maksod-bidar

40 ವರ್ಷಗಳಿಂದ 2 ರೂ. ಶುಲ್ಕ- ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡ್ತಿದ್ದಾರೆ ಬೀದರ್‌ನ ವೈದ್ಯ

Today News / ಕನ್ನಡ ಸುದ್ದಿಗಳು

ಇಂದಿನ ದಿನಗಳಲ್ಲಿ ಆಸ್ಪತ್ರೆ ವೈದ್ಯ ಅಂದರೆ ಸಾಕು ದುಡ್ಡು ಮಾಡೋಕೆ ಅಂತಾನೆ ನಿಂತಿರುವಂತ ಸ್ಥಳಗಳಾಗಿವೆ ಅನ್ನೋ ಮನೋಭಾವ ಕೆಲವರಲ್ಲಿ ಬಂದುಬಿಟ್ಟಿದೆ, ಆ ರೀತಿಯಲ್ಲಿ ಆಸ್ಪತ್ರೆ ಹಾಗೂ ವೈದ್ಯರ ವರ್ತನೆಗಳು ಇಂದಿನ ದಿನಗಳಲ್ಲಿ ಕೆಲವರಲ್ಲಿ ಕಾಣಬಹುದು ಆದ್ರೆ ನಾವುಗಳು ಹೇಳುತ್ತಿರುವುದು ಎಲ್ಲ ಆಸ್ಪತ್ರೆ ಹಾಗೂ ವೈದ್ಯರಿಗೆ ಅಲ್ಲ ಆದ್ರೆ ಕೆಲವೊಬ್ಬರಿಗೆ ಮಾತ್ರ ಈ ವಿಚಾರ ಸೀಮಿತವಾಗಿರುತ್ತದೆ ಅದು ಜನ ಸಾಮಾನ್ಯರಿಗೆ ತಿಳಿದಿರುತ್ತದೆ.

ಹಣವಿಲ್ಲದೆ ಹೆಣವನ್ನು ಹೊರಗೆ ಬಿಡದಂತ ಆಸ್ಪತ್ರೆ ವೈದ್ಯರುಗಳ ಮುಂದೆ ಇಲ್ಲೊಬ್ಬ ವೈದ್ಯ ಬಡ ರೋಗಿಗಳಿಗೆ ಸುಮಾರು 40 ವರ್ಷಗಳಿಂದ ಉಚಿತ ಸೇವೆಯನ್ನು ಸಲ್ಲಿಸುತ್ತಿದ್ದಾರೆ, ಅಷ್ಟೇ ಅಲ್ಲದೆ ಬಡ ರೋಗಿಗಳಿಂದ 2 ರೂಪಾಯಿಯನ್ನು ಶುಲ್ಕವಾಗಿ ಪಡೆಯುವ ಈ ವೈದ್ಯ ರೋಗಿಗಳಿಗೆ ಔಷಧಿ ಮಾತ್ರೆಗಳನ್ನು ತಗೆದುಕೊಂಡು ಮನೆಗೆ ಹೋಗಲು ಬಸ್ ಚಾರ್ಜ್ ಗೆ ಹಣವಿಲ್ಲದೆ ಇದ್ದರು ಇವರು ಹಣವನ್ನು ಕೊಟ್ಟು ಕಳಿಸುವಂತ ಮನೋಭಾವದ ಈ ವೈದ್ಯ ಆ ಬಡ ರೋಗಿಗಳ ಪಾಲಿಗೆ ದೇವರು ಎನಿಸಿಕೊಂಡಿದ್ದಾರೆ, ಅಷ್ಟಕ್ಕೂ ಈ ವೈದ್ಯ ಇರೋದಾದ್ರೂ ಎಲ್ಲಿ ಇವರ ಸೇವೆ ಬಡ ರೋಗಿಗಳ ಪಾಲಿಗೆ ಹೇಗಿದೆ ಅನ್ನೋದನ್ನ ತಿಳಿಯೋಣ ಬನ್ನಿ.

ಕುಗ್ರಾಮದಲ್ಲಿ ಹುಟ್ಟಿ ಬಡವರ ಕಷ್ಟಗಳನ್ನು ಕಣ್ಣಾರೆ ಕಂಡಿರುವ ಡಾ.ಎ.ಮಕ್ಸೂದ್ ಚಂದಾ ಬಡವರಿಗಾಗಿ ಯಾಕೆ ಉಚಿತ ಸೇವೆ ನೀಡಬಾರದು ಎಂದು ಈ ಸೇವೆ ನಿಡುತ್ತಿದ್ದಾರೆ. ಸ್ವತಃ ಗೋಲ್ಡ್ ಮೇಡಲಿಸ್ಟ್ ಆಗಿರುವ ವೈದ್ಯರು ತಮ್ಮ ಸೇವೆ ಗಡಿ ಜಿಲ್ಲೆಗೆ ಬೇಕು ಎಂದು ಒಂದು ಸಣ್ಣ ಕ್ಲಿನಿಕ್ ತೆಗೆದುಕೊಂಡು ಪ್ರತಿದಿನ ಬರುವ ನೂರಾರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲೆಯ ರೋಗಿಗಳು ಅಲ್ಲದೆ ಪಕ್ಕದ ತೆಲಂಗಾಣದಿಂದಲು ಕೂಡ ರೋಗಿಗಳು ಬಂದು ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೋಗಿಗಳಿಗೆ ಔಷಧಿಗಳ ಜೊತೆಗೆ ವಾಪಸ್ ಹೋಗಲು ಬಸ್ಸಿಗೆ ಹಣವಿಲ್ಲ ಅಂದರೂ ಅದನ್ನು ನೀಡಿದ ಉದಾಹರಣೆಗಳು ಕೂಡ ಇವೆ. ವೈದ್ಯರು ಅಂದರೆ ಸಾಕು ಅವರಿಗೆ ಒಂದು ಕಾರು, ಐಷಾರಾಮಿ ಆಸ್ಪತ್ರೆ ಇರಬೇಕು ಎಂಬ ಮನಸ್ಥಿತಿ ಇರುವ ವೈದ್ಯರುಗಳ ಮಧ್ಯೆ ಬಡ ರೋಗಿಗಳಿಗಾಗಿ ನಾನು ಎಂಬ ಈ ಅಪರೂಪದ ವೈದ್ಯರಿಗೆ ಜಿಲ್ಲೆಯ ಜನರೆ ಸಲಾಂ ಹಾಕುತ್ತಿದ್ದಾರೆ. ಸತತವಾಗಿ 40 ವರ್ಷಗಳಿಂದ ಉಚಿತ ವೈದ್ಯಕೀಯ ಸೇವೆ ನೀಡುತ್ತಿರುವ ಡಾ.ಎ.ಮಕ್ಸೂದ್ ಚಂದಾಗೆ ಆ ದೇವರು ಆರೋಗ್ಯ, ಆಯುಷ್ಯ ಕೊಟ್ಟು ಕಾಪಾಡಲಿ ಎಂದು ಆಸ್ಪತ್ರೆಗೆ ಬಂದ ರೋಗಿಗಳು ಹೇಳಿದ್ದಾರೆ.ಒಟ್ಟಿನಲ್ಲಿ ಗ್ರಾಮೀಣ ಭಾಗದ ಕಡು ಬಡ ರೋಗಿಗಳಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ಈ ವೈದ್ಯರು ಇತರ ವೈದರಿಗೆ ಮಾದರಿಯಾಗಿದ್ದಾರೆ.

ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಈ ವೈದ್ಯ ನೆಲೆಸಿದ್ದಾರೆ ಹಾಗೂ ಇಲ್ಲಿನ ಗಡಿಭಾಗದ ಜನರಿಗೆ ಉಚಿತ ವೈದ್ಯಕೀಯ ಸೇವೆಯನ್ನು ಸುಮಾರು ವರ್ಷಗಳಿಂದ ನೀಡುತ್ತಿದ್ದಾರೆ. ಬೀದರ್ ನ ಜನರ ಪಾಲಿಗೆ ವೈದ್ಯ ದೇವರು ಎನಿಸಿಕೊಂಡಿರುವ ಈ ಡಾ.ಮಕ್ಸೂದ್ ಅವರು ಬೀದರ್ ನಾ ರಾಮ ಮಂದಿರ ಕಾಲೋನಿಯಲ್ಲಿ ತಮ್ಮದೇ ಆದ ಒಂದು ಚಿಕ್ಕ ಕ್ಲಿನಿಕ್ ಇಟ್ಟುಕೊಂಡು ಬೀದರ್ ಗಡಿ ಭಾಗದ ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆಯನ್ನು ಕೊಡುತ್ತಿದ್ದಾರೆ. ಇವರು ವೈದ್ಯರು ಆದರೂ ಅಷ್ಟೇನು ಶ್ರೀಮಂತರು ಅಲ್ಲ ಆದರೆ ಹೃದಯವಂತಿಕೆಯಲ್ಲಿ ನಿಜಕ್ಕೂ ಶ್ರೀಮಂತರು ಅನ್ನಬಹುದು. ಅದೇನೇ ಇರಲಿ ಯಾವುದೇ ಸಾರ್ಥವಿಲ್ಲದೆ ನಿಸ್ವಾರ್ಥ ಮನೋಭಾವದಿಂದ ಬಡ ರೋಗಿಗಳಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ಈ ವೈದ್ಯರಿಗೆ ನಮ್ಮ ಕಡೆಯಿಂದ ಒಂದು ಸಲ್ಯೂಟ್ ಶುಭವಾಗಲಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...