ಕರ್ನಾಟಕದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿದ್ದ ವಿಜಯ್ ಮಲ್ಯ ಬಗ್ಗೆ ಗೊತ್ತಿರಲೇ ಬೇಕು. ಒಂದು ಕಾಲದಲ್ಲಿ ವಿಜಯ್ ಮಲ್ಯ ಮುಟ್ಟಿದೆಲ್ಲಾ ಚಿನ್ನ ಅನ್ನುವಂತಿತ್ತು. ಮೂಲತಃ ಮಂಗಳೂರಿನವರಾದ ವಿಜಯ್ ಮಲ್ಯ ಡಿಸೆಂಬರ್ 18 ರ, 1955 ರಂದು ಹುಟ್ಟಿದ್ದರು. ಆದರೆ ಶಿಕ್ಷಣ ಎಲ್ಲಾ ಮುಗಿಸಿದ್ದು ಕಲ್ಕತ್ತಾದಲ್ಲಿ. ವಿಜಯ್ ಮಲ್ಯ ಅವರು ತನ್ನ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಕಂಪೆನಿಯ ಮಾಲೀಕರಾಗುತ್ತಾರೆ. ತನ್ನ 28 ನೇ ವಯಸ್ಸಿಗೆ ಯುಬಿ ಸಂಸ್ಥೆಯ ಕಿಂಗ್ ಫಿಶರ್ ಬಿಯರ್ ಗೆ ಒಡೆಯರಾಗುತ್ತಾರೆ.
ಅಲ್ಲಿಂದ ಅವರ ಅದೃಷ್ಟ ಖುಲಾಯಿಸಿ, ಬೇರೆ ಬ್ರಾಂಡ್ ಗಳನ್ನು ತನ್ನದಾಗಿಸಿಕೊಂಡು, ಹಲವಾರು ಕಂಪೆನಿಗಳ ಮಾಲೀಕರಾಗುತ್ತಾರೆ. ಸಾವಿರಾರು ಕೋಟಿ ಒಡೆಯರಾಗುತ್ತಾರೆ. ಒಂದು ಬಾರಿ ದುಡ್ಡು ತನ್ನ ಮುಂದೆ ಕುಣಿಯಲು ಆರಂಭಿಸಿದರೆ ಮನುಷ್ಯ ಇನ್ನಷ್ಟು ದುಡ್ದಿಗಾಗಿ ಆಸೆ ಪಡುವುದು ಸಹಜ. ಅದರಂತೆ ಮಲ್ಯ ಅವರು ಕೂಡ ಏರ್ ಲೈನ್ಸ್ ಸಂಸ್ಥೆ ಆರಂಭಿಸುತ್ತಾರೆ. ಅದೇ ಅವರಿಗೆ ಸಮಸ್ಯೆ ತಂದೊಡ್ಡುತ್ತದೆ. 2016ರರಲ್ಲಿ ವಿಜಯ್ ಮಲ್ಯ ಎಸ್ ಬಿ ಐ ಬ್ಯಾಂಕ್ ಸೇರಿದಮ್ತೆ ಒಟ್ಟು 12 ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ಸಾಲ ಪಡೆಯುತ್ತಾರೆ. ಆದರೆ ತನ್ನ ಬ್ಯುಸಿನೆಸ್ ನಲ್ಲಿ ನಷ್ಟ ಅನುಭವಿಸಿ, ಸಾಲ ತೀರಿಸಲಾಗದೆ ಲಂಡನ್ ಗೆ ಹಾರಿ ಹೋಗುತ್ತಾರೆ.
ಇತ್ತ ಭಾರತದ ಸರ್ಕಾರ ಮಲ್ಯ ಅವರ ಬಂಧನಕ್ಕೆ ಆದೇಶ ನೀಡುತ್ತದೆ. ಆದರೆ ಇಷ್ಟು ವರ್ಷವಾದರೂ ಮಲ್ಯ ಅವರಿಗೆ ಸಾಲ ತೀರಿಸಲೂ ಆಗಿಲ್ಲ, ಇತ್ತ ಬಂಧಿಸಲೂ ಆಗಿಲ್ಲ. ಮಲ್ಯ ಮಾತ್ರ ಲಂಡನ್ ನಲ್ಲಿಯೇ ಡಾಂಡಾ ಹೂಡಿ ಅಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಇನ್ನು ವಿಜಯ್ ಮಲ್ಯ ಅವರು ಮೂರು ಮದುವೆ ಆಗಿರುವ ಬಗ್ಗೆ ಅನೇಕರಿಗೆ ಗೊತ್ತಿಲ್ಲದೇ ಇರಬಹುದು. ಆ ಮೂವರು ಮಡದಿಯರು ಯಾರು, ಹೇಗಿದ್ದಾರೆ ಅನ್ನುವುದನ್ನು ನಾವಿವತ್ತು ಹೇಳುತ್ತೇವೆ. ಮಲ್ಯ ಅವರ ಮೊದಲನೇ ಪತ್ನಿಯ ಹೆಸರು ಸಮೀರಾ ಶರ್ಮಾ.
ಏರ್ ಇಂಡಿಯಾದಲ್ಲಿ ಗನನ ಸಖಿಯಾಗಿ ಕೆಲಸ ಮಾಡ್ತಿದ್ದ ಸಮೀರಾ ಅವರನ್ನು 1986 ರಲ್ಲಿ ಮಲ್ಯ ಮದುವೆ ಆಗುತ್ತಾರೆ. ಇವರಿಬ್ಬರ ಮಗನೇ ಸಿದ್ಧಾರ್ಥ್ ಮಲ್ಯ. ಆದರೆ ಮಗ ಹುಟ್ಟಿದ ಕೆಲವೇ ವರ್ಷಗಳಲ್ಲಿ ಸಮೀರಾ ಅವರು ಮಲ್ಯರಿಗೆ ಡೈವೋರ್ಸ್ ಕೊಡುತ್ತಾರೆ. ಇದೀಗ ಮಗನೊಂದಿಗೆ ಅಮೇರಿಕಾದಲ್ಲಿ ವಾಸವಾಗಿದ್ದಾರೆ. ಆ ನಮ್ತರ ವಿಜಯ್ ಮಲ್ಯ ಅವರು ತನ್ನ ಹಳೆ ಸ್ನೇಹಿತೆ ರೇಖಾ ಅವರನ್ನು ಮದುವೆ ಆಗುತ್ತಾರೆ. ಆದರೆ ರೇಖಾ ಅವರಿಗೆ ಈ ಹಿಂದೆನೇ ಮದುವೆ ಆಗಿತ್ತು. ಅವರು ತನ್ನ ಗಂಡನಿಂದ ದೂರ ಆಗಿದ್ದರು. ಆ ಸಮಯದಲ್ಲಿ ರೇಖಾ ಅವರಿಗೆ ಮಗಳು ಕೂಡ ಇದ್ದಳು.
ಹೀಗಾಗಿ ರೇಖಾ ಅವರನ್ನು ಮದುವೆಯಾದ ಮಲ್ಯ ಅವ್ರು ಅವರ ಮಗಳನ್ನು ಕೂಡ ದತ್ತು ತೆಗೆದುಕೊಳ್ಳುತ್ತಾರೆ. ಆ ನಂತರ ಮಲ್ಯ ಹಾಗೂ ರೇಖಾ ಅವರಿಗೆ ಮತ್ತೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟುತ್ತಾರೆ. ಹೀಗೆ ತನ್ಯ ಮಲ್ಯ, ಲೀನಾ ಮಲ್ಯ, ಲೈಲಾ ಮಲ್ಯ ಅನ್ನುವ ಮೂವರು ಹೆಣ್ಣು ಮಕ್ಕಳ ತಂದೆ ಆಗುತ್ತಾರೆ. ಲೈಲಾ ಮಲ್ಯ ರೇಖಾ ಅವರ ಮೊದಲ ಗಂಡನ ಮಗಳು. ಎರಡನೇ ಮಗಳು ಲೀನಾ ಮಲ್ಯ ಮೂರನೇ ಮಗಳು ತನ್ಯ ಮಲ್ಯ ಇಬ್ಬರೂ ಕ್ಯಾಲಿಫೋರ್ನಿಯಾದಲ್ಲಿದ್ದಾರೆ. ಅದೇ ರೀತಿ ಮತ್ತೆ ಮೂರನೇ ಮದುವೆ ಆಗುತ್ತಾರೆ ವಿಜಯ್ ಮಲ್ಯ.
ಅವರ ಹೆಸರು ಪಿಂಕಿ ತಲ್ವಾನಿ. ಅವರು ಕಿಂಗ್ ಫಿಷರ್ ಏರ್ ಲೈನ್ಸ್ ನಲ್ಲಿ ಗಗನ ಸಖಿಯಾಗಿದ್ದರು. ಇಬ್ಬರೂ ಸತತ ಮೂರು ವರ್ಷ ಸಂಬಂಧದಲ್ಲಿದ್ದರು. ಕೊನೆಗೆ ಲಂಡನ್ ನಲ್ಲಿಯೇ ಮದುವೆಯಾದರು. ಇದೀಗ ಪಿಂಕಿ ಜೊತೆನೇ ಮಲ್ಯ ಅವರು ಜೀವನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ಮೇಲೆ ಬಂಧನದ ಕೇಸ್ ಇದ್ದರೂ ವಿಜಯ್ ಮಲ್ಯ ಮಾತ್ರ ಸದಾ ಶೋಕಿ ಜೀವನ ನಡೆಸುತ್ತಲೇ ಇದ್ದಾರೆ. ಇಷ್ಟು ವರ್ಷ ಆದರೂ ಮಲ್ಯ ಅವರನ್ನು ಬಂಧಿಸಲು ಸಾಧ್ಯ ಆಗದೇ ಇರುವುದು ಸರ್ಕಾರದ ವೈಫಲ್ಯ ಅಂದರೆ ತಪ್ಪಾಗಲ್ಲ.