ಕನ್ನಡ ಕಿರುತರೆಯಲ್ಲಿ ಅಭಿನಯಿಸುತ್ತಿರುವ ಸಾಕಷ್ಟು ನಟಿಯರು ಇಂದು ಸಿನಿಮಾಗಳಲ್ಲಿಯೂ ಕೂಡ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಯಾಕಂದ್ರೆ ಇಂದು ಧಾರಾವಾಹಿಗಳು ನಿರ್ಮಾಣವು ಅಷ್ಟೇ ಅದ್ಭುತವಾಗಿರುತ್ತೆ. ಅದರ ಜೊತೆಗೆ ಅದರಲ್ಲಿ ಅಭಿನಯಿಸುವ ಕಲಾವಿದರು ಕೂಡ ಅತ್ಯಂತ ಪ್ರಬುದ್ಧ ಅಭಿನಯವನ್ನು ತೋರಿಸುತ್ತಾರೆ. ಹಾಗಾಗಿ ಮೊದಲನೇ ಧಾರವಾಹಿಯಿಂದಲೇ ಗುರುತಿಸಿಕೊಂಡ ಸಾಕಷ್ಟು ನಟಿಯರು ಇಂದು ಸಿನಿಮಾಗಳಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ಹಾಗೆ ಕಿರುತೆರೆ ಲೋಕದಲ್ಲಿ ಇಂದು ಸ್ಟಾರ್ ನಟಿ ಎನಿಸಿರುವುದು ಮೇಘ ಶೆಟ್ಟಿ.
ಕರಾವಳಿಯ ಕುವರಿ ಮೇಘ ಶೆಟ್ಟಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಕನ್ನಡ ನಾಡಿಗೆ ಪರಿಚಯವಾದರು. ತನಗಿಂತ ಅಧಿಕ ವಯಸ್ಸಿನ ವ್ಯಕ್ತಿ ಒಬ್ಬನನ್ನು ಪ್ರೀತಿಸಿ ಮದುವೆಯಾಗುವ ಜೊತೆ ಜೊತೆಯಲಿ ಕಥೆಯಲ್ಲಿ ಅನು ಸಿರಿಮನೆ ಪಾತ್ರಧಾರಿಯಾಗಿ ಮೇಘ ಶೆಟ್ಟಿ ಮಿಂಚುತ್ತಿದ್ದಾರೆ. ಇದರ ಬಗ್ಗೆ ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ ಕಾಣಿಸಿಕೊಂಡಿದ್ದರು. ಈಗ ಅವರ ಜಾಗಕ್ಕೆ ಹರೀಶ್ ರಾಜ್ ಬಂದಿದ್ದಾರೆ.
ಆದರೆ ಅನು ಸಿರಿಮನೆ ಮಾತ್ರ ಬಹಳ ಪ್ರಬುದ್ಧವಾದ ಹಾಗೂ ಪಕ್ವ ಅಭಿನಯ ಮಾಡಿ ಕನ್ನಡಿಗರ ಮನ ಗೆದ್ದಿದ್ದಾರೆ. ಕನ್ನಡಿಗರಿಗೆ ಅನು ಸಿರಿಮನೆ ಎಂದೇ ಪರಿಚಿತರಾಗಿರುವ ಮೇಘಾ ಶೆಟ್ಟಿ ಧಾರಾವಾಹಿ ಮಾತ್ರವಲ್ಲದೆ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸುತ್ತಿದ್ದಾರೆ. ಹೌದು, ಮೇಘಾ ಶೆಟ್ಟಿಯವರು ರಾಪರ್ ಚಂದನ್ ಶೆಟ್ಟಿಯವರ ಆಲ್ಬಂ ಸಾಂಗ್ ಒಂದರಲ್ಲಿಯೂ ಸ್ಟೆಪ್ಸ್ ಹಾಕಿದ್ದಾರೆ.
ಜೊತೆಗೆ ಸಾಲು ಸಾಲು ಸಿನಿಮಾ ಆಫರ್ ಗಳು ಕೂಡ ಒಪ್ಪಿಕೊಂಡಿರುವ ನಟಿ ಮೇಘಾ ಶೆಟ್ಟಿ. ಈಗಾಗಲೇ ತ್ರಿಬಲ್ ರೈಡಿಂಗ್, ದಿಲ್ ಪಸಂದ್, ಆಪರೇಶನ್ ಲಂಡನ್ ಕೆಫೆ ಮೊದಲಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ನಟಿ ಮೇಘಾ ಶೆಟ್ಟಿಯವರು ಸಾಮಾಜಿಕ ಜಾಲತಾಣದಲ್ಲಿಯೂ ಬಹಳ ಅಕ್ವಿವ್ ಆಗಿರುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಖಾತೆಯನ್ನು ಹೊಂದಿರುವ ಮೇಘಾ ಶೆಟ್ಟಿಯವರಿಗೆ ಒಂದು ಮಿಲಿಯನ್ ಗಟ್ಟಲೇ ಫಾಲೋವರ್ಸ್ ಇದ್ದಾರೆ.
ಸಾಕಷ್ಟು ಫೋಟೋಶೂಟ್ ಮಾಡಿಸಿ ಫೋಟೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಾರೆ ನಟಿ ಮೇಘ ಶೆಟ್ಟಿ. ಕಿರುತೆರೆ ಲೋಕದಲ್ಲಿ ಉತ್ತಮ ಹೆಸರು ಗಳಿಸಿರುವ ಮೇಘಾ ಶೆಟ್ಟಿ ಅತಿ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಅವಕಾಶಗಳನ್ನು ಗಳಿಸಿಕೊಂಡಿದ್ದಾರೆ ಅಲ್ಲದೇ ಸಾಕಷ್ಟು ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ. ಮೇಘಾ ಶೆಟ್ಟಿ ಅವರ ಹೆಸರಿನಲ್ಲಿ ಫ್ಯಾನ್ ಪೇಜ್ ಗಳು ಕೂಡ ಹುಟ್ಟಿಕೊಂಡಿವೆ.
ಇನ್ನು ಇತ್ತೀಚಿಗೆ ಮೇಘ ಶೆಟ್ಟಿ ಬಿಳಿಯ ಬಣ್ಣದ ಬಟ್ಟೆ ತೊಟ್ಟು ವಿಶೇಷವಾದ ಫೋಟೋ ಮಾಡಿಸಿದ್ದರು. ಈ ಫೋಟೋದಲ್ಲಿ ಅತ್ಯುತ್ತಮ ಲುಕ್ ನಲ್ಲಿ ಮಿಂಚಿರುವ ಮೇಘ ಶೆಟ್ಟಿ ಅವರಿಗೆ ಸಾಕಷ್ಟು ಕಮೆಂಟ್ ಹಾಗೂ ಲೈಕ್ ಗಳು ಬಂದಿವೆ. ಮೇಘ ಶೆಟ್ಟಿ ಅವರ ಈ ಫೋಟೋಗಳಲ್ಲಿರುವ ಪೋಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ನೀವು ಮೇಘಾ ಶೆಟ್ಟಿ ಅವರ ಅಭಿಮಾನಿಯಾಗಿದ್ರೆ ತಪ್ಪದೇ ಅವರ ಇನ್ಸ್ಟಾಗ್ರಾಮ್ ನಲ್ಲಿ ಅವರ ಪೇಜ್ ಫಾಲೋ ಮಾಡಿ. ಮೇಘಾ ಶೆಟ್ಟಿ ಅವರ ಹೊಸ ಹೊಸ ಪೋಸ್ಟ್ ಗಳನ್ನು ನೀವು ಕೂಡ ನೋಡಬಹುದು. ಕನ್ನಡಿಗರ ಮನೆ ಮಗಳೇ ಆಗಿಹೋಗಿರುವ ನಟಿ ಮೇಘಾ ಶೆಟ್ಟಿಯವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.