ಫೆಬ್ರವರಿ 2023ರ ಅಂಕಿ ಅಂಶಗಳನ್ನು ನೋಡಿದರೆ ಮಾರುತಿ ಸುಜುಕಿ (Maruti Suzuki) ದೇಶದ ನಂಬರ್ ಒನ್ ಕಾರು ಕಂಪನಿ ಎಂದು ಹೆಸರು ಗಳಿಸಿದೆ. ಇದಕ್ಕೆ ಕಾರಣ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಟಾಪ್ 6 ಕಾರುಗಳು ಮಾರುತಿ ಸುಜುಕಿ ಕಂಪನಿ ಗೆ ಸೇರಿದ್ದು, ಟಾಪ್ 5 ನಲ್ಲಿ ಮಾರಾಟವಾದ ಕಾರ್ ಗಳನ್ನು ನೋಡಿದರೆ ಅದರಲ್ಲಿ ಮಾರುತಿ ಸುಜುಕಿ ಆಲ್ಟೊ ಕಾರಿಗೆ ಮೂರನೇ ಸ್ಥಾನ ಸಿಕ್ಕಿದೆ. ಅಂದರೆ ವಾರ್ಷಿಕ ಬೆಳವಣಿಗೆ ದೃಷ್ಟಿಯಿಂದ ನೋಡಿದರೆ ಬಲೆನೋ ಮತ್ತು ಸ್ವಿಫ್ಟ್ ಗಿಂತಲೂ ಆಲ್ಟೋ ಮಾರಾಟವೇ ಹೆಚ್ಚಾಗಿದೆ.
ಮಾರುತಿ ಸುಜುಕಿ ಬಲೆನೊ (Maruti Suzuki Baleno) ಫೆಬ್ರುವರಿ 2023 ರಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರ್ ಆಗಿದ್ದು, ಕಳೆದ ವರ್ಷ ಫೆಬ್ರವರಿಯಲ್ಲಿ 12,570 ಯೂನಿಟ್ ಳುಗ ಮಾರಾಟವಾಗಿದ್ದರೆ, ಈ ವರ್ಷ 18,592 ಯುನಿಟ್ ಗಳನ್ನು ಮಾರಾಟ ಮಾಡಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ 48% ಕಾರ್ ಮಾರಾಟದಲ್ಲಿ ಬೆಳವಣಿಗೆ ಕಂಡಿದೆ.
ಇನ್ನು ಮಾರುತಿ ಸುಜುಕಿ ಸ್ವಿಫ್ಟ್ (Swift) ಎರಡನೇ ಸ್ಥಾನದಲ್ಲಿದೆ 19,202 ಯೂನಿಟ್ ಸ್ವಿಫ್ಟ್ ಕಾರ್ ಗಳು ಕಳೆದ ವರ್ಷ ಫೆ. ನಲ್ಲಿ ಮಾರಾಟವಾಗಿದ್ದವು. ಈ ವರ್ಷ ಫೆಬ್ರವರಿಯಲ್ಲಿ 18,412 ಯೂನಿಟ್ ಮಾರಾಟವಾಗಿದ್ದು, ವಾರ್ಷಿಕ ಮಾರಾಟದಲ್ಲಿ 4% ಕುಸಿತ ಕಂಡಿದೆ.

ಇನ್ನು ಮೂರನೆಯದಾಗಿ ಮಾರಾಟದ ವಿಷಯಕ್ಕೆ ಬಂದರೆ ಆಲ್ಟೋ (Alto) ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷ 11,551 ಯೂನಿಟ್ ಮಾರಾಟವಾಗಿತ್ತು. ಈ ವರ್ಷ 57% ಹೆಚ್ಚು ಬೆಳವಣಿಗೆ ಆಗಿದ್ದು ಫೆಬ್ರವರಿ ತಿಂಗಳಿನಲ್ಲಿ 18,114 ಯೂನಿಟ್ ಗಳು ಮಾರಾಟವಾಗಿವೆ. ಮಾರುತಿಯಲ್ಲಿ ಮಾರುತಿ ಆಲ್ಟೊ 800 ಮತ್ತು ಆಲ್ಟೊ ಕೆ10 ಎನ್ನುವ ಎರಡು ಮಾದರಿಗಳಿದ್ದು ಈ ಕಾರುಗಳ ಆರಂಭಿಕ ಬೆಲೆ ಕೇವಲ ನಾಲ್ಕು ಲಕ್ಷ ರೂಪಾಯಿಗಳು.
ಹೊಸ ಮಾದರಿಯಲ್ಲಿ ಕಳೆದ ವರ್ಷ ಆಲ್ಟೊ ಕೆ10 ಬಿಡುಗಡೆಯಾಗಿತ್ತು. ಈ ಕಾರನ್ನು ಇಷ್ಟಪಟ್ಟ ಜನರು ಹೆಚ್ಚು ಯೂನಿಟ್ ಮಾರಾಟವಾಗುವುದಕ್ಕೆ ಕಾರಣರಾಗಿದ್ದಾರೆ. ಅದರಲ್ಲೂ ಕಂಪನಿಯು ಆಲ್ಟೋದ ಈ ಎರಡು ಮಾದರಿಗಳಲ್ಲಿ ಸಿಎನ್ ಜಿ ಸೌಲಭ್ಯವನ್ನು ಕೂಡ ನೀಡುತ್ತಿದೆ. 31 ರಿಂದ 32 ಕಿಲೋ ಮೀಟರ್ ಪ್ರತಿ ಕೆಜಿಗೆ ಮೈಲೇಜ್ ದೊರೆಯುತ್ತದೆ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.