು ಸಹಾ ಹರಿದಾಡಿದ್ದವು. ಸಿನಿಮಾ ಬಿಡುಗಡೆ ಯಾವಾಗ ಎನ್ನುವುದು ಅಧಿಕೃತವಾಗಿ ಘೋಷಣೆಯಾಗಿಲ್ಲ.‌

ಕನ್ನಡದ ಯುವ ನಟ ಧನ್ವೀರ್ (Dhanveer) ಅವರು ನಾಯಕನಾಗಿರುವ ಕೈವಾ ಸಿನಿಮಾದಲ್ಲೂ ಸಹಾ ಮೇಘಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಯುವ ನಟನ ಜೊತೆಗೆ ಮಿಂಚಲು ಸಜ್ಜಾಗಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.