MALLAA-KANNADA-MOVIE-SCENES

ಗ್ಲಾಮರ್ ತೋರಿಸೋದ್ರಲ್ಲಿ ರವಿ ಸರ್ ಮುಂದೆ ಯಾರೂ ಇಲ್ಲ,ಮಲ್ಲ ಚಿತ್ರದಲ್ಲಿ ನಟಿಸಿದ ಅನುಭವ ಹಂಚಿಕೊಂಡ ನಟಿ ಪ್ರಿಯಾಂಕ ಹೇಳಿದ್ದೇನು ನೋಡಿ!!

Entertainment/ಮನರಂಜನೆ

ಕನ್ನಡ ಸಿನಿಮಾರಂಗದಲ್ಲಿ ಪ್ರೇಮ ಲೋಕದ ರಾಜ ಎಂದು ಕರೆಸಿಕೊಂಡವರು ಕ್ರೇಜಿಸ್ಟಾರ್ ರವಿಚಂದ್ರನ್. ಹೌದು ಅವರ ಸಿನಿಮಾಗಳು ಎಂದ ಮೇಲೆ ರೋಮ್ಯಾಂಟಿಕ್ ದೃಶ್ಯಗಳು ಇರಲೇ ಬೇಕು. ಆಗಿದ್ದರೆ ಮಾತ್ರ ಅದು ರವಿಚಂದ್ರನ್ ಅವರ ಸಿನಿಮಾಗಳು ಎಂದೇನಿಸಿಕೊಳ್ಳುತ್ತದೆ. ಅದಲ್ಲದೇ ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಹಾಡುಗಳು ಹಾಗೂ ತೆರೆ ಮೇಲೆ ನಾಯಕಿಯರನ್ನು ತೋರಿಸುವ ಪರಿ ಸ್ವಲ್ಪ ಭಿನ್ನವೇ.

ಅದಲ್ಲದೇ ಆ ಕಾಲಕ್ಕೆ ಇವರು ಪರಭಾಷೆಯ ನಟ ನಟಿಯರನ್ನು ಕರೆದುಕೊಂಡು ಬಂದು ತಮ್ಮ ಸಿನಿಮಾಗಳಲ್ಲಿ ನಟಿಸಲು ಅವಕಾಶ ನೀಡುತ್ತಿದ್ದರು. ರವಿಚಂದ್ರನ್ ಅವರ ಮಲ್ಲ ಸಿನಿಮಾದ ಬಗ್ಗೆ ಎಲ್ಲರಿಗೂ ಗೊತ್ತಿರಲಿಬಹುದು. ಈ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರರವರು ನಾಯಕಿಯಾಗಿ ಕಾಣಿಸಿಕೊಂಡರು. 2004 ರಲ್ಲಿ ತೆರೆ ಕಂಡ ಸಿನಿಮಾವು ಪ್ರೇಕ್ಷಕ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಯಿತು.

ಐದು ವರ್ಷಗಳಿಗೂ ಹೆಚ್ಚು ದಿನ ಹೌಸ್ ಫುಲ್ ಪ್ರದರ್ಶನ ಕಂಡು ಎಂಟು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಸಿನಿಮಾವಿದಾಗಿತ್ತು. ಇನ್ನು ಸಿನಿಮಾದಲ್ಲಿ ಪ್ರಿಯಾಂಕಾರವನ್ನು ಸ್ವಲ್ಪ ಗ್ಲಾಮರಸ್ ಆಗಿಯೇ ತೋರಿಸಲಾಗಿತ್ತು. ಸಂದರ್ಶನವೊಂದರಲ್ಲಿ ರವಿಚಂದ್ರನ್ ಅವರ ಬಗ್ಗೆ ಮಾತನಾಡಿದ್ದ ಪ್ರಿಯಾಂಕಾ ಉಪೇಂದ್ರರವರು, ಸಿನಿಮಾದಲ್ಲಿ ಗ್ಲಾಮರ್ ಅನ್ನು ರವಿಚಂದ್ರನ್ ಅವರು ತೋರಿಸುವ ತರಹ ಬೇರೆ ಯಾರು ತೋರಿಸಲು ಸಾಧ್ಯವಿಲ್ಲ.

ಒಬ್ಬ ನಟಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎನ್ನುವುದು ರವಿ ಸರ್ ಬಗ್ಗೆ ಚೆನ್ನಾಗಿಯೇ ಗೊತ್ತು. ಅವರ ಸಿನಿಮಾದಲ್ಲಿ ನಾಯಕಿಗೆ ಇರುವಷ್ಟು ಮಹತ್ವವು ಬೇರೆ ಯಾರಿಗೂ ಕೂಡ ಇರುವುದಿಲ್ಲ. ಅವರ ಸಿನಿಮಾದಲ್ಲಿ ನಟಿಸುವ ನಟಿಯರನ್ನು ಗ್ಲಾಮರಸ್ ಆಗಿಯೇ ತೋರಿಸುವವರು ರವಿ ಸರ್. ರವಿ ಸರ್ ಒಂದು ಹಾಡನ್ನು ಶೂಟ್ ಮಾಡ್ತಾರೆ ಅಂದ್ರೆ, ಅದರಲ್ಲಿ ಸಾಕಷ್ಟು ವೈವಿಧ್ಯತೆ ಇರುತ್ತದೆ.

ಅವರು ಮಾಡಿದ ಹಾಗೆ ರೋಮ್ಯಾಂಟಿಕ್ ಹಾಡುಗಳನ್ನು ಯಾರು ಮಾಡಲು ಸಾಧ್ಯವಿಲ್ಲ. ಮಲ್ಲ ಸಿನಿಮಾದಲ್ಲಿ ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ ಇಂದಿಗೂ ತುಂಬಾನೇ ಫೇಮಸ್. ಮಲ್ಲ ಸಿನಿಮಾದಲ್ಲಿ ನನ್ನ ರೋಲ್ ಬಹಳ ಚಾಲೆಂಜಿಂಗ್ ಆಗಿತ್ತು. ಪ್ರಿಯಾಂಕಾ ಕುಳ್ಳಗಿರುವ ಕಾರಣ ಈ ಸಿನಿಮಾಕ್ಕೆ ಆಯ್ಕೆ ಆಗುತ್ತಾರಾ ಇಲ್ವಾ ಎನ್ನುವ ಅನುಮಾನವಿತ್ತಂತೆ.

ಆದರೆ ಸಿನಿಮಾದಲ್ಲಿನ ಒಂದು ಸೀನ್ ಮಾಡಿದ ನಂತರ ರವಿಚಂದ್ರನ್ ಅವರು ಪ್ರಿಯಾಂಕಾರವರ ನಟನೆಯನ್ನು ಮೆಚ್ಚಿಕೊಂಡರು..ತದನಂತರದಲ್ಲಿ ಈ ಸಿನಿಮಾದ ಹೀರೋಯಿನ್ ಪ್ರಿಯಾಂಕಾ ಎಂದು ಘೋಷಿಸಿಯೇ ಬಿಟ್ಟರು. ಈ ಸಿನಿಮಾವು ಅಂದುಕೊಳ್ಳುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಮಲ್ಲ ಸಿನಿಮಾದ ಮೂಲಕ ತೆರೆ ಮೇಲೆ ಕಮಲ್ ಮಾಡಿದ ಪ್ರಿಯಾಂಕಾ ಉಪೇಂದ್ರರವರು ಸದ್ಯಕ್ಕೆ ಚಂದನವನದಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.