
ಸ್ಯಾಂಡಲ್ ವುಡ್ ಡಿಫ್ರೆಂಟ್ ಡೈರೆಕ್ಟರ್ ಡಿಪ್ರೆಶನ್ ಹೋಗಿದ್ರಾ..! ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಅಂದಾಕ್ಷಣ ಥಟ್ಟನೆ ನೆನಪಿಗೆ ಬರುವ ಪದ ಅಂದರೆ ಅದು ಡಿಫ್ರೆಂಟ್ ಡಿಫ್ರೆಂಟ್. ಡಿಫ್ರೆಂಟ್ ಅನ್ನೋ ಪದಕ್ಕೆ ಅನ್ವರ್ಥ ನಾಮ ಆಗಿರುವ ಉಪೇಂದ್ರ ತಮ್ಮ ಸಿನಿಮಾಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನ ಟೀಕೆ, ವ್ಯಂಗ್ಯ ಮಾಡುತ್ತಲೇ ಯುವ ಸಮೂಹಕ್ಕೆ ಸಂದೇಶ ಸಾರುತ್ತಾರೆ. ಆದಷ್ಟು ತಮ್ಮ ನಿರ್ದೇಶನದ ಸಿನಿಮಾಗಳಲ್ಲಿ ದೇಶ, ಭಾಷೆ, ನೆಲ, ಜಲ ದ ಕುರಿತು ಯಾವುದಾದರೊಂದು ವಿಚಾರಗಳನ್ನ ಸಣ್ಣ ಪುಟ್ಟ ತುಣುಕುಗಳಲ್ಲಿ ತೋರಿಸಿರುತ್ತಾರೆ. ಅದೇ ರೀತಿಯಾಗಿ ಪ್ರೀತಿ ಪ್ರೇಮ ಎಂದು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವ ಯುವಕರಿಗೆ ತಮ್ಮ ಪಂಚಿಂಗ್ ಡೈಲಾಗ್ ಮೂಲಕ ಮಾರ್ಗದರ್ಶನದ ಜೊತೆಗೆ ಉತ್ಸಾಹ ಸ್ಪೂರ್ತಿ ನೀಡುತ್ತಿರುತ್ತಾರೆ.

ಇಂತಹ ಪ್ರಬುದ್ದತೆಯ ವಿಚಾರವಂತ ಬುದ್ದಿವಂತ ಉಪೇಂದ್ರ ಕೂಡ ಖಿನ್ನತೆಗೆ ಒಳಗಾಗಿದ್ದರು ಎಂಬುದು ಎಂತಹವರನ್ನು ಅಚ್ಚರಿಗೊಳಿಸುತ್ತದೆ. ಹೌದು ಉಪೇಂದ್ರ ಅವರ ಪತ್ನಿ ನಟಿ ಪ್ರಿಯಾಂಕಾ ಮಲ್ಲ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ್ದರು. ಈ ಮಲ್ಲ ಚಿತ್ರದ ಕಥೆ ಕೇಳಿದ ಉಪ್ಪಿ ಪ್ರಿಯಾಂಕಾ ಅವರಿಗೆ ಈ ಚಿತ್ರ ಒಪ್ಪಬೇಡ ಎಂದಿದ್ದರಂತೆ. ಆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಿಯಾಂಕಾ ಅವರು ಉಪ್ಪಿ ಮಾತಿಗೆ ಒಪ್ಪದೆ ರವಿಚಂದ್ರನ್ ಅವರ ಮಲ್ಲ ಚಿತ್ರದಲ್ಲಿ ನಟಿಸುತ್ತಾರೆ. ಆದರೆ ಮಲ್ಲ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗುತ್ತದೆ. ಆದರೆ ಇದು ಉಪೇಂದ್ರ ಅವರಿಗೆ ಕೊಂಚ ಇರುಸು ಮುರುಸು ಉಂಟು ಮಾಡುತ್ತದೆ.

ಏಕೆಂದರೆ ಉಪೇಂದ್ರ ಅವರಿಗೆ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರು ತಮ್ಮ ಸಿನಿಮಾಗಳಲ್ಲಿ ಹೀರೋಯಿನ್ ಗಳನ್ನ ತುಂಬಾ ರಿಚ್ ಆಗಿ ತುಂಬಾ ಬೋಲ್ಡ್ ಆಗಿ ತೋರಿಸುತ್ತಾರೆ ಎಂಬುದು ಅರಿವಾಗಿತ್ತು. ಅದರಿಂದಾನೇ ಪ್ರಿಯಾಂಕಾ ಅವರಿಗೆ ಈ ಮಲ್ಲ ಚಿತ್ರದಲ್ಲಿ ನಟಿಸುವುದು ಬೇಡ ಎಂದಿದ್ದರು. ಆದರೆ ನಟಿ ಪ್ರಿಯಾಂಕಾ ಅವರು ಹಾಗಾಗಲೇ ಒಂದಷ್ಟು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆಯ ಉತ್ತುಂಗದಲ್ಲಿದ್ದರಿಂದ ಅವರ ಮಾತಿಗೆ ಹೆಚ್ಚು ಸಮ್ಮತ ನೀಡದೇ ರವಿಚಂದ್ರನ್ ಅವರೊಟ್ಟಿಗೆ ಮಲ್ಲ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿಯೇ ಬಿಡುತ್ತಾರೆ.

ಮಲ್ಲ ಸಿನಿಮಾದಲ್ಲಿ ನಟಿ ಪ್ರಿಯಾಂಕಾ ಒಂದು ಬೋಲ್ಡ್ ಶೇಡ್ ಮತ್ತು ಇನ್ನೊಂದು ಡಿ ಗ್ಲಾಮರ್ ಆಗಿ ತಾಯಿಯ ಪಾತ್ರ ಹೀಗೆ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮಲ್ಲ ಚಿತ್ರ ಸೂಪರ್ ಹಿಟ್ ಆಗಲು ಕಾರಣವಾದ ಪ್ರಮುಖ ಅಂಶಗಳಲ್ಲಿ ಹಾಡುಗಳು ಪ್ರಧಾನ ಪಾತ್ರ ವಹಿಸಿದವು ಅಂದರೆ ತಪ್ಪಾಗಲಾರದು. ಅದರಲ್ಲಿಯೂ ಯಮ್ಮೊ ಯಮ್ಮೊ ನೋಡ್ದೇ ನೋಡ್ದೇ ನೋಡ್ಬಾರ್ದನ್ನ ನಾನ್ ನೋಡ್ದೇ ಎಂಬ ಹಾಡಿನಲ್ಲಿ ಪ್ರಿಯಾಂಕಾ ಅವರು ಸಖತ್ ಹಾಟ್ ಆಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಉಪೇಂದ್ರ ಅವರಿಗೆ ಗಾಂಧಿನಗರದಲ್ಲಿ ಪ್ರಿಯಾಂಕಾ ಅವರ ಬಗ್ಗೆ ಮಾತನಾಡುತ್ತಿದ್ದುದ್ದರ ವಿಚಾರ ಕೇಳಿ ಕೊಂತ ನೋವನ್ನುಂಡು ಯಾರ ಬಳಿಯೂ ಹೇಳಿಕೊಳ್ಳಲಾಗದಂತಹ ಪರಿಸ್ಥಿತಿ ಎದುರಿಸಿದರು.

ಕಾಲ ಎಲ್ಲವನ್ನು ನಿಧಾನವಾಗಿ ಮಾಯ ಮಾಡುವಂತೆ ಇವರಿಗೂ ವರ್ಷಗಳ ಬಳಿಕ ಈ ನಕರಾತ್ಮಕ ಸಂಗತಿ ವಿಚಾರಗಳಿಂದ ಹೊರ ಬಂದು ಇದೀಗ ಇಬ್ಬರು ಮಕ್ಕಳೊಂದಿಗೆ ಸುಂದರ ಬದುಕನ್ನ ನಡೆಸುತ್ತಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಪ್ರತಿಯೊಬ್ಬರೂ ಲೈಕ್ ಮಾಡಿ.