ಮಲ್ಲ ಚಿತ್ರದ ಪಾತ್ರಕ್ಕಾಗಿ ತುಂಬಾ ಕಷ್ಟ ಪಟ್ಟಿದ್ದಿನಿ ಎಂದ ನಟಿ ಪ್ರಿಯಾಂಕ! ಆ ದಿನಗಳನ್ನು ಮೆಲುಕು ಹಾಕಿ ರವಿ ಮಾಮ ಬಗ್ಗೆ ಹೇಳಿದ್ದೇನು ನೋಡಿ!!

ಇತ್ತೀಚಿಗೆ ಸಿನಿಮಾ ಅಂದ್ರೆ ಸ್ಟಾರ್ ನಟರುಗಳದ್ದೆ ಹವಾ. ಇನ್ನು ಹೀರೋಯಿನ್ ಗಳು ಆಗಾಗ ಈ ಸಿನಿಮಾಗಳಲ್ಲಿ ಬಂದು ಹೋಗುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಹಾಗೆ! ಇತ್ತೀಚಿಗೆ ಮಹಿಳಾ ಪ್ರಧಾನ ಚಿತ್ರಗಳು ತುಂಬಾನೇ ಕಮ್ಮಿ ಆಗಿವೆ. ಎಲ್ಲವೂ ಪ್ಯಾನ್ ಇಂಡಿಯಾ ಸಿನಿಮಾ ಹಾಗೂ ಎಲ್ಲವೂ ಸ್ಟಾರಿಸಂ ತೋರಿಸುವ ಸಿನಿಮಾಗಳು. ಸಿನಿಮಾಗಳಲ್ಲಿ ಹೀಗೆ ನಟಿಯರೇ ಹೆಚ್ಚಾಗಿ ಕಾಣಿಸಿಕೊಳ್ಳುವುದೇ ಇರೋದನ್ನ ನೋಡಿದರೆ ರವಿಚಂದ್ರನ್ ಅವರ ಸಿನಿಮಾಗಳು ನೆನಪಾಗುತ್ತೆ.

ಕ್ರೇಜಿ ಸ್ಟಾರ್ ರವಿಚಂದ್ರನ್ ಕನ್ನಡ ಸಿನಿಮಾದಲ್ಲಿ ಹೊಸ ಸಂಚಲನವನ್ನು ಸೃಷ್ಟಿ ಮಾಡಿದವರು ತಾವು ಹೀರೋ ಆಗಿದ್ದ ಕಾಲದಲ್ಲಿ ವಿಶೇಷ ಅಭಿರುಚಿಯನ್ನ ಹೊಂದಿದ್ದ ನಟ ರವಿಚಂದ್ರನ್ ಒಬ್ಬ ಅತ್ಯದ್ಭುತ ನಿರ್ದೇಶಕ ಕೂಡ. ರವಿಮಾಮ ಒಬ್ಬ ಕನಸುಗಾರ. ಹಾಗಾಗಿ ಅವರು ತಮ್ಮ ಚಿತ್ರದ ಬಗ್ಗೆ ತುಂಬಾನೇ ವಿಶೇಷವಾದ ಪ್ರೀತಿಯನ್ನು ಇಟ್ಟುಕೊಂಡು ತನ್ನ ಕಲ್ಪನೆಯಲ್ಲಿ ಹೇಗಿದೆ ಅಂತ ಶತಾಯಗತಾಯ ಪ್ರಯತ್ನಿಸುತ್ತಿದ್ದರು. ಈ ಪ್ರಯತ್ನದ ಫಲವೇ ಅವರ ಹಿಟ್ ಸಿನಿಮಾಗಳು.

ಕನಸುಗಾರ, ಮಲ್ಲ, ಪ್ರೇಮಲೋಕ ಈ ಮೊದಲದ ಸಿನಿಮಾಗಳನ್ನು ನೋಡಿದರೆ ರವಿಚಂದ್ರನ್ ಅವರ ಸಿನಿಮಾ ನಿರ್ಮಾಣದ ಸಾಮರ್ಥ್ಯ ಎಲ್ಲರಿಗೂ ಅರ್ಥವಾಗಿ ಬಿಡುತ್ತೆ. ಇನ್ನು ಒಬ್ಬ ಮಹಿಳಾ ಕಲಾವಿದೆಗೆ ಅಥವಾ ನಾಯಕಿ ನಟಿಗೆ ಎಷ್ಟು ಪ್ರಾಮುಖ್ಯತೆ ಕೊಡಬೇಕು ಎನ್ನುವುದು ರವಿಚಂದ್ರನ್ ಸರ್ ಅವರಿಗೆ ಗೊತ್ತಿರುವಷ್ಟು ಬೇರೆ ಯಾವ ನಿರ್ದೇಶಕರಿಗೂ ಗೊತ್ತಿರಲು ಸಾಧ್ಯವೇ ಇಲ್ಲ. ಹೌದು ಕ್ರೇಜಿಸ್ಟಾರ್ ರವಿಚಂದ್ರನ್ ಒಬ್ಬ ರೋಮ್ಯಾಂಟಿಕ್ ಡೈರೆಕ್ಟರ್.

ಹಾಗಾಗಿ ತಮ್ಮ ಸಿನಿಮಾಗಳಲ್ಲಿ ರೋಮ್ಯಾಂಟಿಕ್ ಸೀನ್ಗಳನ್ನ ಹೆಚ್ಚಾಗಿ ತೆರೆಯ ಮೇಲೆ ತರುತ್ತಿದ್ದರು. ಇನ್ನು ಗ್ಲಾಮರ್ ಲೋಕ ರವಿಮಾಮ ಅವರಿಗೆ ಹೊಸದೇನು ಅಲ್ಲ. ಅವರ ಸಿನಿಮಾಗಳನ್ನ ಜನರು ಹೆಚ್ಚು ಇಷ್ಟಪಡುತ್ತಿದ್ದದ್ದು ಇದೇ ಕಾರಣಕ್ಕೆ ಯಾಕೆಂದರೆ ಮಹಿಳಾ ಕಲಾವಿದರಿಗೆ ರವಿಮಾಮ ಅಷ್ಟು ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು. ಹಾಗೆ ಪರಭಾಷಾ ನಟಿಯರನ್ನ ಅದರಲ್ಲೂ ಬಾಲಿವುಡ್ ನಟಿಯರನ್ನ ಕನ್ನಡಕ್ಕೆ ಪರಿಚಯಿಸಿದ ಏಕೈಕ ನಿರ್ದೇಶಕ ರವಿ ಸರ್.
ಪ್ರಿಯಾಂಕ ಉಪೇಂದ್ರ ಅವರು ಕೂಡ ರವಿಚಂದ್ರನ್ ಅವರ ಸಿನಿಮಾದ ಮೂಲಕವೇ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದವರು ಹಾಗೂ ಸಿನಿಮಾದಲ್ಲಿ ಈಗಲೂ ಅವರದ್ದೇ ಆದ ಸ್ಪೇಸ್ ಕ್ರಿಯೇಟ್ ಮಾಡಿಕೊಂಡವರು. ರವಿಚಂದ್ರನ್ ಹಾಗೂ ನಟಿ ಪ್ರಿಯಾಂಕ ಉಪೇಂದ್ರ ಅವರ ಕಾಂಬಿನೇಷನ್ ಮಲ್ಲ ಸಿನಿಮಾದ ಹಿಟ್ ಗೆ ಕಾರಣ. ಇನ್ನು ರವಿಚಂದ್ರನ್ ಅವರ ಜೊತೆ ಅಭಿನಯಿಸಿದ ಪ್ರಿಯಾಂಕ ಉಪೇಂದ್ರ ಮಲ್ಲ ಸಿನಿಮಾದ ಸಂದರ್ಭದಲ್ಲಿ ತಮ್ಮ ಅನುಭವವನ್ನು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

‘ರವಿಚಂದ್ರನ್ ಸರ್ ಅವರ ಜೊತೆಗೆ ಅಭಿನಯಿಸುವುದು ವಿಶೇಷ ಅನುಭವ. ಅವರ ಸಿನಿಮಾದಲ್ಲಿ ಮಹಿಳಾ ಕಲಾವಿದರಿಗೆ ವಿಶೇಷ ಸ್ಪೇಸ್ ಇರುತ್ತೆ. ಅವರ ಪ್ರತಿಯೊಂದು ಸಾಂಗ್ ನಲ್ಲಿಯೂ ಕ್ರಿಯೇಟಿವಿಟಿಯನ್ನು ಕಾಣಬಹುದು. ತಾವು ಯಾವುದೇ ಸೀನ್ ಶೂಟ್ ಮಾಡುವಾಗ ಅದರ ಬಗ್ಗೆ ಸಂಪೂರ್ಣ ಕ್ಲಾರಿಟಿ ಇರುತ್ತಿತ್ತು ನಿರ್ದೇಶಕ ರವಿಚಂದ್ರನ್ ಅವರಿಗೆ. ಹಾಗಾಗಿ ನಟಿಯರಿಗೆ ರವಿಚಂದ್ರನ್ ಸಿನಿಮಾದ ಮೂಲಕ ಗುರುತಿಸಿಕೊಳ್ಳುವುದಕ್ಕೆ ಅವಕಾಶ ಇತ್ತು.

ಎಲ್ಲಾ ಸಿನಿಮಾಗಳಲ್ಲಿಯೂ ನಟಿಯರೇ ಪವರ್ಫುಲ್ ಕ್ಯಾರೆಕ್ಟರ್ ನ ಪ್ಲೇ ಮಾಡಬೇಕು ಅನ್ನುವ ಯೋಚನೆ ರವಿಚಂದ್ರನ್ ಅವರಲ್ಲಿ ಇತ್ತು’ ಅಂತ ಪ್ರಿಯಾಂಕ ಉಪೇಂದ್ರ ಹೇಳಿದ್ದಾರೆ.  ಇನ್ನು ಮಲ್ಲ ಸಿನಿಮಾದಲ್ಲಿ ಅಭಿನಯಿಸಿದ ಪ್ರಿಯಾಂಕ ತನ್ನ ಪಾತ್ರದ ಬಗ್ಗೆಯೂ ಹೇಳಿಕೊಂಡಿದ್ದು ಅವರೊಂದಿಗೆ ಅಭಿನಯಿಸಿದ್ದು ನನ್ನ ಭಾಗ್ಯವಾಗಿತ್ತು ಯಾಕಂದ್ರೆ ಈ ಸಿನಿಮಾದ ಮೂಲಕ ನನಗೆ ಕನ್ನಡದಲ್ಲಿ ದೊಡ್ಡ ಬ್ರೇಕ್ ಸಿಕ್ಕಿದೆ.

ರವಿ ಸರ್ ತರ ರೋಮ್ಯಾಂಟಿಕ್ ಸಾಂಗ್ ಗಳನ್ನು ಬೇರೆ ಯಾವ ಡೈರೆಕ್ಟರ್ ಕೂಡ ಶೂಟ್ ಮಾಡಲು ಸಾಧ್ಯವೇ ಇಲ್ಲ. ಯಮ್ಮೋ ಯಮ್ಮೋ ಹಾಡಿನಲ್ಲಿ ನನ್ನ ಅಭಿನಯ ನೋಡಿ ಮಲ್ಲ ಸಿನಿಮಾಕ್ಕೆ ನನ್ನನ್ನ ಹೀರೋಯಿನ್ ಮಾಡಿದ್ರು ರವಿ ಸರ್, ಅಂತ ಅವರೊಂದಿಗಿನ ನಟನ ಅನುಭವವನ್ನು ಹಂಚಿಕೊಂಡಿದ್ದಾರೆ ಪ್ರಿಯಾಂಕ ಉಪೇಂದ್ರ. ಸದ್ಯ ಕನ್ನಡದ ಹಲವು ಸಿನಿಮಾಗಳಲ್ಲಿ ಬ್ಯುಸಿ ಇರುವ ಪ್ರಿಯಾಂಕ ಉಪೇಂದ್ರಅವರ ಒಂದೆರಡು ಸಿನಿಮಾಗಳು ಇನ್ನೇನು ತೆರೆ ಕಾಣಲಿವೆ.
You might also like

Comments are closed.