maruti-ertiga

ಮಾರುತಿ ಎರ್ಟಿಗಾಗಿಂತ ಬೆಸ್ಟ್ 7 ಸೀಟರ್ ಕಾರು ಇಲ್ಲಿದೆ,ಬೆಂಕಿ ಮೈಲೇಜ್

Entertainment/ಮನರಂಜನೆ

ಹೆಚ್ಚಿನ ಸೀಟರ್ಗಳನ್ನು ಹೊಂದಿರುವ ಕಾರುಗಳಲ್ಲಿ ಎರ್ಟಿಗಾ (Ertiga) ಕಾರು ಸಾಕಷ್ಟು ವರ್ಷಗಳಿಂದಲೂ ಕೂಡ ಪ್ರಶಸ್ತಿಯನ್ನು ಗೆಲ್ಲುತ್ತಲೇ ಬಂದಿದೆ. ಆದರೆ ಈಗ ಈ ಬಾರಿ ಒಂದು ಹೊಸ ಸೆವೆನ್ ಸೀಟರ್ ಕಾರ್ (7 Seater Car) ಮೊದಲ ಬಾರಿಗೆ ಎರ್ಟಿಗಾ ಅನ್ನು ಈ ರೇಸ್ ನಲ್ಲಿ ಹಿಂದಿಕ್ಕಿದೆ. ಬನ್ನಿ ಆ ಕಾರಿನ ಕುರಿತಂತೆ ಇನ್ನಷ್ಟು ವಿವರವಾಗಿ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ. ಇದು ನಾವು ಮಾತನಾಡುತ್ತಿರುವುದು Kia Carens ಕಾರಿನ ಬಗ್ಗೆ.

ಒಂದೇ ವಿಭಾಗದ ಎರಡು ಕಾರುಗಳು ಪರಸ್ಪರ ಪೈಪೋಟಿಯನ್ನು ಸಾಕಷ್ಟು ಸಮಯಗಳಿಂದಲೂ ಕೂಡ ಹೊಂದಿದ್ದು ಏಪ್ರಿಲ್ ತಿಂಗಳಿನಲ್ಲಿ ಕಿಯಾ (Kia) ಸಂಸ್ಥೆಯ ಈ ಕಾರು ಹೆಚ್ಚಿನ ಕಾರ್ ಯೂನಿಟ್ ಗಳನ್ನು ಮಾರಾಟ ಮಾಡುವ ಮೂಲಕ ಎರ್ಟಿಗ ಕಾರನ್ನು ಹಿಂದಿಕ್ಕಿದೆ. ಇಷ್ಟೊಂದು ಚರ್ಚೆಯಲ್ಲಿರುವ ಕಿಯಾ ಸಂಸ್ಥೆಯ Carens ಕಾರಿನಲ್ಲಿರುವಂತಹ ವಿಶೇಷತೆಗಳೆಂಬುದನ್ನು ತಿಳಿಯೋಣ. ಮೊದಲಿಗೆ ಈ ಕಾರಿನ ಬೆಲೆಯನ್ನು ಗಮನಿಸುವುದಾದರೆ 10.45ಲಕ್ಷದಿಂದ 18.90 ಲಕ್ಷದವರೆಗೂ ಕೂಡ ಇರುತ್ತದೆ. ಇದರಲ್ಲಿ ಮೂರು ಇಂಜಿನ್ ಆಪ್ಷನ್ ಇದೆ.

ಆರು ಆಟೋಮೆಟಿಕ್ ಸ್ಪೀಡ್ ಗೇರ್ ಬಾಕ್ಸ್ ಗಳನ್ನು ಕೂಡ ಇದು ಹೊಂದಿದೆ. ಎಲ್ಲಕ್ಕಿಂತ ಫ್ಯಾಮಿಲಿ ಗ್ರಾಹಕರು ಹಾಗೂ ಕಮರ್ಷಿಯಲ್ ಕಾರಣಕ್ಕಾಗಿ ದೊಡ್ಡ ಸ್ಪೇಸ್ ಇರುವ ಕಾರನ್ನು ಖರೀದಿಸಲು ಯೋಚಿಸಿದರೆ Kia Carens ಕಾರು ಅತ್ಯಂತ ಸೂಕ್ತವಾದುದ್ದು ಎಂದು ಹೇಳಬಹುದು.

2022 Kia Carens Luxury+ Sunroof | New On Road Price List | Mileage | Features | 7 Seater MPV - YouTube

ಆಂಡ್ರಾಯ್ಡ್ ಹಾಗೂ ಆಪಲ್ ಕಾರ್ ಪ್ಲೇ ಕೂಡ ಇದರಲ್ಲಿ ಇದ್ದು, 10.25 ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್ ಕೂಡ ಇದೆ. Instrumental Cluster, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳು ಕೂಡ ಈ ಕಾರಿನಲ್ಲಿವೆ. ಸಿಂಗಲ್ ಫೇಸ್ ಸನ್ರೂಫ್ ಅನ್ನು ಕೂಡ ಈ ಕಾರು ಹೊಂದಿದೆ. ಒಟ್ಟಾರೆಯಾಗಿ ಹೇಳುವುದಾದರೆ ದೊಡ್ಡಮಟ್ಟದ ಸೀಟಿಂಗ್ ವ್ಯವಸ್ಥೆಯನ್ನು ಅಪೇಕ್ಷಿಸುತ್ತಿದ್ದರೆ ಈ ಏಳು ಸೀಟರ್ ಕಾರ್ ನಿಮಗೆ ಅತ್ಯಂತ ಪರ್ಫೆಕ್ಟ್ ಆಪ್ಷನ್ ಆಗಿ ಕಾಣಿಸಿಕೊಳ್ಳಲಿದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...