ರೈತನ ಮಕ್ಕಳಿಗೆ ಹೆಣ್ಣು ಕೊಡಲ್ಲ ಯಾಕೆ,ರೊಚ್ಚಿಗೆದ್ದ ಸೀರಿಯಲ್ ನಟಿ

Entertainment/ಮನರಂಜನೆ

ಪ್ರಸ್ತುತ ದಿನಗಳಲ್ಲಿ ”ರೈತರ ಬೆಳೆಗೆ ಬೆಲೆ ಸಿಕ್ತಿಲ್ಲ… ರೈತರ ಮಕ್ಕಳಿಗೆ ಹೆಣ್ಣು ಸಿಕ್ತಿಲ್ಲ” ಹಾಗಾಗಿ ರೈತರು ಸಾಮಾಜಿಕ ಸಮಸ್ಯೆಗೆ ಸಿಲುಕಿ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಎಂದು ಸಮರ್ಥನಾ ಮಹಿಳಾ ಮಂಡಳಿಯ ಮುಖಂಡರಾದ ನಾಗರೇವಕ್ಕ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಳೆದ 16 ದಿನಗಳಿಂದ ಕಬ್ಬಿಗೆ 4.500 ರೂ. ಬೆಲೆ ನಿಗದಿಗೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಇತ್ತೀಚಿಗೆ ಆದಿಚುಂಚನಗಿರಿಯಲ್ಲಿ ನಡೆದ ಒಕ್ಕಲಿಗ ವಧು-ವರರ ಸಮಾವೇಶದಲ್ಲಿ 250 ಹೆಣ್ಣುಮಕ್ಕಳಿಗೆ 10,000 ಯುವಕರು ಸೇರಿದ್ದರು.

ಇದರಿಂದ ರೈತರ ಮಕ್ಕಳಿಗೆ ಹೆಣ್ಣು ಮಕ್ಕಳು ಸಿಗುತ್ತಿಲ್ಲ ಎನ್ನುವುದು ಸಾಬೀತಾಗಿದೆ. ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡದಿರುವುದರಿಂದ ಅವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಈ ಕಾರಣದಿಂದ ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ, ಎಲ್ಲರೂ ಕೃಷಿಯನ್ನು ತ್ಯಜಿಸಿ ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗುತ್ತಿದ್ದಾರೆ. ಇದರಿಂದಾಗಿ ಹಳ್ಳಿಗಳು ವೃದ್ಧರಿಂದ ಕೂಡಿದ್ದು, ಕೃಷಿಯನ್ನು ಮಾಡುವವರೇ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರು ಹಾಗೂ ರೈತರ ಮಕ್ಕಳು ಎನ್ನುವ ಕಾರಣಕ್ಕೆ ಹುಡುಗಿಯರು ತಮ್ಮನ್ನು ನಿರಾಕರಿಸುತ್ತಾರೆ. ಹಾಗಾಗಿಯೇ ಹಲವಾರು ಜನ ಹುಡುಗರು ಈಗಾಗಲೇ ಮದುವೆಯೇ ಬೇಡ1 ಎಂದು ಅಂದುಕೊಂಡಿದ್ದಾರೆ. ಅಲ್ಲದೆ ಕೆಲವರಂತೂ ಬೇಸರ ಮಾಡಿಕೊಂಡು ಸಾವಿನ ಮನೆಯ ಬಾಗಿಲನ್ನು ತಟ್ಟಿ ಇನ್ನಿಲ್ಲವಾಗಿದ್ದಾರೆ. ಹೀಗೆ ಮುಂದುವರೆದರೆ ಮುಂದಿನ ಸಂತತಿ ಬೆಳೆಯುವುದಾದರು ಹೇಗೆ ಎಂದು ಯುವಕರು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.