megha-shetty

ಬಾಲಿವುಡ್ ತಾರೆಯರನ್ನೂ ಮೀರಿಸುವ ಅಂದದ ಚೆಲುವೆ ನಟಿ ಮೇಘಾ ಶೆಟ್ಟಿ ಅವರ ಹೊಸ ಫೋಟೋಶೂಟ್ ಹೇಗಿದೆ ಗೊತ್ತಾ..?

CINEMA/ಸಿನಿಮಾ Entertainment/ಮನರಂಜನೆ

ಮಾಡೆಲಿಂಗ್ ಮಾಡುತ್ತಿದ್ದ ಮೇಘಾ ಶೆಟ್ಟಿ ಜೊತೆ ಜೊತೆಯಲ್ಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟರು. ಇವರನ್ನು ಲಕ್ಕಿ ಹೀರೋಯಿನ್ ಎಂದರೆ ತಪ್ಪಾಗಲಾರದು. ರಶ್ಮಿಕಾ ಮಂದಣ್ಣರಂತೆಯೇ ಲಕ್ ಅನ್ನು ಜೊತೆಗೆ ಹಿಡಿದವರು. ಯಾಕೆಂದರೆ, ಮೇಘಾ ನಟಿಸಿದ ಮೊದಲ ಧಾರಾವಾಹಿಯೇ ಸೂಪರ್ ಡೂಪರ್ ಹಿಟ್ ಆಗಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಅಲ್ಲದೆ ಸಾಕಷ್ಟು ಆಫರ್ ಗಳು ಇವರನ್ನು ಹುಡುಕಿಕೊಂಡು ಇವರ ಮನೆ ಬಾಗಿಲಿಗೆ ಬರುತ್ತಿದೆ.ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಯಾವುದನ್ನು ಬಿಡಬೇಕು ಎಂಬ ಗೊಂದಲದಲ್ಲಿದ್ದ ಮೇಘಾ, ಸೀರಿಯಲ್ ಮುಗಿಯುವ ವರೆಗೂ ನಾನೇ ಅನು ಆಗಿ ನಟಿಸುತ್ತೇನೆ ಎಂದಿದ್ದರು.

ನಂತರ ಮೇಘಾ ಶೆಟ್ಟಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದರು. ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಹಿಟ್ ಆದ ಮೇಘಾ, ನಂತರ ಗೋಲ್ಡೆನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸಿದರು. ಇದಾದ ನಂತರ ದಿಲ್ ಪಸಂದ್ ಎಂಬ ಚಿತ್ರಕ್ಕೂ ಸಹಿ ಹಾಕಿರುವ ಮೇಘಾ, ಡಾರ್ಲಿಂಗ್ ಕೃಷ್ಣ ಜೊತೆಗೆ ಬಣ್ಣ ಹಚ್ಚಿದರುಪ್ಯಾನ್ ಇಂಡಿಯಾ ಸಿನಿಮಾದಲ್ಲೂ ನಟಿಸುವ ಆಫರ್ ಗಳು ಕೂಡ ಬರುತ್ತಿವೆ. ಆದರೆ ಈಗ ಮೇಘಾ ಶೆಟ್ಟಿ,

ಸಿನಿಮಾ, ಧಾರಾವಾಹಿ ನಟನೆಯ ಜೊತೆಗೆ ನಿರ್ಮಾಪಕಿಯಾಗಿದ್ದಾರೆ. ಈ ಮೂಲಕ ನಿರ್ಮಾಣದಲ್ಲೂ ತಮ್ಮ ಲಕ್ ಟೆಸ್ಟ್ ಮಾಡಿದ್ದಾರೆ. ಧಾರಾವಾಹಿಯೊಂದಕ್ಕೆ ಹಣ ಹೂಡಿದ್ದಾರೆ. ಇನ್ನು ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಇದೀಗ ಬಿಳಿ ಗೌನ್ ನಲ್ಲಿ ಫೋಟೋಶೂಟ್ ಮಾಡಿಸಿರುವ ಮೇಘಾ ಶೆಟ್ಟಿ, ಯಾವ ಬಾಲಿವುಡ್ ಹೀರೋಯಿನ್ ಗೂ ಕಡಿಮೆ ಇಲ್ಲ ಎಂಬಂತೆ ಕಾಣುತ್ತಿದ್ದಾರೆ.ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.