maru-maduve

ವಿಧವೆ ತಾಯಿಯ ಒಂಟಿತನ ನೀಗಿಸಲು ತಾನೇ ಮುಂದೆ ನಿಂತು ಮರು ಮದುವೆ ಮಾಡಿಸಿದ ಮಗಳು!

Today News / ಕನ್ನಡ ಸುದ್ದಿಗಳು

ಭಾರತದಂತಹ ಸಂಪ್ರದಾಯ ಬದ್ಧ ದೇಶದಲ್ಲಿ ಎರಡನೇ ಮದುವೆ ವಿಷಯ ಬಂದಾಗ ಜನ ಅದರ ಬಗ್ಗೆ ಆಲೋಚನೆ ಮಾಡುವುದು ಸಹಜ. ಅದರಲ್ಲೂ ಮಹಿಳೆಯರಿಗೆ ಎರಡನೇ ಮದುವೆ ಎಂದರೆ ನಿಜಕ್ಕೂ ಕೂಡಾ ನಮ್ಮ ದೇಶದಲ್ಲಿ ಅದನ್ನು ಜನ ಸ್ವೀಕರಿಸುವುದು ಬಹಳ ಕಷ್ಟ. ಅದು ಮಾತ್ರವೇ ಅಲ್ಲದೇ ಮಹಿಳೆಯರು ಕೂಡಾ ಸಮಾಜವನ್ನು ಕೂಡಾ ಎದುರಿಸಬೇಕಾಗುವುದು ಹಾಗೂ ಕೆಲವೊಮ್ಮೆ ಸಂಪ್ರದಾಯಸ್ಥ ಸಮಾಜದಿಂದ ಕಟುವಾದ ಟೀ ಕೆ ಯನ್ನು ಕೂಡಾ ಕೇಳಬೇಕಾಗಿ ಬರುವುದು ಕೂಡಾ‌ ವಾಸ್ತವ. ಆದರೂ ದಿನ ಕಳೆದಂತೆ ನಮ್ಮ ದೇಶದಲ್ಲಿ ಕೂಡಾ ಬದಲಾವಣೆಯ ಗಾಳಿ ಬೀಸುತ್ತಿದ್ದು ತಲೆ ಮಾರುಗಳಿಂದ ಬಂದಿದ್ದು ಕೆಲವು ರೂ ಢಿ ಸಂಪ್ರದಾಯಗಳನ್ನು ಸಮಾಜದಿಂದ ಕಿತ್ತೊಗೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಇಂತಹುದೇ ಒಂದು ಪ್ರಯತ್ನವನ್ನು ಒಬ್ಬ ಯುವತಿಯು ಮಾಡಿದ್ದಾಳೆ‌. ಈಕೆ ತನ್ನ ವಿಧವೆಯಾದ ತಾಯಿಗೆ ಮರು ಮದುವೆಯನ್ನು ಮಾಡುವ ಮೂಲಕ ಸಮಾಜದ ಮುಂದೆ ಒಂದು ಮಾದರಿಯನ್ನು ಮೆರೆದಿದ್ದಾರೆ ಹಾಗೂ ಅನೇಕ ಮಹಿಳೆಯರಿಗೆ ಈ ಮೂಲಕ ಒಂದು ಪ್ರೇರಣೆಯನ್ನು ಕೂಡಾ ನೀಡಲು ಮುಂದಾಗಿದ್ದಾರೆ. ವಾಸ್ತವ ವಿಚಾರಕ್ಕೆ ಬಂದರೆ ಮಗಳೊಬ್ಬಳು ತನ್ನ ವಿಧವೆಯಾದ ತಾಯಿಯ ಜೀವನದಲ್ಲಿ ಮತ್ತೆ ಬಣ್ಣವನ್ನು ತುಂಬಲು, ಮತ್ತೊಮ್ಮೆ ತನ್ನ ತಾಯಿಯ ಜೀವನದಲ್ಲಿ ಸಂತೋಷವನ್ನು ನೀಡಲು ಮದುವೆಗೆ ಒಪ್ಪಿಸಿದ್ದು, ಆಕೆಯ ಈ ನಡಿಗೆ ಇದೀಗ ಅನೇಕರ ಜನ ಮೆಚ್ಚುಗೆಯನ್ನು ಪಡೆದುಕೊಂಡಿದೆ‌.

ಜೈಪುರ ಮೂಲಕ ಸಂಹಿತಾ ಎನ್ನುವ ಯುವತಿ ಪ್ರಸ್ತುತ ಗುರುಗಾಂವ್ ನಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ವೃತ್ತಿಯನ್ನು ಮಾಡುತ್ತಿದ್ದಾರೆ. ಸಂಹಿತಾ ಅವರ ತಂದೆ 2016 ರಲ್ಲಿ ನಿಧನರಾಗಿದ್ದರು. ಸಂಹಿತಾ ಹೇಳುವಂತೆ ತಮ್ಮ ತಂದೆಯ ಅಗಲಿಕೆಯ ನಂತರ ತಾಯಿ ಒಂಟಿಯಾಗಿದ್ದರು, ಅವರ ಜೀವನದಲ್ಲಿ ಒಂದು ನೋ ವು ಹಾಗೂ ಬೇಸರ ಅವರನ್ನು ಸದಾ ಕಾಡುತ್ತಿತ್ತು. ಅಲ್ಲದೇ ಸಂಹಿತಾ ಕೂಡಾ ಕೆಲಸದ ನಿಮಿತ್ತ ಗುರುಗಾಂವ್ ಗೆ ಹೋದ ನಂತರವಂತೂ ಗೀತಾ ಅವರು ಒಂಟಿಯಾಗಿ ಬಿಟ್ಟರು. ಇದರಿಂದ ತಾಯಿಯ ಜೀವನದಲ್ಲಿ ಒಂಟಿತನ ಕಾಡಬಾರದೆಂದು ಸಂಹಿತಾ ತಮ್ಮ ತಾಯಿಗೆ ತಿಳಿಸದೆಯೇ ಒಂದು ಮ್ಯಾಟ್ರಿಮೋನಿ ಸೈಟ್ ನಲ್ಲಿ ತಮ್ಮ ತಾಯಿಯ ವಿವರ ಹಾಕಿದ್ದಾರೆ.

ಇದಾದ ನಂತರ ಬಾಂಸವಾಡಾ ದ ನಿವಾಸಿಯಾಗಿರುವ ರೆವಿನ್ಯೂ ಇನ್ಸ್‌ಪೆಕ್ಟರ್ ಜೀ ಗುಪ್ತಾ ಎನ್ನುವವರು ಸಂಹಿತಾ ಅವರನ್ನು ಸಂಪರ್ಕ ಮಾಡಿ ಮದುವೆಯ ವಿಷಯವಾಗಿ ಮಾತು ಕತೆ ನಡೆಸಿದ್ದಾರೆ. ಗುಪ್ತ ಅವರ ಪತ್ನಿ ಕ್ಯಾನ್ಸರ್ ನಿಂದಾಗಿ 2010 ರಲ್ಲಿ ನಿಧನರಾಗಿದ್ದರು.
ಸಂಹಿತಾ ಕೆಲವು ದಿನಗಳು ಕಳೆದ ಮೇಲೆ ಗುಪ್ತ ಅವರನ್ನು ಕರೆ ತಂದು ತಮ್ಮ ತಾಯಿಯ ಜೊತೆಗೆ ಒಂದು ಭೇಟಿಯನ್ನು ಮಾಡಿಸಿದ್ದಾರೆ. ಆಗ ಗೀತಾ ಅವರು ಹಾಗೂ ಗುಪ್ತಾ ಅವರು ಪರಸ್ಪರ ತಮ್ಮ ಜೀವನದ ಬಗ್ಗೆ ಮಾತನಾಡಿಕೊಂಡಿದ್ದು, ಅನೇಕ ವಿಚಾರಗಳನ್ನು ಕುರಿತಾಗಿ ಅವರು ಚರ್ಚೆ ಮಾಡಿದ್ದಾರೆ.

ಸಂಹಿತಾ ಅವರಿಗೆ ಗುಪ್ತಾ ತಮ್ಮ ತಾಯಿಗೆ ಸರಿಯಾದ ಜೋಡಿಯಾಗುವರು ಎನಿಸಿ, ವಿವಾಹದ ಬಗ್ಗೆ ಅವರ ಅಮ್ಮನ ಬಳಿ ಮಾತನಾಡಿ ಒಪ್ಪಿಸಿದ್ದಾರೆ. ಸಂಹಿತಾರ ಈ ಪ್ರಯತ್ನದಿಂದಾಗಿ ಅವರ ತಾಯಿಯ ಜೀವನದಲ್ಲಿ ಬದುಕನ್ನು ನಡೆಸಲು ಈಗ ಹೊಸ ಕಾರಣ ಹಾಗೂ ಹೊಸ ಉತ್ಸಾಹ ಮೂಡಿದೆ. ಸಂಹಿತಾ ಮಾತನಾಡುತ್ತಾ ಬಾಲ್ಯದಲ್ಲಿ ನಮ್ಮನ್ನು ಆರೈಕೆ ಮಾಡಲು ತಾಯಿ ಇರುತ್ತಾರೆ, ಜೀವನದ ಒಂದು ಹಂತದಲ್ಲಿ ಅವರನ್ನು ಕೂಡಾ ಆರೈಕೆ ಮಾಡುವ ಒಂದು ಮನಸ್ಸು ಇರಬೇಕು.ಅದಕ್ಕಾಗಿಯೇ ಆಕೆಗೆ ಮರು ವಿವಾಹ ಮಾಡಿರುವುದಾಗಿ ಹೇಳಿದ್ದಾರೆ. ಸಂಹಿತ ಅವರ ತಾಯಿ ವೃತ್ತಿಯಿಂದ ಶಿಕ್ಷಕಿಯಾಗಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.