ಮದುವೆಯ ಸೀಸನ್ ಸಮೀಪಿಸುತ್ತಿದ್ದಂತೆ, ಮದುವೆಯ ಸಂದರ್ಭದಲ್ಲಿ ವಧು-ವರರ ಡ್ಯಾನ್ಸ್ ಗಳ ವೀಡಿಯೋಗಳು, ಇನ್ನೂ ಕೆಲವು ಸಲ ಮದುವೆಯಲ್ಲಿ ನಡೆದ ಫನ್ನಿ ಸನ್ನಿವೇಶಗಳು ಮತ್ತು ಕೆಲವೊಮ್ಮೆ ಶಾ ಕ್ ನೀಡುವ ಹಾಗೆ ಮದುವೆ ಮಂಟಪದಲ್ಲೇ ನಡೆದ ಹೊ ಡೆ ದಾ ಟದ ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಕೆಲವೊಮ್ಮೆ ಮದುವೆಯ ಕುರಿತಾಗಿ ತಮಾಷೆಯ ವೀಡಿಯೊಗಳು ವೈರಲ್ ಆಗುತ್ತವೆ, ಅದನ್ನು ನೋಡಿದಾಗ ನಮಗೆ ನಮ್ಮ ನಗುವನ್ನು ಕಂಟ್ರೋಲ್ ಮಾಡೋದು ಸಹಾ ಕಷ್ಟವಾಗಿ ಬಿಡುತ್ತದೆ.
ಇದೀಗ ಅಂತಹ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಮತ್ತೊಮ್ಮೆ ಜನರಿಗೆ ನಗುವಿನ ಹೂರಣವನ್ನು ಹಂಚುತ್ತಿದೆ. ಹೌದು, ಹೊಸ ವೀಡಿಯೋದಲ್ಲಿ ಸನ್ನಿವೇಶದಲ್ಲಿ ಮದುವೆಯ ವೇದಿಕೆಯಲ್ಲೇ ವಧು-ವರರು ಪರಸ್ಪರ ಹೊಡೆದಾಡಿಕೊಂಡಿದ್ದು, ನಂತರ ಏನಾಯಿತು ಎಂಬುದನ್ನು ನೀವು ಊಹೆ ಕೂಡಾ ಮಾಡಲು ಸಾಧ್ಯವಿಲ್ಲ ಎಂದರೆ ಅಚ್ಚರಿ ಆಗಬಹುದು.
ವೀಡಿಯೋ ಎಷ್ಟು ತಮಾಷೆಯಾಗಿದೆಯೆಂದರೆ ಇದನ್ನು ಜನ ಮತ್ತೆ ಮತ್ತೆ ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಮದುವೆಯ ಸಂಭ್ರಮದ ವಾತಾವರಣದಲ್ಲಿ ವೇದಿಕೆಯಲ್ಲಿ ವರ ವಧುವಿಗೆ ಸಿಹಿ ತಿನ್ನಿಸುತ್ತಿರುವುದನ್ನು ನೋಡಬಹುದು. ಆದರೆ ವಧುವಿಗೆ ಅದನ್ನು ತಿನ್ನಲು ಮನಸ್ಸಿಲ್ಲ ಎನ್ನುವಂತೆ ಕಾಣುತ್ತಿದ್ದು, ವರನು ಅವಳಿಗೆ ಸಿಹಿಯನ್ನು ಬಲವಂತವಾಗಿ ತಿನ್ನಿಸುತ್ತಿದ್ದಾನೆ.
ವರನ ಈ ವರ್ತನೆಯಿಂದ ಒಂದು ಹಂತದ ನಂತರ ತಾಳ್ಮೆ ಕಳೆದುಕೊಂಡ ವಧು ಕೋಪಗೊಳ್ಳುತ್ತಾಳೆ ಹಾಗೂ ಅದೇ ಕೋಪದಲ್ಲಿ ಅವಳು ವರನಿಗೆ ಸಿಟ್ಟಿನಿಂದ ಬಲವಾಗಿ ಕಪಾಳಮೋಕ್ಷ ಮಾಡುತ್ತಾಳೆ. ಆಗ ವರನು ಸುಮ್ಮನೆ ಇರಲು ಸಾಧ್ಯವೇ ? ಆತನೂ ಕೂಡಾ ವಧುವಿನ ಕಪಾಳಕ್ಕೆ ಬಾರಿಸಲು ಶುರುಮಾಡುತ್ತಾನೆ ಮತ್ತು ಇಬ್ಬರೂ ಒಬ್ಬರಿಗೊಬ್ಬರು ಕಪಾಳ ಮೋಕ್ಷ ಮಾಡಿದ್ದಾರೆ.
ಇಬ್ಬರೂ ಪರಸ್ಪರ ತಲೆ ಕೂದಲನ್ನು ಹಿಡಿದು ಎಳೆದಾಡಿದ್ದಾರೆ, ಒಬ್ಬರ ಮೇಲೆ ಒಬ್ಬರು ಎರಗಿ ಸಹನೆ ಕಳೆದುಕೊಂಡಂತೆ ವರ್ತಿಸಿದ್ದಾರೆ. ನಂತರ ಅವರ ಜಗಳವನ್ನು ನಿಲ್ಲಿಸಲು, ಅತಿಥಿಗಳು ಸಹಾ ವೇದಿಕೆಯ ಮೇಲೆ ಬರುತ್ತಾರೆ, ಯಾರೇ ಬಂದರೂ ವಧು ವರರನ್ನು ನಿಯಂತ್ರಿಸಲು ಆಗಲಿಲ್ಲ, ಬದಲಿಗೆ ಅತಿಥಿಗಳು ಸಹಾ ಹೊಡೆದಾಡಿದ್ದಾರೆ.
ಜನರು ಈ ವೈರಲ್ ವೀಡಿಯೋವನ್ನು ಬಹಳ ಇಷ್ಟಪಡುತ್ತಿದ್ದಾರೆ. ನೀವೂ ಕೂಡಾ ಈ ಹಿಂದೆ ವಧು-ವರರ ನಡುವಿನ ಜಗಳದ ವೀಡಿಯೋ ನೋಡಿರಬಹುದು. ಈ ವೀಡಿಯೋವನ್ನು ಟ್ವಿಟರ್ ನಲ್ಲಿ @gharkekalesh ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೋ ಇಲ್ಲಿಯವರೆಗೆ ಸುಮಾರು 60 ಸಾವಿರ ಬಾರಿ ವೀಕ್ಷಿಸಲ್ಪಟ್ಟಿದೆ.
ಈ ವೀಡಿಯೋಗೆ ಜನರು ಸಾಕಷ್ಟು ವ್ಯಂಗ್ಯವಾಡುತ್ತಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು, ಇಲ್ಲಿ ಮದುವೆ ನಡೆಯುತ್ತಿದೆಯೋ ಅಥವಾ ವಿಚ್ಛೇದನವೋ ಎಂದಿದ್ದಾರೆ. ಇನ್ನೊಬ್ಬರು, ಅವರು ಮದುವೆಯಾದರೋ ಇಲ್ಲವೋ? ಎಂದು ಪ್ರಶ್ನೆ ಮಾಡಿದ್ದಾರೆ.
ಆ ವಿಡಿಯೊ ಕೆಳಗಿದೆ ನೋಡಿ…
Kalesh B/w Husband and Wife in marriage ceremony pic.twitter.com/bjypxtJzjt
— Ghar Ke Kalesh (@gharkekalesh) December 13, 2022