ಸ್ನೇಹಿತರೆ, ನಮ್ಮ ಸನಾತನ ಧರ್ಮದಲ್ಲಿ ಇರುವಂತಹ 18 ಮಹಾಪುರಾಣದಲ್ಲಿ ವಿಶಿಷ್ಟವಾದ ಗರುಡ ಪುರಾಣ ಕೂಡ ಒಂದು. ಭಗವಾನ್ ಶ್ರೀ ವಿಷ್ಣುವಿನ ವಾಹನ ವಾಗಿರುವಂತಹ ಗರುಡ ದೇವನು ತನ್ನ ಆರಾಧ್ಯನ ಜೊತೆಗೆ ಜಗತ್ತಿನ ಕೆಲವು ನಿಗೂಢ ವಿಚಾರದ ಕುರಿತು ಸಂಭಾಷಣೆ ನಡೆಸುವಂತಹ ಪ್ರತಿಯೊಂದು ಮಾಹಿತಿಯೂ ಕೂಡ ಈ ಒಂದು ಪುರಾಣದಲ್ಲಿದೆ.
ಗರುಡ ಮತ್ತು ವಿಷ್ಣುವಿನ ನಡುವೆ ಸ್ತ್ರೀ ಕುರಿತಾದ ಮಾಹಿತಿಯು ಉಲ್ಲೇಖವಾಗುತ್ತದೆ. ಅದರಂತೆ ನಾವಿವತ್ತು ಗರುಡ ಪುರಾಣದಲ್ಲಿ ತಿಳಿಸಿರುವಂತೆ ಹುಡುಗಿಯರಲ್ಲಿ ಯಾವ ರೀತಿಯ ನಾಲ್ಕು ಗುಣ ಇದ್ದರೆ ಗಂಡಸರಿಗೆ ಒಳಿತು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸಲಿದ್ದೇವೆ.
ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮನೆ ಕೆಲಸದ ನಿಪುಣರು.. ಹೌದು ಗೆಳೆಯರೇ ಗರುಡ ಪುರಾಣದ ಪ್ರಕಾರ ಸ್ತ್ರೀಯರು ಎಲ್ಲಾ ಕೆಲಸಗಳಿಗೆ ತಮ್ಮ ಜಾಣತನವನ್ನು ತೋರಿಸಿ ನಿಪುಣರಾಗಿರಬೇಕು. ಯಾವುದೇ ಕೆಲಸ ಕೊಟ್ಟರು ಇದು ನನಗೆ ಬರುವುದಿಲ್ಲ ಎಂದು ಹೇಳಬಾರದು.
ಏಕೆಂದರೆ ಸಮಯ ಎಲ್ಲರಿಗೂ ಒಂದೇ ಆಗಿರುವುದಿಲ್ಲ, ಕೆಲವೊಮ್ಮೆ ಅನಿವಾರ್ಯವಾಗಿ ನಮಗೆ ಬಾರದ ಕೆಲಸವನ್ನು ಮಾಡಲೇಬೇಕಾದಂತಹ ಪ್ರಸಂಗ ಎದುರಾಗಬಹುದು. ಹೀಗಾಗಿ ಯಾವ ಹುಡುಗಿಯರಿಗೆ ಕೊಟ್ಟಂತಹ ಕೆಲಸವನ್ನು ಬಹಳನೇ ಶಿಸ್ತಿನಿಂದ ಮಾಡಲು ಬರುತ್ತದೋ ಅಂತ ಹುಡುಗಿಯರನ್ನು ಪಡೆದ ಗಂಡಂದಿರು ಬಹಳನೇ ಪುಣ್ಯ.
ಸಿಹಿ ಮಾತುಗಾರರು.. ನಮ್ಮ ಸನಾತನ ಧರ್ಮದ ಪ್ರಕಾರ ಪ್ರತಿಯೊಬ್ಬ ಮನುಷ್ಯನೂ ಮಾತಿನ ಮೇಲೆ ನಿಗಾ ಇಟ್ಟುಕೊಂಡೆ ಮಾತನಾಡಬೇಕು. ಎಂದಿಗೂ ಸಹ ಭಾಷೆ ಹದಗೆಡಲು ಬಿಡಬಾರದು. ಅದರಂತೆ ಯಾವ ಹೆಣ್ಣು ಮಕ್ಕಳು ಬಹಳ ಸಿಹಿಯಾಗಿ ಮಾಧುರ್ಯ ತುಂಬಿದಂತೆ ಮಾತನಾಡುತ್ತಾರೋ ಅಂತಹ ಹೆಣ್ಣು ಮಕ್ಕಳು ಶುದ್ಧ ಮನಸ್ಸನ್ನು ಹೊಂದಿರುತ್ತಾರೆ. ಅಲ್ಲದೆ ನಿಮ್ಮ ಸೋಲಿನಲ್ಲಿಯೂ ಧೈರ್ಯ ತುಂಬುವ ಶಕ್ತಿ ಅವರಲ್ಲಿ ಇರುತ್ತದೆ.
ಧರ್ಮ ನಿಷ್ಠೆ.. ಇತ್ತೀಚಿನ ಕಾಲವು ತುಂಬಾ ಬದಲಾಗಿರುವ ಕಾರಣ ಹೆಣ್ಣುಮಕ್ಕಳು ಕೂಡ ಗಂಡಸರಂತೆ ಹೊರಗೆ ಹೋಗಿ ದುಡಿಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಂತ ಅವರು ತಮ್ಮ ಮನೆಯವರ ಮೇಲಿನ ಪ್ರೀತಿಯನ್ನು ಎಂದಿಗೂ ಬಿಡಬಾರದು. ಹಾಗೂ ವಯಸ್ಸಾದವರಿಗೆ ಮತ್ತು ಗಂಡನ ಸೇವೆಯನ್ನು ಮಾಡುವುದೇ ಧರ್ಮ ನಿಷ್ಠೆಯೆಂದು ಗರುಡ ಪುರಾಣ ತಿಳಿಸುತ್ತದೆ.
ಧರ್ಮದ ಅನುಸರಣೆ.. ಯಾವ ಹೆಣ್ಣು ಮಗಳು ಆಧ್ಯಾತ್ಮಿಕ ಧಾರ್ಮಿಕ ಚಿಂತನೆಯಲ್ಲಿ ಸದಾ ಕಾಲ ಮಗ್ನರಾಗಿರುತ್ತರೋ ಅವರ ಮನಸ್ಸು ಶುದ್ದವಾಗಿರುತ್ತದೆ ಹಾಗೂ ಅವರಿಂದಾಗಿ ಮನೆಗೆ ಲಕ್ಷ್ಮಿ ಒಲಿಯುತ್ತಾಳೆ. ಹೀಗಾಗಿ ಹೆಣ್ಣು ಮಕ್ಕಳು ಸದಾ ಕಾಲ ಧರ್ಮವನ್ನು ಬಿಡದೆ ಆಯಾ ಧರ್ಮಕ್ಕೆ ಸಂಬಂಧಿಸಿದಂತಹ ದೇವರುಗಳ ಪೂಜೆ ಮಾಡಬೇಕೆಂದು ಗರುಡ ಪುರಾಣದಲ್ಲಿ ಉಲ್ಲೇಖವಿದೆ.ಈ ಮೇಲ್ಕಂಡ 4 ಗುಣಗಳು ನೀವು ಕಂಡಂತಹ ಹುಡುಗಿಯಲಿದ್ದರೆ ತಪ್ಪದೆ ಆಕೆಯನ್ನು ನಿಮ್ಮವಳನ್ನಾಗಿಸಿಕೊಳ್ಳಿ.