ಮಂತ್ರಾಲಯ ರಾಘವೇಂದ್ರ ಸ್ವಾಮಿಗಳು ಇದ್ದ ಮನೆ ಹೇಗಿತ್ತು ಗೊತ್ತಾ, ಭಕ್ತರು ತಪ್ಪದೇ ನೋಡಿ

ಪವಾಡ ಪುರುಷ . ಬೇಡಿದ್ದನ್ನು ನೀಡಿ ಹರಸುವ ಗುರು ರಾಘವೇಂದ್ರರ ದರ್ಶನಕ್ಕೆ ಸಾಮಾನ್ಯವಾಗಿ ಮಂತ್ರಾಲಯ ಕ್ಕೆ ತೆರಳುವುದು ವಾಡಿಕೆ.. ಆದರೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ವಾಸವಾಗಿದ್ದ ಇನ್ನೊಂದು ಪರಮ ಪಾವನ ಕ್ಷೇತ್ರವಿದೆ ಹೌದು ಬಿಚ್ಚಾಲೆ ಎನ್ನುವ ಹಳ್ಳಿಯು ಮಂತ್ರಾಲಯದಿಂದ 20 ಕಿ.ಮೀ. ದೂರದಲ್ಲಿದೆ.

ಅಲ್ಲಿ ನಾವೆಲ್ಲ ಗುರುವೆಂದು ಪೂಜಿಸುವ ರಾಘವೇಂದ್ರ ಸ್ವಾಮಿಗಳು 12 ವರ್ಷಗಳ ಕಾಲವನ್ನು ಈ ಬಿಚ್ಚಾಲೆ ಹಳ್ಳಿಯಲ್ಲಿಯೇ ಕಳೆದರು ಎನ್ನಲಾಗುತ್ತದೆ. ಬಿಚ್ಚಾಲೆಯನ್ನು ಭಿಕ್ಷಾಲಯ ಎಂತಲೂ ಕರೆಯಲಾಗುತ್ತದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಮಂತ್ರಾಲಯ ಬರುತ್ತದೆ. 2009ರ ವೇಳೆ ಅತಿಯಾದ ಮಳೆಯಿಂದ ಮಂತ್ರಾಲಯ ಹಾಗೂ ಸುತ್ತಲಿನ ಹಳ್ಳಿಗಳೂ ಮುಳುಗಿ ಹೋಗಿದ್ದವು ಎಂದು ಹೇಳಲಾಗುತ್ತದೆ.

ಅಪ್ಪಣಚಾರ್ಯರು ವೇದ ಹಾಗೂ ಉಪನಿಷತ್‍ಅನ್ನು ತಿಳಿದ ಒಬ್ಬ ಮಹಾನ ವಿದ್ವಾಂಸ. ಇವರು ತನ್ನ ವಿದ್ಯಾರ್ಥಿಗಳಿಗೆ ಸನ್ಯಾಸಿಗಳ ಜೀವನದ ಕಷ್ಟ ಏನೆಂಬುದು ಅರ್ಥವಾಗಬೇಕು ಎನ್ನುವ ಉದ್ದೇಶದಿಂದ, ಬಗಲಿಗೆ ಜೋಳಿಗೆಯನ್ನು ಹಾಕಿಕೊಂಡು ಭಿಕ್ಷೆ ಬೇಡಿ ಬರಬೇಕು ಎಂದು ಹೇಳಿದರು. ಶಿಶ್ಯರು ಬೇಡಿ ತಂದ ಅಕ್ಕಿಯನ್ನು ತೆಗೆದುಕೊಂಡು ಒಂದು ಬಟ್ಟೆಯಲ್ಲಿ ಕಟ್ಟಿದರು. ನಂತರ ಅದನ್ನು ಹತ್ತಿರದಲ್ಲಿರುವ ಅಂಟಿನ ಮರದ ಕೊಂಬೆಯೊಂದಕ್ಕೆ ಕಟ್ಟಿದರು.

ಇದಾದ ಸ್ವಲ್ಪ ಸಮಯದಲ್ಲೇ ಅಕ್ಕಿಯು ಅನ್ನವಾಯಿತು. ಅಷ್ಟರಲ್ಲಿ ಅಪ್ಪಣ್ಣಚಾರ್ಯರು ತಮ್ಮ ಪ್ರವಚನವನ್ನು ನಿಲ್ಲಿಸಿದರು. ಇವರ ಈ ಒಂದು ಅಗಾಧ ಶಕ್ತಿಯನ್ನು ಮೆಚ್ಚಿ, ಮಧ್ವ ಸನ್ಯಾಸಿ ರಾಘವೇಂದ್ರಸ್ವಾಮಿಗಳು ತಮ್ಮ ದೈವ ಶಕ್ತಿಯಿಂದ ಅಪ್ಪಣ್ಣಚಾರ್ಯರನ್ನು ಮುಟ್ಟಿ ಆಶೀರ್ವದಿಸಿದರು. ಅಂದಿನಿಂದ ಆ ಊರಿಗೆ ಬಿಚ್ಚಾಲೆ ಎನ್ನುವ ಹೆಸರು ಬಂತು ಎಂದು ಹೇಳಲಾಗುತ್ತದೆ.

ಒಂದು ದಿನ ಅಪ್ಪಣ್ಣಾಚಾರ್ಯರ ಕನಸಿನಲ್ಲಿ ರಾಘವೇಂದ್ರಸ್ವಾಮಿಗಳು ಬಂದು ಏಕಶಿಲೆಯಲ್ಲಿ ಕೆತ್ತಿದ ಮೂರ್ತಿಯನ್ನು ತುಂಗಭದ್ರಾ ನದಿಯ ದಡದಲ್ಲಿ ಸ್ಥಾಪಿಸಬೇಕು, ನಂತರ ಅಲ್ಲಿ ಸರಿಯಾದ ಆಚರಣೆ ನಡೆಯಬೇಕು ಎಂದು ಹೇಳಿದರು. ಅಪ್ಪಣ್ಣಾಚಾರ್ಯರು ಸ್ವಾಮಿಗಳ ಆಶೀರ್ವಾದದಂತೆ ಆಗಲಿ ಎಂದು ನದಿಯ ದಡದಲ್ಲಿ ಮೂರ್ತಿಯನ್ನು ನಿರ್ಮಿಸಿದರು.

ಬಿಚ್ಚಾಲೆಯಲ್ಲಿ ಅಪ್ಪಣ್ಣಚಾರ್ಯರ ಮನೆಯೂ ಒಂದು ಪ್ರಮುಖ ಆಕರ್ಷಣೆ. ರಾಘವೇಂದ್ರ ಸ್ವಾಮಿಗಳು ಸುಮಾರು 12 ವರ್ಷಗಳ ಕಾಲ ಈ ಮನೆಯಲ್ಲೇ ವಾಸವಿದ್ದರು. ಈಗಲೂ ಇಲ್ಲಿ ಆಂಜನೇಯ ಹಾಗೂ ನಾಗದೇವರು ಇರುವುದನ್ನು ನೋಡಬಹುದು. ಅಲ್ಲದೆ ರಾಘವೇಂದ್ರ ಸ್ವಾಮಿಗಳು ಮಲಗುತ್ತಿದ್ದ ಸ್ಥಳವನ್ನು ಗುರುತಿಸಿಡಲಾಗಿದೆ. ಅಪ್ಪಣ್ಣಚಾರ್ಯರು ರಾಘವೇಂದ್ರ ಸ್ವಾಮಿಗಳಿಗೆ ಚಟ್ನಿ ಬೀಸಲು ಬಳಸುತ್ತಿದ್ದ ರುಬ್ಬುವ ಗುಂಡು ಸಹ ಇದೆ.
ಮಂತ್ರಾಲಯದಲ್ಲಿ ಆರಾಧಿಸಲಾಗುವ ಎಲ್ಲಾ ಬಗೆಯ ಸಾಂಪ್ರದಾಯಿಕ ಆರಾಧನೆಗಳನ್ನು ಬಿಚ್ಚಾಲೆಯಲ್ಲೂ ಮಾಡಲಾಗುತ್ತದೆ. ಇಲ್ಲಿ ಪ್ರತಿ ವರ್ಷ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವವು ಬಹಳ ವಿಜೃಂಭಣೆಯಿಂದ ಮೂರು ದಿನಗಳಕಾಲ ನಡೆಯುತ್ತದೆ.

You might also like

Comments are closed.