VIDEO : ಬಾತುಕೋಳಿಯಂತೆ ನಡೆದು ಟ್ರಾಲ್​ಗೆ ಒಳಗಾದ ಮಲೈಕಾ; ವಿಡಿಯೊ ನೋಡಿ

CINEMA/ಸಿನಿಮಾ

ಬಾಲಿವುಡ್ ನಟಿ, ಡಾನ್ಸರ್ ಮಲೈಕಾ ಅರೋರಾ ಸದ್ಯ ಬಿಟೌನ್​ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಕಾರಣ, ಇತ್ತೀಚೆಗೆ ಛಾಯಾಗ್ರಾಹಕರಿಗೆ ಪೋಸ್ ನೀಡುವಾಗ ಅವರು ಬಾತುಕೋಳಿಯಂತೆ ನಡೆದಿದ್ದಾರೆ. ವಿಚಿತ್ರವಾಗಿ ಪೋಸ್ ಕೊಡಲು ಹೋಗಿದ್ದು ಅವರ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಆದ್ದರಿಂದಲೇ ಮಲೈಕಾ ನಡಿಗೆಯ ವಿಡಿಯೊ ಸದ್ಯ ವೈರಲ್ ಆಗಿದ್ದು, ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

47 ವರ್ಷದ ಮಲೈಕಾ ದಿನವೂ ಜಿಮ್​ಗೆ ತೆರಳುವಾಗ ನೆರೆದಿರುವ ಪಾಪರಾಜಿಗಳಿಗೆ ಪೋಸ್ ನೀಡುತ್ತಾರೆ. ಅಂತೆಯೇ ಇತ್ತೀಚೆಗೆ ಕೂಡ ಪೋಸ್ ನೀಡಿದ್ದಾರೆ. ಅದರೊಂದಿಗೆ ವಿಚಿತ್ರವಾಗಿ ನಡೆದಿದ್ದಾರೆ. ಇದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಇದನ್ನು ಮಲೈಕಾ ಅವರ ಅಭಿಮಾನಿ ಪೇಜ್​ಗಳು ಕೂಡ ಹಂಚಿಕೊಂಡಿವೆ. ಆದರೆ ಬಹಳಷ್ಟು ನೆಟ್ಟಿಗರಿಗೆ ಇದು ಇಷ್ಟವಾಗಿಲ್ಲ. ಅವರು ‘ಬಾತುಕೋಳಿ ನಡಿಗೆ’ ಎಂದು ಕಾಲೆಳೆದಿದ್ದಾರೆ. ಮತ್ತೆ ಹಲವರು ‘ಆಕೆ ಏಕೆ ಹಾಗೆ ನಡೆಯುತ್ತಿದ್ದಾರೆ?’ ಎಂದು ಪ್ರಶ್ನಿಸಿದ್ದಾರೆ.

Malaika Arora: ಎದೆ ಕಾಣಿಸುವಂತಹ ಬಟ್ಟೆ ಧರಿಸಿ ಟ್ರೋಲಿಗರಿಗೆ ಆಹಾರವಾದ ನಟಿ ಮಲೈಕಾ  ಅರೋರಾ!

ಮಲೈಕಾ ನಡಿಗೆಯ ವಿಡಿಯೊ ಇಲ್ಲಿದೆ:ಮಲೈಕಾ ಅರೋರಾಗೆ ಇನ್ಸ್ಟಾಗ್ರಾಂನಲ್ಲಿ ಸಖತ್ ಅಭಿಮಾನಿಗಳಿದ್ದಾರೆ. ಆದ್ದರಿಂದ ಅವರು ಅಲ್ಲಿ ಆಕ್ಟೀವ್ ಆಗಿರುತ್ತಾರೆ. ಸದಾ ಚಿತ್ರಗಳನ್ನು, ಫೋಟೋಗಳನ್ನು ಹಂಚಿಕೊಂಡು ಅವರು ಫ್ಯಾನ್ಸ್ ಜೊತೆ ಸಂಪರ್ಕದಲ್ಲಿರುತ್ತಾರೆ. ಮಲೈಕಾ ಹಾಗೂ ನಟ ಅರ್ಜುನ್ ಬಹಳ ಕಾಲದಿಂದ ರಿಲೇಶನ್​ಶಿಪ್​ನಲ್ಲಿದ್ದಾರೆ. ಇತ್ತೀಚೆಗಷ್ಟೇ ಗೆಳತಿಯ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅರ್ಜುನ್ ಕಪೂರ್, ‘‘ನಾನು ದುಃಖದಲ್ಲಿದ್ದಾಗ, ಖುಷಿಯಲ್ಲಿದಾಗ- ಯಾವುದೇ ಸಂದರ್ಭವಿರಲಿ ಅದು ಆಕೆಗೆ ತಿಳಿಯುತ್ತದೆ. ಒಂದು ವೇಳೆ ನಾನು ಕದ್ದು ಕುಳಿತರೂ ಅದು ಆಕೆಗೆ ತಿಳಿದಿರುತ್ತದೆ’’ ಎಂದು ಮಲೈಕಾ ಕುರಿತು ಹೇಳಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಈ ಜೋಡಿ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಧಿಕೃತವಾಗಿ ಈರ್ವರು ಇನ್ನೂ ದಾಂಪತ್ಯಕ್ಕೆ ಕಾಲಿಟ್ಟಿಲ್ಲವಾದರೂ, ಇಬ್ಬರೂ ಜೊತೆಯಾಗಿಯೇ ಸುತ್ತಾಡುವುದನ್ನು ಒಪ್ಪಿಕೊಂಡಿದ್ದಾರೆ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಅಯ್ಯೋ ,ರಶ್ಮಿಕಾಗೆ ಬೇಕಿತ್ತಾ ಇದೆಲ್ಲಾ,ತುಂಡು ಬಟ್ಟೆ ತೊಟ್ಟಾಗ ಆದ ಪಜೀತಿ ನೋಡಿ; ವೈರಲ್ ವೀಡಿಯೊ