ಕೇವಲ ಒಂದು ಲಕ್ಷ ಪೇಮೆಂಟ್ ಮಾಡಿ ಮಾರುತಿ ಸ್ವಿಫ್ಟ್ ಮನೆಗೆ ತನ್ನಿ! ಮಸ್ತ್ ಮೈಲೇಜ್, ಜಬರ್ದಸ್ತ್ ಲುಕ್ ಅತ್ಯುತ್ತಮ ಫೀಚರ್ಸ್ ಹೊಂದಿರುವ ಕಾರ್

ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಟಾಪ್ ಸೆಲ್ಲಿಂಗ್ ಕಾರುಗಳಲ್ಲಿ ಒಂದಾಗಿರುವ ಸ್ವಿಫ್ಟ್ ತನ್ನ ಜಬರ್ದಸ್ತ್ ಲುಕ್ ಅತ್ಯುತ್ತಮ ಫೀಚರ್ಸ್ ಮತ್ತು ಮಸ್ತ್ ಮೈಲೇಜ್ ನ ಕಾರಣದಿಂದ ಮಿಡ್ಲ್ ಕ್ಲಾಸ್ ಜನರಿಗೆ ಬಹಳ ಇಷ್ಟವಾಗುತ್ತದೆ. ಅಂದಹಾಗೆ ಕಳೆದ ವರ್ಷ ಈ ಕಾರಿನ CNG ವೆರಿಯಂಟ್ ಕೂಡ ಲಾಂಚ್ ಆಗಿದ್ದು, ನೀವು ಕೂಡ ಸ್ವಿಫ್ಟ್ ಖರೀದಿ ಮಾಡುವ ಯೋಜನೆಯಲ್ಲಿದ್ದರೆ, ಇದೀಗ ಕಂಪನಿ ನೀಡುತ್ತಿರುವ ಆಫರ್ ಪ್ರಕಾರ ಕೇವಲ ಒಂದು ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಿ ಕೊಳ್ಳಬಹುದು.

ನಂತರ ಫೈನಾನ್ಸ್ ಮಾಡಿದರೆ ತಿಂಗಳ ಕಂತಿನ ರೂಪದಲ್ಲಿ ಮಾರುತಿ ಸ್ವಿಫ್ಟ್ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು. ಬನ್ನಿ ಹಾಗಾದರೆ ಸ್ವಿಫ್ಟ್ ನ ಬೇಸ್ ಮಾಡೆಲ್ LXI ಮತ್ತು ಟಾಪ್ ಸೆಲ್ಲಿಂಗ್ ಮಾಡೆಲ್ ಸ್ವಿಫ್ಟ್ VXI ಗಳಿಗೆ ಕಾರು ಲೋನ್, ಡೌನ್ ಪೇಮೆಂಟ್, EMI ಮತ್ತು ಬಡ್ಡಿದರದ ಸಹಿತ ಎಲ್ಲ ಮಾಹಿತಿ ನೋಡೋಣ…

ಮಾರುತಿ ಸ್ವಿಫ್ಟ್ ನ ಬೆಲೆ 6 ಲಕ್ಷ ರೂಪಾಯಿಗಳಿಂದ ಆರಂಭವಾಗಲಿದೆ :
ಮಾರುತಿ ಸುಜುಕಿ ಸ್ವಿಫ್ಟ್ ಅನ್ನು LXi, VXi, ZXi ಮತ್ತು ZXi+ ಎಂಬ ನಾಲ್ಕು ಟ್ರಿಮ್ ಗಳ 11 ವೆರಿಯಂಟ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ, ಇವುಗಳ ಎಕ್ಸ್ ಶೋ ರೂಮ್ ಬೆಲೆ 6 ಲಕ್ಷ ರೂಪಾಯಿಗಳಿಂದ ಆರಂಭವಾಗಿ 8.98 ಲಕ್ಷ ರೂಪಾಯಿಗಳವರೆಗೂ ಇರಲಿದೆ. ಈ ಹ್ಯಾಚ್ ಬ್ಯಾಕ್ ಕಾರಿನಲ್ಲಿ 1197 ಸಿಸಿ ಯ ಪೆಟ್ರೋಲ್ ಎಂಜಿನ್ ಅಳವಡಿಸಿದ್ದು, ಅದು 88.5 Bhp ಪವರ್ ಜೇನರೇಟ್ ಮಾಡುತ್ತದೆ, ಮಾನ್ಯುಯಲ್ ನೊಂದಿಗೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಪ್ಷನ್ ನಲ್ಲಿ ಲಭ್ಯವಿರುವ ಸ್ವಿಫ್ಟ್ ಕಾರಿನ ಮೈಲೇಜ್ 23.76 kmpl ಆಗಿದೆ.

ಮಾರುತಿ ಸ್ವಿಫ್ಟ್ LXi ಡೌನ್ ಪೇಮೆಂಟ್ ಹಾಗೂ EMI :
ಮಾರುತಿ ಸುಜುಕಿ ಸ್ವಿಫ್ಟ್ LXi ವೆರಿಯಂಟ್ ನ ಎಕ್ಸ್-ಶೋ ರೂಮ್ ಬೆಲೆ 6 ಲಕ್ಷ ರೂಪಾಯಿಗಳಾಗಿದ್ದು, ಆನ್ ರೋಡ್ ಬೆಲೆ 6,58,298 ರೂಪಾಯಿಗಳಾಗಿದೆ. ಅಕಸ್ಮಾತ್ ನೀವು ಇದೇ ಮಾಡೆಲ್ ಅನ್ನು ಒಂದು ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಿ ಕೊಂಡರೆ ನೀವು 5,58,298 ರೂಪಾಯಿಗಳ ಲೋನ್ ಸೌಲಭ್ಯ ಪಡೆಯಬೇಕಾಗುತ್ತದೆ. ಈ ಮೊತ್ತಕ್ಕೆ ನೀವು 5 ವರ್ಷಗಳ ಅಂದರೆ 60 ಕಂತುಗಳಲ್ಲಿ ಪ್ರತಿ ತಿಂಗಳು 11,589 ರೂಪಾಯಿಗಳ EMI ಮೂಲಕ ಭರಿಸಬೇಕಾಗುತ್ತದೆ. 5 ವರ್ಷಗಳವರೆಗೆ ನೀವು ಲೋನ್ ಮೊತ್ತಕ್ಕೆ 1.4 ಲಕ್ಷ ರೂಪಾಯಿಗಳನ್ನು ಬಡ್ಡಿಯ ರೂಪದಲ್ಲಿ ಭರಿಸಿದಂತಾಗುತ್ತದೆ.

ಮಾರುತಿ ಸುಜುಕಿ VXi ಡೌನ್ ಪೇಮೆಂಟ್ ಹಾಗೂ EMI :
ಮಾರುತಿ ಸುಜುಕಿ ಸ್ವಿಫ್ಟ್ VXi ವೆರಿಯಂಟ್ ನ ಎಕ್ಸ್-ಶೋ ರೂಮ್ ಬೆಲೆ 6.90 ಲಕ್ಷ ರೂಪಾಯಿಗಳಾಗಿದ್ದು, ಆನ್ ರೋಡ್ ಬೆಲೆ 7,76,448 ರೂಪಾಯಿಗಳಾಗಿದೆ. ಅಕಸ್ಮಾತ್ ನೀವು ಈ ಮಾಡೆಲ್ ಕೊಳ್ಳುವುದಾದರೆ ಒಂದು ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಬೇಕು. ಆಗ ನೀವು 6,76,448 ರೂಪಾಯಿಗಳ ಲೋನ್ ಸೌಲಭ್ಯ ಪಡೆಯಬೇಕಾಗುತ್ತದೆ, ಈ ಮೊತ್ತಕ್ಕೆ ನೀವು 5 ವರ್ಷಗಳ ಅಂದರೆ 60 ಕಂತುಗಳಲ್ಲಿ ಪ್ರತಿ ತಿಂಗಳು 14,042 ರೂಪಾಯಿಗಳ EMI ಮೂಲಕ ಭರಿಸಬೇಕಾಗುತ್ತದೆ.

5 ವರ್ಷಗಳವರೆಗೆ ನೀವು ಲೋನ್ ಮೊತ್ತಕ್ಕೆ 1.7 ಲಕ್ಷ ರೂಪಾಯಿಗಳನ್ನು ಬಡ್ಡಿಯ ರೂಪದಲ್ಲಿ ಭರಿಸಬೇಕಾಗುತ್ತದೆ. ಈ ಮಾಹಿತಿ ಒಂದು ನಗರ ಪ್ರದೇಶದ ಮಾಹಿತಿಯಾಗಿದ್ದು, ನಿಮ್ಮ ಹತ್ತಿರದ ಕಾರು ಶೋ ರೂಮ್ ಗೆ ಭೇಟಿ ನೀಡಿ ಸ್ಥಳೀಯ ಬೆಲೆ ತಿಳಿದುಕೊಳ್ಳಿ. ಕೆಲವು ಬ್ಯಾಂಕುಗಳಲ್ಲಿ ಬಡ್ಡಿದರ ಕಡಿಮೆ ಇದ್ದು ಸರಿಯಾಗಿ ವಿಚಾರಿಸಿ ಮುಂದುವರೆಯಿರಿ.

You might also like

Comments are closed.