ಪ್ರಿಯಾಂಕ ಜೊತೆ ಮಲ್ಲ ಬಳಿಕ ಮತ್ತೆ ಯಮ್ಮೋ ಯಮ್ಮೋ ಹಾಡಿಗೆ ಡ್ಯಾನ್ಸ್ ಮಾಡಿದ ರವಿಚಂದ್ರನ್…ನೋಡಿ ವಿಡಿಯೋ…

ಎಷ್ಟು ಸಲ ನೋಡಿದರೂ ಕೂಡ  ಮತ್ತೆ ಮತ್ತೆ ನೋಡಬೇಕೆಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಾ ಇದ್ದು ಅದು ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪ್ರಿಯಾಂಕಾ ಉಪೇಂದ್ರ ಅವರ ಡ್ಯಾನ್ಸ್ ವಿಡಿಯೋ. ಹೌದು.ನನ್ನಾಣೆ ಕೇಳೆ ನನ್ನ ಪ್ರಾಣವೇ ಹಾಡಿಗೆ ರವಿಚಂದ್ರನ್ ಮತ್ತು ಪ್ರಿಯಾಂಕಾ ಹೆಜ್ಜೆ ಹಾಕಿದ್ದು  ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ವಾವ್ ಎನ್ನುವ ಫೀಲ್ ಮನದಲ್ಲಿಯೇ ಮೂಡುತ್ತಿದೆ ಎನ್ನಬಹುದು. ಹೌದು ಹೇಳಿ ಕೇಳಿ ರವಿಚಂದ್ರನ್ ಜೊತೆಗೆ ಹೆಜ್ಜೆ ಹಾಕುವುದೆಂದರೆ ಸುಮ್ಮನೇನಾ. ರವಿಮಾಮ ಅಂದಿಗೂ ಇಂದಿಗೂ ಹಾಗೂ ಎಂದೆಂದಿಗೂ ಎಲ್ಲರ ಹಾರ್ಟ್ ಫೇವರಿಟ್ ಎನ್ನಬಹುದು.
ಇನ್ನು ಪ್ರಿಯಾಂಕಾ ಉಪೇಂದ್ರ ಸಹ ಎವರ್‌ಗ್ರೀನ್ ಬ್ಯೂಟಿ ಮೆಂಟೈನ್ ಮಾಡಿರುವ ಚೆಲುವೆಯಾಹಿದ್ದು ಮಲ್ಲ ಸಿನಿಮಾದಲ್ಲಿ ಇಬ್ಬರ ಜೋಡಿ ನೋಡಿ ಖುಷಿ ಪಟ್ಟವರಿಗೆ ಮತ್ತೆ ಡ್ರಾಮಾ ಜ್ಯೂನಿಯರ್ ವೇದಿಕೆ ಮೇಲೆ ಡ್ಯುಯೆಟ್ ಆಡುವ ಅವಕಾಶವೂ ಒದಗಿ ಬಂದಿದೆ.

ಇನ್ನು ಡ್ರಾಮಾ ಜ್ಯೂನಿಯರ್‌ನಲ್ಲಿ ವಾರಕ್ಕೊಮ್ಮೆ ಹಲವು ವಿಶೇಷತೆಗಳು ಕಾಣಸಿಗುತ್ತಿದ್ದು ಆಗಾಗ ವಿಶೇಷವಾಗಿ ಅತಿಥಿಗಳನ್ನು ಕರೆಸುತ್ತಿರುತ್ತಾರೆ. ಹೌದು ಅದರಂತೆ ಈ ವಾರ ಪ್ರಿಯಾಂಕಾ ಉಪೇಂದ್ರ ಬಂದಿದ್ದು ಸಖತ್ ಖುಷಿ ನೀಡಿದೆ. ಇನ್ನು ಇದೇ ವೇದಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗೆ ಸ್ಟೇಪ್ ಹಾಕಿದ್ದು ಈ ಡ್ಯಾನ್ಸ್ ವಿಡಿಯೋ ಸದ್ಯ ಜೀ ಕನ್ನಡ ಅಪ್ಲೋಡ್ ಮಾಡಿದ್ದು ಪ್ರಿಯಾಂಕಾ ಉಪೇಂದ್ರ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Aa Dinagalu Images - Malla Movie Image - chitraloka.com | Kannada Movie News, Reviews | Image

ಡ್ರಾಮಾ ಜ್ಯೂನಿಯರ್‌ನಲ್ಲಿ ಸಖತ್ ಟ್ಯಾಲೆಂಟ್ ಇರುವ ಮಕ್ಕಳು ವಾರದಲ್ಲಿ ಎರಡು ದಿನ ನಕ್ಕು ನಲಿಸುತ್ತಿದ್ದು  ಈ ಮಧ್ಯೆ ರವಿಚಂದ್ರನ್ ಕಡೆಯಿಂದ ಮತ್ತಷ್ಟು ಮಸ್ತಿ ಸಿಗುವುದು ಗ್ಯಾರಂಟಿ. ಹೌದು ಜೀ ಕನ್ನಡ ಹಿರಿಯ ಕಲಾವಿದರಿಗೆ ಸಾಕಷ್ಟು ಗೌರವ ನೀಡುತ್ತದ್ದು ಅದರಂತೆ ರವಿಚಂದ್ರನ್ ಹುಟ್ಟುಹಬ್ಬ. ಬೇರೆ ಏನಾದರೂ ಸ್ಪೆಷಲ್ ದಿನವಾದರೆ ಅಂದು ರವಿಚಂದ್ರನ್‌ಗಾಗಿಯೇ ಆ ವೇದಿಕೆಯನ್ನು ಮೀಸಲಿಡುತ್ತದೆ.  ಅದರಲ್ಲೂ ರವಿಚಂದ್ರನ್ ಜೊತೆಗೆ ಈ ಹಿಂದೆಯೆಲ್ಲಾ ನಟಿಸಿದ್ದ ನಟಿ ಮಣಿಯರು ಕರೆತಂದು ಅಲ್ಲೊಂದು ಹಳೆಯ ಭಾವಯಾನ ನಿರ್ಮಾಣವಾಗುವಂತೆ ಮಾಡುತ್ತದೆ. ಹೌದು  ಹೊಸ ಲೋಕವನ್ನೇ ಸೃಷ್ಟಿಸಿ ಬಿಡುತ್ತಿದ್ದು ಕಳೆದ ಬಾರಿ ಖುಷ್ಭು ಅವರನ್ನು ಕರೆಸಿ ಕ್ರೇಜಿಸ್ಟಾರ್‌ಗೆ ಬಿಗ್ ಸರ್ಪೈಸ್ ನೀಡಿತ್ತು. ಇದೀಗ ಪ್ರಿಯಾಂಕಾ ಉಪೇಂದ್ರ ಆಗಮನದಿಂದ ಇನ್ನಷ್ಟು ಕಳೆ ಬಂದಿದೆ.
ಇನ್ನು ನಟಿಯರು ಹಾಕುವ ಕಾಸ್ಟ್ಯೂಮ್ ಮೇಲೆ ಸದಾ ಎಲ್ಲರ ಚಿತ್ತ ನೆಟ್ಟಿರುತ್ತದೆ. ಸದ್ಯ ಇದೀಗ ಪ್ರಿಯಾಂಕಾ ಉಪೇಂದ್ರ ಹಾಕಿರುವ ಗ್ರೀನ್ ಗೌನ್ ಮೇಲೆ ಎಲ್ಲರ ಗಮನ ಸೆಳೆದಿದೆ. ಇದೊಂಥರ ಡಿಫ್ರೆಂಟ್ ಆಗಿ ರೆಡಿ ಮಾಡಲಾಗಿದ್ದು ಪಾಚಿ ಗ್ರೀನ್ ಡ್ರೆಸ್ ತುಂಬಾ ಅದ್ಭುತವಾಗಿ ಕಾಣುತ್ತಿದ್ದು ನೆಟ್ಟಿಗರು ಬ್ಯೂಟಿಫುಲ್ ಡ್ರೆಸ್ ಎಂದು ಕಮೆಂಟ್ ಹಾಕುವ ಮೂಲಕ ತಮ್ಮ ಆಸೆ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಡ್ರಾಮಾ ಜ್ಯೂನಿಯರ್ ಮನೆರಂಜನೆಯ ಜೊತೆಗೆ ಒಂದಷ್ಟು ಉಪಯೋಗಕರ ಸಂದೇಶವನ್ನು ನೀಡುತ್ತಿದ್ದು ಈ ವಾರ ಲೋಕ ಅದಲಾತ್ ಬಗ್ಗೆಯೂ ಮಾಹಿತಿ ನೀಡುತ್ತಿದೆ. 1987 ಕಾಯ್ದೆಯ ಬಗ್ಗೆ ಡ್ರಾಮಾದ ಮೂಲಕ ಪಾಠ ಮಾಡುತ್ತಿದ್ದಾರೆ. ಅದರಲ್ಲೂ ಲೋಕಾಯುಜ್ತದಲ್ಲಿಯೇ ಇದ್ದವರನ್ನು ಕರೆಯಿಸಿ ಆ ಬಗ್ಗೆ ಜಾಗೃತಿ‌ ಮೂಡಿಸುತ್ತಿದೆ ಜೀ ಕನ್ನಡ ವಾಹಿನಿ.


You might also like

Comments are closed.