
ಮದುವೆ ಮನೆಯ ಸಮಾರಂಭಗಳು ಎಂದ ಮೇಲೆ ಅಲ್ಲಿ ನೂರಾರು ಟೆನ್ಶನ್ ಗಾಬರಿ ಹಾಗೂ ಭ’ ಯ ಇರುತ್ತದೆ. ಮಧು ಮಕ್ಕಳಿಂದ ಹಿಡಿದು ಕುಟುಂಬಸ್ಥರೆಲ್ಲರೂ ಸಹ ಆ ದಿನ ತುಂಬಾ ಟೆನ್ಶನ್ ನಲ್ಲಿ ಇರುತ್ತಾರೆ. ಮದುವೆ ಎನ್ನುವುದು ತುಂಬಾ ದೊಡ್ಡ ಸಂಭ್ರಮ ಆದರೆ ಅಷ್ಟೇ ದೊಡ್ಡ ಜವಾಬ್ದಾರಿ ಕೂಡ, ಹಾಗಾಗಿ ಯಾವುದೇ ತೊಂದರೆ ಇಲ್ಲದೆ ಮದುವೆ ಮುಗಿದರೆ ಸಾಕು ಎಂದು ಹೆತ್ತವರು ಹಲವಾರು ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಈ ಮದುವೆ ದೃಶ್ಯಗಳನ್ನು ನೋಡುವುದೇ ಒಂದು ಚೆಂದ. ಯಾರೇ ಆದರೂ ಕೂಡ ಮದುವೆ ವೀಡಿಯೋಗಳನ್ನು ನೋಡುತ್ತಿದ್ದರೆ ಕ್ಷಣಹೊತ್ತು ಮೈಮರೆತು ಅಲ್ಲೇ ಕುಳಿತುಬಿಡುತ್ತಾರೆ.
ಅದು ನಮ್ಮ ಭಾರತೀಯ ಸಂಸ್ಕೃತಿಯ ಮದುವೆಗಳು ಎಂದರೆ ಇಲ್ಲಿ ಹಲವಾರು ಶಾಸ್ತ್ರಗಳು ಸಂಪ್ರದಾಯಗಳು ಇರುವುದರಿಂದ ಎಲ್ಲರೂ ಆಸಕ್ತಿಯಿಂದ ಮದುವೆ ಮನೆಯ ವಿಡಿಯೋಗಳನ್ನು ನೋಡಲು ಇಷ್ಟಪಡುತ್ತಾರೆ. ಈಗಿನ ಕಾಲದಲ್ಲಿ ಎಲ್ಲರ ಮದುವೆಗಳಲ್ಲಿ ಕೂಡ ಫೋಟೋಗ್ರಾಫರ್ ಇರುವುದರಿಂದ ಮತ್ತು ಎಲ್ಲರ ಕೈಯಲ್ಲೂ ಮೊಬೈಲ್ ಇರುವುದರಿಂದ ಮದುವೆ ಮನೆಯ ಸಂಭ್ರಮದ ಕ್ಷಣಗಳು ಎಲ್ಲರ ಫೋನಿನಲ್ಲಿ ದಾಖಲಾಗುತ್ತವೆ. ಆದರೆ ಇದರಲ್ಲಿ ಏನಾದರೂ ಸ್ವಲ್ಪ ಎಡವಟ್ಟು ಆದರೂ ಕೂಡ ಕ್ಷಣ ಗಳಿಗೆಯಲ್ಲಿ ಆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಡುತ್ತವೆ.
ಇದಕ್ಕೆ ಸಾಕ್ಷಿಯಾಗಿ ಇಲ್ಲಿಯವರೆಗೂ ನಾವು ಈ ರೀತಿಯ ನೂರಾರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಮದುವೆ ಮನೆಯಲ್ಲಿ ಕೊನೆಹಂತದಲ್ಲಿ ಹುಡುಗಿ ಹೈಡ್ರಾಮ ಮಾಡಿ ಮದುವೆ ನಿಲ್ಲಿಸಿರುವುದು, ಮದುವೆ ಮನೆಯಲ್ಲಿ ಯಾವುದೋ ಶಾಸ್ತ್ರದಲ್ಲಿ ಮಧುಮಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ವೇದಿಕೆಯಿಂದ ಹುಡುಗ ಕೆಳಗಿಳಿದಿರುವುದು, ಮತ್ತು ಮಧುಮಗನ ಎದುರಿನಲ್ಲಿಯೇ ಪ್ರಿಯಕರ ಬಂದು ಹುಡುಗಿಗೆ ತಾಳಿ ಕಟ್ಟಿರುವುದು ಈ ರೀತಿ ಹಲವು ವಿಡಿಯೋಗಳು ವೈರಲ್ ಆಗಿರುವುದನ್ನು ನಾವು ನೋಡಿದ್ದೇವೆ.
ಇದೇ ರೀತಿಯ ಮತ್ತೊಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಪಾಟ್ನಾದಲ್ಲಿ ಈ ಘಟನೆ ನಡೆದಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಇರುವುದು ಏನೆಂದರೆ ಇಲ್ಲಿ ಮದುವೆ ಆಗಬೇಕಾಗಿದ್ದ ಹುಡುಗನು ಚೆನ್ನಾಗಿ ರೆಡಿ ಆಗಿ ವೇದಿಕೆ ಮೇಲೆ ನಿಂತಿರುತ್ತಾನೆ ಆದರೆ ನಿಲ್ಲಲು ಸಹ ಸಾಧ್ಯವಾಗದ ಮಟ್ಟಿಗೆ ಕಂಠಪೂರ್ತಿ ಕುಡಿದು ಬಂದಿರುತ್ತಾನೆ. ಅದೇ ವೇದಿಕೆ ಮೇಲೆ ಮದುವೆ ಆಗಬೇಕಾಗಿದ್ದ ಹುಡುಗಿಯು ಸಹ ಚೆನ್ನಾಗಿ ರೆಡಿ ಆಗಿ ಶಾಸ್ತ್ರಗಳಿಗೆ ಸಿದ್ದಳಾಗಿ ನಿಂತಿರುತ್ತಾರೆ.
ಆದರೆ ಮಧುಮಗ ಒಂದು ಎಡವಟ್ಟು ಮಾಡಿ ವಧುವಿನ ತಂಗಿಯ ಕೈಯಿಂದ ಕ’ ಪಾ’ ಳ ಮೋ’ ಕ್ಷ ಮಾಡಿಸಿಕೊಂಡಿದ್ದಾನೆ. ಮದುವೆ ಮನೆಯಲ್ಲಿ ಹಾರ ಬದಲಾಯಿಸಿಕೊಳ್ಳುವ ಶಾಸ್ತ್ರ ನಡೆಯುತ್ತಿತ್ತು. ಮಧುಮಗಳಿಗೆ ಹಾರ ಹಾಕುವ ಬದಲು ಕುಡಿದ ಮ’ ತ್ತಿನಲ್ಲಿ ಈ ಭೂಪ ಆಕೆಯ ತಂಗಿಯ ಕೊರಳಿಗೆ ಹಾರ ಹಾಕಿದ್ದಾನೆ. ಇದರಿಂದ ಕೋ’ ಪಗೊಂಡ ಆಕೆ ತಕ್ಷಣವೇ ಹಿಂದು ಮುಂದು ನೋಡದೆ ಮಧುಮಗನ ಕ’ ಪಾ’ ಳಕ್ಕೆ ಭಾ’ ರಿಸಿದ್ದಾಳೆ.
ಆದರೆ ಮಧುಮಗಳು ಮಾತ್ರ ಏನೂ ರೀಯಾಕ್ಟ್ ಮಾಡದೇ ಸಪ್ಪಗೆ ನಿಂತಿರುತ್ತಾಳೆ. ಈ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಕ್ಕಿ 1975 ಹೆಸರಿನ ಟ್ವಿಟರ್ ಖಾತೆದಾರರು ಈ ವಿಡಿಯೋವನ್ನು ತಮ್ಮ ಪೇಜಿನಲ್ಲಿ ಹಂಚಿಕೊಂಡಿದ್ದಾರೆ. 39 ಸಾವಿರಕ್ಕೂ ಹೆಚ್ಚಿನ ಮಂದಿ ಈವರೆಗೂ ಈ ವಿಡಿಯೋ ನೋಡಿ ತಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.
ಆ ವಿಡಿಯೊ ಕೆಳಗಿದೆ ನೋಡಿ…
बिहार में शराबबंदी बा … 🤔😅🤣😂🥃 pic.twitter.com/MiWYfF2N2T
— Vikki1975 (@Vikki19751) June 21, 2022
Comments are closed.