ಭಾರತದ ಜನರಿಗೆ ತಮ್ಮ ಜೀವನದಲ್ಲಿ ಮೊದಲ ಕಾರು ಖರೀದಿಸುವುದು ಒಂದು ಕನಸಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾರುಗಳ ಬೆಲೆ ಗಗನಕ್ಕೇರಿದೆ. ಇಂತಹ ಪರಿಸ್ಥಿತಿಯಲ್ಲಿ ಕಾರು ಖರೀದಿ ಎನ್ನುವುದು ಖಂಡಿತ ಸುಲಭವಾದ ಕೆಲಸವಲ್ಲ. ಅಲ್ಲದೇ ಈಗ ಮಾರುಕಟ್ಟೆಯಲ್ಲಿ ದೊಡ್ಡ ವಾಹನಗಳಿಗೆ ಬೇಡಿಕೆ ಹೆಚ್ಚಿದೆ. ಇದೆಲ್ಲದರ ನಡುವೆ ಒಂದು ಕಾರು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಈ ಕಾರು ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದೆ.
ಈ ಮೂಲಕ ಸಾವಿರಾರು ಜನರ ಕಾರು ಕೊಳ್ಳುವ ಕನಸನ್ನು ನನಸು ಮಾಡುತ್ತಿದ್ದು, ಇದು ಸಾಮಾನ್ಯ ಜನರ ಮೊದಲ ಆಯ್ಕೆಯೂ ಆಗಿಬಿಟ್ಟಿದೆ. ಅದೂ ಅಲ್ಲದೇ ಈಗ ಈ ಕಾರು ಜನವರಿಯಲ್ಲಿ ದೇಶದಲ್ಲಿ ಮಾರಾಟವಾದ ಕಾರುಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ನಾವು ಈಗ ಇಲ್ಲಿ ಮಾತನಾಡುತ್ತಿರುವ ಕಾರಿನ ಹೆಸರು ಬಹುತೇಕ ಎಲ್ಲರಿಗೂ ತಿಳಿದೇ ಇದೆ ಎನ್ನುವುದು ಸುಳ್ಳಲ್ಲ.
ಹೌದು, ಮಾರುತಿ ಸುಜುಕಿಯ ಆಲ್ಟೊ ಕಾರು ಹಲವು ವರ್ಷಗಳಿಂದ ದೇಶದ ಸಾಮಾನ್ಯ ಜನರ ಕಾರಾಗಿದೆ. ಜನವರಿಯಲ್ಲಿ ಮಾರುತಿ ಆಲ್ಟೊ ಒಟ್ಟು 21,411 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಆಲ್ಟೊ ಭಾರತೀಯ ಮಾರುಕಟ್ಟೆಯಲ್ಲಿ ಆಲ್ಟೊ 800 ಮತ್ತು ಆಲ್ಟೊ ಕೆ10 ಎರಡು ಮಾದರಿಗಳಲ್ಲಿ ಲಭ್ಯವಿದೆ. ಈ ಕಾರಿನ ಬೆಲೆಯ ವಿಚಾರಕ್ಕೆ ಬಂದರೆ, ಆಲ್ಟೊ 800 ಬೆಲೆ ರೂ.3.53 ಲಕ್ಷದಿಂದ ಮತ್ತು ಆಲ್ಟೊ ಕೆ10 ಬೆಲೆ ರೂ.3.99 ಲಕ್ಷದಿಂದ ಪ್ರಾರಂಭವಾಗುತ್ತದೆ.
ಮಾರುತಿ ಸುಜುಕಿ ಕಳೆದ ವರ್ಷವಷ್ಟೇ ಎಲ್ಲಾ ಹೊಸ ಆಲ್ಟೊ ಕೆ10 ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದರ ಟಾಪ್ ಮಾಡೆಲ್‌ನ ಬೆಲೆ 5.95 ಲಕ್ಷ ರೂ.ಗಳವರೆಗೆ ಇದೆ. ಇದು Std (O), LXi, VXi ಮತ್ತು VXi+ ಆಯ್ಕೆಯೊಂದಿಗೆ 4 ರೂಪಾಂತರಗಳಲ್ಲಿ ಲಭ್ಯವಿದೆ.
ಈ ಸಣ್ಣ ಕಾರನ್ನು ಹ್ಯಾಚ್ ಬ್ಯಾಕ್ ಅನ್ನು ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ, ಮೆಟಾಲಿಕ್ ಸ್ಪೀಡಿ ಬ್ಲೂ, ಪ್ರೀಮಿಯಂ ಅರ್ಥ್ ಗೋಲ್ಡ್ ಮತ್ತು ಸಾಲಿಡ್ ವೈಟ್ ಗಳೆಂಬ ಒಟ್ಟು 6 ಬಣ್ಣಗಳಲ್ಲಿ ಖರೀದಿಸಬಹುದು. ಈಗ ಕಂಪನಿಯು ಕಪ್ಪು ಬಣ್ಣದಲ್ಲಿ ಲಭ್ಯವಾಗುವಂತೆ ಮಾಡಿದೆ. ಈ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಕಾರು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದ್ದು, ಇದು Apple CarPlay ಮತ್ತು Android Auto ಗಳಿಗೆ ಸಪೋರ್ಟ್ ಮಾಡುತ್ತದೆ.
ಇದಲ್ಲದೇ ಕಾರು ಕೀಲಿ ರಹಿತ ಪ್ರವೇಶ ಮತ್ತು ಡಿಜಿಟೈಸ್ಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹಾ ನೀಡಲಾಗಿದೆ. ಹ್ಯಾಚ್‌ಬ್ಯಾಕ್ ಸ್ಟೀರಿಂಗ್-ಮೌಂಟೆಡ್ ಕಂಟ್ರೋಲರ್ ಮತ್ತು ಮ್ಯಾನ್ಯುಯಲ್ ಅಡ್ಜೆಸ್ಟ್ ಮೆಂಟ್ ಮಾಡಬಹುದಾದ ORVM ಗಳನ್ನು ಸಹಾ ಹೊಂದಿದೆ. ಇದರ ಸುರಕ್ಷತಾ ಕಿಟ್ ನ ಭಾಗವಾಗಿ, ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳನ್ನು ಒಳಗೊಂಡಿದೆ.
ಮಾರುತಿ ಆಲ್ಟೊ ಕೆ10 ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ಸ್ಪರ್ಧೆಯನ್ನು ನೀಡುವ ಕಾರುಗಳಿಲ್ಲ, ಆದರೆ ಇದು ಬೆಲೆಯ ಶ್ರೇಣಿಯಲ್ಲಿ ರೆನಾಲ್ಟ್ ಕ್ವಿಡ್‌ಗೆ ಸ್ಪರ್ಧೆ ನೀಡುತ್ತಿದೆ.