
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ನೀವು ಕೇಳಿರಬಹುದು. ಚಿತ್ರದ ನಿರ್ಮಾಪಕರು, ನಿರ್ದೇಶಕರು, ಜೊತೆಯಲ್ಲಿ ಹೀರೋಗಳು ಕೂಡ ಮಹಿಳಾ ಕಲಾವಿದರನ್ನು ಲೈಂ’ಗಿಕ ಸಂಧಾನಕ್ಕೆ ಕರೆಯುವುದನ್ನು ಕಾಸ್ಟಿಂಗ್ ಕೌಚ್ ಎಂದು ಕರೆಯುತ್ತಾರೆ. ಅಂದರೆ ತಾವು ಹೇಳಿದ ಹಾಗೆ ಕೇಳಿದರೆ ಮಾತ್ರ ಆ ಕಲಾವಿದೆಗೆ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಲಾಗುತ್ತದೆ. ಇಲ್ಲವಾದರೆ ಆಕೆಯನ್ನು ಮೂಲೆಗುಂಪು ಮಾಡಲಾಗುತ್ತೆ. ಇನ್ನು ಸಿನಿಮಾದಲ್ಲಿ ತಮಗೆ ಆಗಿರುವ ಇಂತಹ ಅನುಭವವನ್ನು ಹಲವು ತಾರೆಯರು ಹಂಚಿಕೊಂಡಿದ್ದಾರೆ.
ಆದರೆ ಇನ್ನಷ್ಟು ಜನರು ಅದನ್ನು ಬಾಯಿ ಬಿಟ್ಟು ಹೇಳುವುದಕ್ಕೆ ಇಂದಿಗೂ ಹಿಂಜರಿಯುತ್ತಾರೆ. ಇದೀಗ ಕಾಸ್ಟಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟಿ ಮಲ್ಲಿಕಾ ಶರಾವತ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಹೌದು, ಬಾಲಿವುಡ್ ನಲ್ಲಿ ಸಾಕಷ್ಟು ಬೋಲ್ಡ್ ಆಗಿ ಅಭಿನಯಿಸುತ್ತಿದ್ದ ಮಲ್ಲಿಕಾ ಶರಾವತ್ ಬಾಲಿವುಡ್ ನ ಕ’ರಾಳ ಮುಖವನ್ನು ಜಗತ್ತಿಗೆ ಪರಿಚಯಿಸಿದ್ದಾರೆ.
ಇವರು ಟಾಪ್ ಹೀರೋಗಳ ಮೇಲೆಯೂ ಕೂಡ ಈ ವಿಷಯವಾಗಿ ಆ’ರೋಪವನ್ನು ಮಾಡಿದ್ದಾರೆ. ಕೆಲವು ಹೀರೋಗಳು ಕೂಡ ನನ್ನನ್ನ ಲೈಂ’ಗಿಕ ಸಂಧಾನಕ್ಕೆ ಕರೆಯುತ್ತಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದಕ್ಕೆ ನನಗೆ ಬಾಲಿವುಡ್ ನ ಕೆಲವು ನಟರೊಂದಿಗೆ ಅಭಿನಯಿಸುವುದಕ್ಕೆ ಅವಕಾಶಗಳು ದೊರೆಯಲಿಲ್ಲ ಎಂದು ಮಲ್ಲಿಕಾ ಶರಾವತ್ ಹೇಳಿದ್ದಾರೆ. ಇನ್ನು ಒಂದು ಸಿನಿಮಾದಲ್ಲಿ ನಟಿಸುತ್ತಿರುವಾಗ ಮಧ್ಯರಾತ್ರಿ ಅದೇ ಸಿನಿಮಾದ ಹೀರೋ ಮಂ’ಚಕ್ಕೆ ಬರುವಂತೆ ಕರೆಯುತ್ತಾನೆ.
ಹಾಗೆ ಆತನಿಗೆ ಸಪೋರ್ಟ್ ಮಾಡದೆ ಇದ್ದಾಗ ಆ ಸಿನಿಮಾದಿಂದ ನಿಮ್ಮನ್ನ ಹೊರಗೆ ಇಡುತ್ತಾನೆ. ಇಂತಹ ಅನುಭವಗಳು ಕೂಡ ತನಗೆ ಆಗಿವೆ ಎಂದು ಮಲ್ಲಿಕಾ ಶರಾವತ್ ಸಿನಿ ಜರ್ನಿಯ ಬಗ್ಗೆ ಹೇಳಿಕೊಂಡಿದ್ದಾರೆ. ಮಲ್ಲಿಕಾ ಶರಾವತ್ ಅವರು ಹೇಳುವಂತೆ ನಾನು ಬೋಲ್ಡ್ ಚಿತ್ರಗಳಲ್ಲಿ ನಟಿಸಿದ್ದೇನೆ. ಹಾಗಂದ ಮಾತ್ರಕ್ಕೆ ನಾನು ಮಂ’ಚಕ್ಕೆ ಬಾ ಎಂದು ಕೂಡಲೇ ರಾಜಿಯಾಗಿ ಹೋಗುತ್ತೇನೆ ಎಂದು ಅರ್ಥವಲ್ಲ.
ನಾನು ಆತರದ ವ್ಯಕ್ತಿತ್ವವನ್ನು ಹೊಂದಿದವಳಲ್ಲ. ಇದುವರಿಗೆ ಸಾಕಷ್ಟು ಜನರ ಇಂಥ ಆಫರ್ ಗಳನ್ನು ರಿಜೆಕ್ಟ್ ಮಾಡಿದ್ದೇನೆ ಆ ಕಾರಣಕ್ಕಾಗಿ ನನಗೆ ಉತ್ತಮ ಚಿತ್ರಗಳು ಸಿಗಲಿಲ್ಲ ಅಂತ ಹೇಳಿಕೊಂಡಿದ್ದಾರೆ ನಟಿ ಮಲ್ಲಿಕಾ ಶರಾವತ್. ನಟಿ ಮಲ್ಲಿಕಾ ಶರಾವತ್ ಅವರು 2002ರಿಂದ ಬಣ್ಣದ ಲೋಕದಲ್ಲಿ ಅಭಿನಯಿಸಲು ಆರಂಭಿಸಿದರು. ಇವರಿಗೆ ಅತ್ಯುತ್ತಮ ಅವಕಾಶ ಸಿಕ್ಕಿದ್ದೇ 2004ರ ಮರ್ಡರ್ ಸಿನಿಮಾದಲ್ಲಿ.
ಇನ್ನು ಕನ್ನಡದಲ್ಲಿ ’ಪ್ರೀತಿ ಏಕೆ ಭೂಮಿ ಮೇಲಿದೆ’ ಎನ್ನುವ ಚಿತ್ರದಲ್ಲಿ ಐಟಂ ಸಾಂಗ್ ಒಂದರಲ್ಲಿ ಮಲ್ಲಿಕಾ ಶರಾವತ್ ಹೆಜ್ಜೆ ಹಾಕಿದ್ದಾರೆ. ಆದರೆ 2011 ರಿಂದ ಮಲ್ಲಿಕಾ ಅವರಿಗೆ ಸಿನಿಮಾಗಳಲ್ಲಿ ಅಷ್ಟಾಗಿ ಅವಕಾಶಗಳು ಸಿಗಲಿಲ್ಲ. ಹಾಲಿವುಡ್, ಚೈನೀಸ್ ಸಿನಿಮಾಗಳಲ್ಲಿಯೂ ಮಲ್ಲಿಕಾ ಶರಾವತ್ ಅಭಿನಯಿಸಿದ್ದಾರೆ. 45 ವರ್ಷದ ಮಲ್ಲಿಕಾ ಶರಾವತ್ ಇಂದಿಗೂ ನೋಡೋದಕ್ಕೆ ಮೊದಲಿನಂತೆ ಫೀಟ್ ಆಗಿದ್ದಾರೆ. ಆದರೂ ಅವರಿಗೆ ಸಿನಿಮಾದಲ್ಲಿ ಬೇಡಿಕೆ ಅಷ್ಟಾಗಿ ಇಲ್ಲ.
ಸುಮಾರು 10 ವರ್ಷದ ಅವರ ಸಿನಿ ಜರ್ನಿಯಲ್ಲಿ ಅವರು ಮಾಡಿದ್ದು ಏಳು ಸಿನಿಮಾಗಳು ಮಾತ್ರ. ಆದರೆ ಈ ಸಿನಿಮಾಗಳ ಮೂಲಕ ಅವರು ಸಾಕಷ್ಟು ಗುರುತಿಸಿಕೊಂಡಿದ್ದಾರೆ. ನಾನು ಉತ್ತಮ ಪಾತ್ರಗಳನ್ನು ಹುಡುಕಲು ಪ್ರಯತ್ನಿಸಿದ್ದೇನೆ. ಕೆಲವು ಕಡೆ ನನ್ನಿಂದ ತಪ್ಪುಗಳು ಆಗಿರಬಹುದು. ಕೆಲವು ಪಾತ್ರಗಳು ಚೆನ್ನಾಗಿದ್ದವು. ಕೆಲವು ಚೆನ್ನಾಗಿಲ್ಲ. ಆದರೆ ನನ್ನ ಜರ್ನಿ ಮಾತ್ರ ಅದ್ಭುತವಾಗಿದೆ ಎಂದು ಮಲ್ಲಿಕಾ ಶರಾವತ್ ಹೇಳಿಕೊಂಡಿದ್ದಾರೆ.
ಸಿನಿಮಾ ರಂಗದಲ್ಲಿ ವಿಪರ್ಯಾಸ ಅಂದ್ರೆ ಬೋಲ್ಡ್ ಆಕ್ಟಿಂಗ್ ಮಾಡಲು ಒಪ್ಪಿಕೊಳ್ಳುತ್ತಾರೆ ಎಂದ ಮಾತ್ರಕ್ಕೆ ಅವರು ಎಲ್ಲದಕ್ಕೂ ಸಿದ್ಧರಾಗಿರುತ್ತಾರೆ ಎಂದು ಅರ್ಥವಲ್ಲ ಆದರೆ ಜನ ಯೋಚನೆ ಮಾಡುವ ರೀತಿ ಮಾತ್ರ ಹೀಗೆ. ಈ ಯೋಚನಾ ಪದ್ಧತಿ ಬದಲಾಗದೇ ಇದ್ದರೆ ಸಾಕಷ್ಟು ಮಹಿಳಾ ಕಲಾವಿದಯರಿಗೆ ಅವರ ಪ್ರತಿಭೆಗೆ ತಕ್ಕ ಅವಕಾಶಗಳು ಸಿಗುವುದೇ ಇಲ್ಲ. ಏನಂತೀರಾ!
Comments are closed.