ಮಲೈಕಾ ಅರೋರ(Malaika Arora) ಯೋಗ ಕ್ಲಾಸ್, ವಾಕಿಂಗ್ ಬಂದಾಗೆಲ್ಲ ಪಾಪ್ಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗುತ್ತಾರೆ. ಈ ಬಾರಿ ನಟಿ ಬ್ರಾ ಹಾಕದೆ ಬಂದು ಟ್ರೋಲ್ ಆಗಿದ್ದಾರೆ.
ನಟಿ ಮಲೈಕಾ ಅರೋರಾ ಬಾಲಿವುಡ್‌ನಲ್ಲಿ(Bollywood) ಹೆಚ್ಚು ಬೇಡಿಕೆಯಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ಚೈಂಯಾ ಚೈಂಯಾ ಚೆಲುವೆ ಅಂದಿನಿಂದ ಇಂದಿನವರೆಗೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಉನ್ನತ-ಮಟ್ಟದ ಫ್ಯಾಶನ್ ಗೋಲ್ಸ್(Fashiona Goals) ತೋರಿಸುವ ನಟಿ ಉತ್ಕಟವಾದ ಫಿಟ್‌ನೆಸ್ ಉತ್ಸಾಹಿ ಎನ್ನುವುದು ಎಲ್ಲರಿಗೂ ಗೊತ್ತು.
ತನ್ನ ಫಿಟ್‌ನೆಸ್(Fitness) ದಿನಚರಿಯೊಂದಿಗೆ ತನ್ನ ಫಾಲೋವರ್ಸ್‌ಗೆ ಮಲೈಕಾ ಸ್ಫೂರ್ತಿ ನೀಡುತ್ತಾರೆ. ತನ್ನ ಮಾರ್ನಿಂಗ್ ವಾಕ್ ಒಳಗೊಂಡಂತೆ ನಟಿ ಯಾವುದನ್ನೂ ಅಷ್ಟಾಗಿ ತಪ್ಪಿಸಿಕೊಳ್ಳುವುದಿಲ್ಲ. ನಟಿಯ ಮಾರ್ನಿಂಗ್ ವಾಕ್ ಆಗಾಗ ಟ್ರೋಲ್‌ಗೆ(Troll) ಒಳಗಾಗಲು ಕಾರಣವಾಗುತ್ತವೆ. ಏಕೆಂದರೆ ಕೆಲವೊಮ್ಮೆ ನಟಿಯ ನಡಿಗೆ ಶೈಲಿ ಮತ್ತು ಕೆಲವೊಮ್ಮೆ ಬಟ್ಟೆಗಳಿಗಾಗಿ ಟೀಕೆಗೆ ಒಳಗಾಗುತ್ತಾರೆ ಮಲೈಕಾ.