marutis-new-brezza

ಮಾರುತಿಯ ಹೊಸ ಬ್ರೆಜ್ಜಾ : ಬೆಲೆ ಕಡಿಮೆ,ಉತ್ತಮ ಮೈಲೇಜ್,ಆಧುನಿಕ ವೈಶಿಷ್ಟ್ಯಗಳು! ಇನ್ನೇನು ಬೇಕು ಹೇಳಿ?

Entertainment/ಮನರಂಜನೆ

ಮಾರುತಿಯ ಹೊಸ ಬ್ರೆಜ್ಜಾ ಉತ್ತಮವಾದ ಹಲವು ವೈಶಿಷ್ಟ್ಯಗಳಿಂದ ತುಂಬಿದೆ ಎನ್ನಲಾಗಿದೆ. ಕಡಿಮೆ ಬೆಲೆಯಲ್ಲಿ, ಉತ್ತಮ ಮೈಲೇಜ್‌ನೊಂದಿಗೆ ಅಚ್ಚುಕಟ್ಟಾದ ಕ್ರೆಟಾ ಕಾರನ್ನು ಮಾರುಕಟ್ಟೆಗೆ ತಂದ ಮೇಲೆ, ಕ್ರೆಟಾದ ಪೇಸ್ ಲಿಫ್ಟ್ ನ ಕಾರಣದಿಂದಾಗಿ ಬ್ರೆಜ್ಜಾ ಮಾರಾಟದಲ್ಲಿ ಸಾಕಷ್ಟು ಏರಿಳಿತಗಳು ಕಂಡುಬಂದಿದೆ. ಪ್ರಸ್ತುತ ದಿನಗಳಲ್ಲಿ ಅನೇಕ ಕಂಪನಿಗಳು ಹೈಬ್ರಿಡ್ ವಾಹನಗಳ ಕಡೆಗೆ ಕೇಂದ್ರೀಕರಿಸುತ್ತಿದ್ದು, ಬ್ರೆಝಾ ಹೈಬ್ರಿಡ್ ವ್ಯವಸ್ಥೆಯನ್ನು ಸಹ ಹೊಂದಿದೆ ಎಂದು ಕೆಲವೇ ಜನರಿಗೆ ಮಾತ್ರವೇ ತಿಳಿದಿದೆ.

ಮಾರುತಿ ಸುಜುಕಿಯ ಬ್ರೆಝಾ ಒಂದು ಜನಪ್ರಿಯ SUV ಆಗಿದೆ. 2022 ರ ಸೆಪ್ಟೆಂಬರ್ ತಿಂಗಳಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ SUV ಕೂಡಾ ಇದೇ ಆಗಿತ್ತು. ಕಂಪನಿಯು ಇತ್ತೀಚೆಗೆ ಇದನ್ನು ನವೀಕರಣ ಮಾಡಿದೆ ಮತ್ತು ಫೇಸ್‌ಲಿಫ್ಟ್ ಅವತಾರ್ ಆಗಮನದ ನಂತರ, ಅದರ ಮಾರಾಟದಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕಾರ್ ಕಂಪನಿಗಳು ಹೈಬ್ರಿಡ್ ವಾಹನಗಳ ಮೇಲೆ ಗಮನ ಹರಿಸಿವೆ

ಆದರೆ ಬೆರಳೆಣಿಕೆಯಷ್ಟು ಜನರಿಗೆ ಮಾತ್ರವೇ ಬ್ರೆಜ್ಜಾದಲ್ಲಿ ಹೈಬ್ರಿಡ್ ಸಿಸ್ಟಮ್ ವೈಶಿಷ್ಟ್ಯ ಲಭ್ಯವಿದೆ ಎಂದು ತಿಳಿದಿದೆ. ಇದು ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಹೈರೈಡರ್‌ಗಳಷ್ಟು ಬಲವನ್ನು ಹೊಂದಿಲ್ಲವಾದರೂ ಇದು ಮೈಲೇಜ್ ಮತ್ತು ಶಕ್ತಿಗೆ ಸಾಕಷ್ಟು ಪೂರಕವಾಗಿದೆ. ಮಾರುತಿಯ ಸ್ಮಾರ್ಟ್ ಹೈಬ್ರಿಡ್ ವೈಶಿಷ್ಟ್ಯವು ಕಾರಿನ ಇಂಧನದ ದಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಅದರ ಡ್ರೈವಿಂಗ್ ಕಾರ್ಯ ಕ್ಷಮತೆಯನ್ನು ಸಹಾ ಸುಧಾರಿಸುತ್ತದೆ.

ಈ ವಾಹನದಲ್ಲಿ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಈ ಬ್ಯಾಟರಿಯು ಬ್ರೇಕಿಂಗ್ ಸಮಯದಲ್ಲಿ, ಉಳಿದಿರುವ ಶಕ್ತಿಯನ್ನು ಸಂಗ್ರಹಿಸುತ್ತದೆ ಮತ್ತು ಎಂಜಿನ್‌ಗೆ ಹೆಚ್ಚಿನ ಶಕ್ತಿಯ ಅಗತ್ಯವಿರುವಾಗ ಹೀಗೆ ಸಂಗ್ರಹಿಸಿದಂತಹ ಶಕ್ತಿಯನ್ನು ಬಳಕೆ ಮಾಡುತ್ತದೆ.‌

ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ, ಕಾರು ಸಾಮಾನ್ಯ ವೇಗದಲ್ಲಿ ಚಲಿಸುವಾಗ, ಅದರ ಎಂಜಿನ್ ಸ್ವತಃ ಚಕ್ರಗಳಿಗೆ ಶಕ್ತಿಯನ್ನು ನೀಡುತ್ತದೆ. ಒಂದು ವೇಳೆ ನೀವು ಇದ್ದಕ್ಕಿದ್ದ ಹಾಗೆ ಕಾರಿನ ವೇಗವನ್ನು ಹೆಚ್ಚಿಸಿದಾಗ ಕಾರಿಗೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ, ಆಗ ಎಂಜಿನ್ ಮತ್ತು ಬ್ಯಾಟರಿ ಎರಡೂ ಒಟ್ಟಾಗಿ ಚಕ್ರಗಳಿಗೆ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ.

ವಿಶೇಷ ಏನೆಂದರೆ ನೀವು ಬ್ರೇಕ್ ಒತ್ತಿದಾಗ ಅಥವಾ ರೇಸ್ ಪೆಡಲ್‌ನಿಂದ ನಿಮ್ಮ ಪಾದವನ್ನು ತೆಗೆದಾಗ ಈ ಬ್ಯಾಟರಿ ಚಾರ್ಜ್ ಆಗಲು ತೊಡಗುತ್ತದೆ. ಹೊಸ ಬ್ರೆಜ್ಜಾ 1.5-ಲೀಟರ್ ಪೆಟ್ರೋಲ್ ಎಂಜಿನ್ (103PS ಮತ್ತು 137Nm ಉತ್ಪಾದಿಸುತ್ತದೆ) ನಲ್ಲಿ ನಿಮಗೆ ಲಭ್ಯವಾಗುತ್ತದೆ. ಈ ಪೆಟ್ರೋಲ್ ಯೂನಿಟ್ ಅನ್ನು ಐದು-ವೇಗದ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿರುತ್ತದೆ ಮತ್ತು ಆರು-ವೇಗದ ಆಟ್ಟೋಮ್ಯಾಟಿಕ್ ಟ್ರಾನ್ಸ್ ಮೀಷನ್ ದೊರೆಯುತ್ತದೆ.

ಮ್ಯಾನುವಲ್ ಗೇರ್‌ಬಾಕ್ಸ್‌ನಲ್ಲಿ, ಈ ವಾಹನವು 20.15 kmpl ವರೆಗೆ ಮೈಲೇಜ್ ನೀಡುತ್ತದೆ. ಒಟ್ಟಾರೆ ಮಾರುತಿ ಬ್ರೆಜ್ಹಾ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಹೊಂದಿದ್ದು ಇದು ಗ್ರಾಹಕರಿಗೆ ಖುಷಿಯನ್ನು ನೀಡಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಾರುತಿ ವಾಹನಗಳು ಸುರಕ್ಷತೆ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ ಎಂಬ ಆರೋಪವಿದೆ, ಆದರೆ ಬ್ರೆಜ್ಜಾ ಸಾಕಷ್ಟು ಸುರಕ್ಷತಾ ಆಯ್ಕೆಗಳನ್ನು ಹೊಂದಿದ್ದು ಚಿಂತೆ ಮಾಡಬೇಕಾದ ಅಗತ್ಯವೇ ಇಲ್ಲ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.