Maruti Suzuki Wagon Tour H3: ಮಾರುತಿ ಸುಜುಕಿ (Maruti Suzuki) ಹೊಸ ಮಾದರಿಯ ಕಾರ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇದೆ. ಇದೀಗ ಮಾರುತಿ ಸುಜುಕಿ ಕಂಪನಿ ಹೊಸ ಫೀಚರ್ ಗಳೊಂದಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರನ್ನು ಬಿಡುಗಡೆ ಮಾಡಿದೆ.
ಮಾರುತಿ ಸುಜುಕಿ ವ್ಯಾಗನಾರ್ ಟೂರ್ ಹೆಚ್3 ಎರಡು ರೂಪಾಂತರಗಳಲ್ಲಿ ಬರುತ್ತದೆ. ಮಾರುತಿ ಸುಜುಕಿ ವ್ಯಾಗನಾರ್ ಟೂರ್ ಎಚ್3 ಮತ್ತು ಮಾರುತಿ ಸುಜುಕಿ ವ್ಯಾಗನಾರ್ ಟೂರ್ ಎಚ್3 CNG.
ಮಾರುತಿ ಸುಜುಕಿ ವ್ಯಾಗನಾರ್ ಟೂರ್ ಎಚ್3 (Maruti Suzuki Wagon Tour H3)
ಮಾರುತಿ ಸುಜುಕಿ ವ್ಯಾಗನಾರ್ ಟೂರ್ ಎಚ್3 ಕಾರ್ ನ ಬೆಲೆ 5.50 ಲಕ್ಷ ರೂ ಆಗಿದೆ. ಈ ಕಾರ್ 1.0 ಲೀಟರ್ ಕೆ ಸರಣಿಯ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಪಡುತ್ತದೆ. ಇದು ಐಡಲ್ ಸ್ಟಾರ್ಟ್/ ಸ್ಟಾಪ್ ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಸುಜುಕಿ ವ್ಯಾಗನಾರ್ ಟೂರ್ ಎಚ್3 ಪೆಟ್ರೋಲ್ ನಲ್ಲಿ 24 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಮಾರುತಿ ಸುಜುಕಿ ವ್ಯಾಗನಾರ್ ಟೂರ್ ಎಚ್3 ನಲ್ಲಿ ಇಂಧನ ಟ್ಯಾಂಕರ್ ಸಾಮರ್ಥ್ಯ 32 ಲೀಟರ್ ಮತ್ತು ಬೂಟ್ ಸ್ಪೇಸ್ 341 ಲೀಟರ್ ಆಗಿದೆ.ಮಾರುತಿ ಸುಜುಕಿ ವ್ಯಾಗನಾರ್ ಟೂರ್ ಎಚ್3 CNG (Maruti Suzuki Wagon Tour H3 CNG)
ಮಾರುತಿ ಸುಜುಕಿ ವ್ಯಾಗನಾರ್ ಟೂರ್ ಎಚ್3 CNG ಕಾರ್ ನ ಬೆಲೆ 6.40 ಲಕ್ಷ ರೂ ಆಗಿದೆ. ಮಾರುತಿ ಸುಜುಕಿ ವ್ಯಾಗನಾರ್ ಟೂರ್ ಎಚ್3 CNG ಪೆಟ್ರೋಲ್ ನಲ್ಲಿ 34.73 ಕಿಲೋಮೀಟರ್ ಮೈಲೇಜ್ ನೀಡುತ್ತದೆ.ಈ ಕಾರುಗಳಲ್ಲಿ ಕಾರು ಚಾಲಕ ಮತ್ತು ಪ್ರಯಾಣಿಕರ ಏರ್ ಬ್ಯಾಗ್ ಗಳು, EBD ಜೊತೆಗೆ ABS ಹಿಂಭಾಗದ ಪಾರ್ಕಿಂಗ್ ಸಂವೇದಕಗಳು, ಸ್ಪೀಡ್ ಅಲರ್ಟ್ ಸಿಸ್ಟಮ್, ಸೀಟ್ ಬೆಲ್ಟ್ ಮತ್ತು ಪೋರ್ಸ್ ಲಿಮಿಟರ್, ಸೆಂಟ್ರಲ್ ಡೋರ್ ಲಾಕ್ ಹೀಗೆ ಹತ್ತಾರು ವೈಶಿಷ್ಟಗಳನ್ನು ಈ ಕಾರುಗಳು ಹೊಂದಿವೆ.