Maruti-Suzuki-Baleno-Facelift

ಬಲೆನೋ ಫೇಸ್ಲಿಫ್ಟ್ ಮಾಡೆಲ್ : ಈ ಕಾರು ಪ್ರತಿ ಮೂರು ನಿಮಿಷಗಳಿಗೊಂದು ಮಾರಾಟವಾಗುತ್ತಿದೆಯಂತೆ!

Entertainment/ಮನರಂಜನೆ

ಟಾಪ್-5 ಸೆಲ್ಲಿಂಗ್ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಬಲೆನೋ ಕಾರು ಒಂದು ಅದ್ಭುತ ಪ್ರಿಮಿಯರ್ ಹ್ಯಾಚ್ ಬ್ಯಾಕ್ ಕಾರಾಗಿದ್ದು ಇದರ ಫೇಸ್ಲಿಫ್ಟ್ ವರ್ಷನ್ ಗಾಗಿ ಹಲವಾರು ಜನರು ಕಾಯ್ದು ಕುಳಿತಿದ್ದರು. ಇದೀಗ ಕಂಪನಿ ಈ ಕಾರಿನ ಫೇಸ್ಲಿಫ್ಟ್ ವರ್ಷನ್ ಅನ್ನು ಲಾಂಚ್ ಮಾಡಿದ್ದು ಇಷ್ಟು ಕಾಯ್ದ ಮಾರುತಿ ಬೆಲೆನೋ ಕಾರು ಪ್ರಿಯರ ಕಾಯುವಿಕೆ ಅಂತ್ಯವಾಗಿದೆ. ಒಟ್ಟಾರೆಯಾಗಿ ಅತೀ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಟಾಪ್-5 ನಲ್ಲಿರುವ ಈ ಕಾರು ಪ್ರಿಮಿಯರ್ ಹ್ಯಾಚ್ ಬ್ಯಾಕ್ ಮಾದರಿಯ ಕಾರುಗಳ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ!

ಅತೀ ಹೆಚ್ಚು ಪ್ರಯಾಣಿಕ ಕಾರುಗಳನ್ನು ಮಾರಾಟ ಮಾಡುವ ಮಾರುತಿ ಸುಜುಕಿ ಕಂಪನಿ ಇದೇ ಬುಧವಾರ ತನ್ನ ಜನಪ್ರಿಯ ಹ್ಯಾಚ್ ಬ್ಯಾಕ್ ಬಲೆನೋ ಫೇಸ್ಲಿಫ್ಟ್ ಅನ್ನು ಲಾಂಚ್ ಮಾಡಿದ್ದು, ಈಗಾಗಲೇ ಈ ಕಾರಿಗೆ ಬರೋಬ್ಬರಿ 25 ಸಾವಿರ ಅಡ್ವಾನ್ಸ್ ಬುಕಿಂಗ್ ಆಗಿವೆ ಎಂದು ಸ್ವತಃ ಕಂಪನಿಯೇ ಹೇಳಿಕೊಂಡಿದೆ, ಇದೇ ಈ ಕಾರಿಗೆ ಮಾರುಕಟ್ಟೆಯಲ್ಲಿ ಅದೆಷ್ಟು ಬೇಡಿಕೆ ಇರಬಹುದು ಎಂಬುದನ್ನು ತೋರಿಸುತ್ತದೆ. ಅಲ್ಲದೇ ಕಂಪನಿಯ ಪ್ರಕಾರ ಪ್ರತಿ ಮೂರು ನಿಮಿಷಗಳಿಗೊಮ್ಮೆ ಬಲೆನೋ ಕಾರಿನ ಒಂದು ಯೂನಿಟ್ ಮಾರಾಟವಾಗುತ್ತದೆಯಂತೆ!

ಭಾರತೀಯರ ಮೋಡಿ ಮಾಡಿದ ಮಾರುತಿ ಬಲೆನೋ RS ಕಾರು ಸ್ಥಗಿತ? | Maruti suzuki likely to discontinue baleno RS car

ಬಲೆನೋ ಫೇಸ್ಲಿಫ್ಟ್ ನ ಬೆಲೆ :
ಪ್ರಿಮಿಯಂ ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ಗಳ ಮಾರಾಟದಲ್ಲಿ ಟಾಪ್-1 ನಲ್ಲಿರುವ ಈ ಕಾರಿನ ಫೇಸ್ಲಿಫ್ಟ್ ನ ಎಕ್ಸ್-ಶೋ ರೂಮ್ ಬೆಲೆ 6.35 ಲಕ್ಷ ರೂಪಾಯಿಗಳಿಂದ ಶುರುವಾಗಿದ್ದು, ಅತೀ ಕಡಿಮೆ ಬೆಲೆಯಲ್ಲಿ ನಿಮಗೆ ಈ ಕಾರಿನಲ್ಲಿ ಆಧುನಿಕ ಫೀಚರ್ಸ್ ಕೂಡ ಸಿಗಲಿವೆ, ಅಲ್ಲದೇ ಕಾರಿನಲ್ಲಿ ಹೆಚ್ಚು ಜಾಗ ಕೂಡ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.

7 ವೆರಿಯಂಟ್ ನಲ್ಲಿ ಲಾಂಚ್ ಆದ ಮಾರುತಿ ಬಲೆನೋ :
ಬಲೆನೋ ಫೇಸ್ಲಿಫ್ಟ್ ಅನ್ನು ಕಂಪನಿ 7 ವೆರಿಯಂಟ್ ಗಳಲ್ಲಿ ಲಾಂಚ್ ಮಾಡಿದ್ದು, ಅವುಗಳೆಂದರೆ ಸಿಗ್ಮಾ, ಡೆಲ್ಟಾ, ಡೆಲ್ಟಾ ಎಎಂಟಿ, ಜೆಟಾ, ಜೆಟಾ ಎಎಂಟಿ, ಅಲ್ಫಾ ಮತ್ತು ಅಲ್ಫಾ ಎಎಂಟಿ ಆಗಿವೆ. ಸಿಗ್ಮಾ ಈ ಕಾರಿನ ಬೇಸ್ ವೆರಿಯಂಟ್ ಆಗಿದ್ದರೆ, ಅಲ್ಫಾ ಎಎಂಟಿ ಇದರ ಟಾಪ್ ವೆರಿಯಂಟ್ ಆಗಿದ್ದು ಇದರ ಎಕ್ಸ್-ಶೋ ರೂಮ್ ಬೆಲೆ 9.49 ಲಕ್ಷ ರೂಪಾಯಿಗಳಾಗಿದೆ, ಇವುಗಳಲ್ಲಿ ಹೆಚ್ಚು ವೆರಿಯಂಟ್ ಗಳಲ್ಲಿ ಕಂಪನಿ 6 ಏರ್ ಬ್ಯಾಗ್ಸ್ ಅಳವಡಿಸಲಿದ್ದು, ಸೇಫ್ಟಿಗಾಗಿ ಈ ಕಾರು ಜಬರ್ದಸ್ತ್ ಆಗಿರಲಿದೆ.

ಶೀಘ್ರದಲ್ಲೇ ಮಾರುತಿ ಸುಜುಕಿ ಬಲೆನೋ ಫೇಸ್‌ಲಿಫ್ಟ್ ಬಿಡುಗಡೆ!

ಬಲೆನೋ ಫೇಸ್ಲಿಫ್ಟ್ ಗಾಗಿ ಸಬ್ಸ್ಕ್ರಿಪ್ಷನ್ ಶುರು ಮಾಡಿದ ಕಂಪನಿ :
ಮಾರುತಿ ಕಂಪನಿ ತನ್ನ ಬಲೆನೋ ಫೇಸ್ಲಿಫ್ಟ್ ಗಾಗಿ ಸಬ್ಸ್ಕ್ರಿಪ್ಷನ್ ಸ್ಕೀಮ್ ಶುರು ಮಾಡಿದೆ, ಈ ಸ್ಕೀಮ್ ಪ್ರತಿ ತಿಂಗಳು 13,999 ರೂಪಾಯಿಗಳಿಂದ ಶುರುವಾಗಲಿದ್ದು, ಇದರಲ್ಲಿ ವೆಹಿಕಲ್ ರೆಜಿಸ್ಟರೇಷನ್, ಮೆಂಟೇನನ್ಸ್, ಇನ್ಶೂರೆನ್ಸ್ ಮತ್ತು ರೋಡ್ ಸೈಡ್ ಅಸಿಸ್ಟೆಂಟ್ ಸೇರಿವೆ. ಕಂಪನಿ ಲಾಂಚ್ ಮಾಡಿದ ಬಳಿಕ ಹೇಳಿದ ಪ್ರಕಾರ ಯಾವ ಗ್ರಾಹಕರು ಈಗಾಗಲೇ ಬುಕಿಂಗ್ ಮಾಡಿದ್ದಾರೋ ಅವರಿಗೆ ಬುಧವಾರದಿಂದಲೇ ಡೆಲಿವರಿ ಕೊಡಲು ಆರಂಭಿಸಲಿದ್ದಾರಂತೆ.

ಮಾರುತಿ ಸುಜುಕಿ ಬೆಲೆನೋದಲ್ಲಿ ಹಲವಾರು ಬದಲಾವಣೆ ಮಾಡಲಾಗಿದೆ :
ಮಾರುತಿ ಸುಜುಕಿ ಕಂಪನಿ ಈ ಬೆಲೆನೋ ಕಾರಿನ ಫೇಸ್ಲಿಫ್ಟ್ ಮಾಡೆಲ್ ಅನ್ನು ಸ್ಟೈಲಿಶ್ ಆಗಿಸಲು ಹಲವಾರು ಬದಲಾವಣೆಗಳನ್ನು ಮಾಡಿದ್ದು, ಇದರಲ್ಲಿ ಹನಿಕೊಂಬ್ ಪ್ಯಾಟರ್ನ್ ನ ನೆಕ್ಸ್ ವೇವ್ ಗ್ರಿಲ್ ಅಳವಡಿಸಿದ್ದು ಅದು ಮೊದಲಿಗಿಂತ ಕೊಂಚ ಅಗಲವಾಗಿದ್ದು ಹೆಡ್ಲ್ಯಾಂಪ್ಸ್ ಅನ್ನು ಟಚ್ ಮಾಡುವಂತಿದೆ, ಇದರೊಟ್ಟಿಗೆ ಕ್ಲಾಮ್ಶೆಲ್ ಬಾನೆಟ್, ರೀ-ಪ್ರೊಫೈಲ್ಡ್ ಬಂಪರ್, ನ್ಯೂ ಫಾಗ್ ಲೈಟ್ ಹೌಸಿಂಗ್ ಇತ್ಯಾದಿ ಇತ್ಯಾದಿ ಬದಲಾವಣೆ ಮಾಡಲಾಗಿದೆ.

ಈ ಕಾರನ್ನು ಕಂಪನಿ, ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಗ್ರಾಂಡ್ಯೋರ್ ಗ್ರೇ, ನೆಕ್ಸಾ ಬ್ಲೂ, ಅಪ್ಯುಲೆಂಟ್ ರೆಡ್ ಮತ್ತು ಲಕ್ಸ್ ಬೀಜ್ ಕಲರ್ ಗಳಲ್ಲಿ ತಂದಿದೆ. ಇಂಟಿರಿಯರ್ ನಲ್ಲಿಯೂ ಸಹ ಹಲವಾರು ಬದಲಾವಣೆಗಳನ್ನು ಮಾಡಿದ್ದು ಅವುಗಳಲ್ಲಿ ಇದರ ಸ್ಟೇರಿಂಗ್ ವೀಲ್ ಬಹುಮುಖ್ಯವಾದ ಬದಲಾವಣೆ. ಇದೆಲ್ಲ ಗ್ರಾಹಕರನ್ನು ಆಕರ್ಷಿಸಿದ್ದು ಭರ್ಜರಿ ಮಾರಾಟ ಕಾಣುವತ್ತ ಸಾಗಿದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...