ಕನ್ನಡ,ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ, ಮರಾಠಿ, ಹಿಂದಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳ ಚಿತ್ರಗಳಲ್ಲಿ ಸೂಪರ್ ಸ್ಟಾರ್’ಗಳ ಜೊತೆ ನಾಯಕಿಯಾಗಿ ನಟಿಸಿದ್ದ ಮಾಧವಿ ಬಟ್ಟಲು ಕಣ್ಣಿನ ಚೆಲುವೆ ಎಂದೇ ಫೇಮಸ್ ಆಗಿದ್ದವರು.. ಇವರು ಕನ್ನಡದಲ್ಲಿ ಡಾ.ವಿಷ್ಣು, ರಾಜ್, ಶಂಕರ್ನಾಗ್, ಶ್ರೀನಾಥ್ ಸೇರಿದಂತೆ ಸಮಯದಲ್ಲಿದ್ದ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿದ್ದರು., ಅಲ್ಲದೆ ಚಿರಂಜೀವಿ, ಬಾಲಕೃಷ್ಣ, ಕಮಲ್ ಹಾಸನ್ ಸೇರಿದಂತೆ ತೆಲುಗು-ತಮಿಳಲ್ಲೂ ಸ್ಟಾರ್ ಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು.
ಈಗ ಇದ್ದಕ್ಕಿದ್ದ ಹಾಗೆ ಏಕೆ ನಟಿ ಮಾಧವಿಯ ವಿಷ್ಯ ಅಂತೀರಾ ವಿಷ್ಯ ಇದೆ ಮುಂದೆ ಓದಿ.. ಅಸಲಿ ವಿಷಯವೇನೆಂದರೆ ಕೆಲ ವರ್ಷಗಳ ಹಿಂದೆ ಮಾಧವಿ ಇದ್ದಕ್ಕಿಂದಂತೆ ಕಾಣೆಯಾಗಿಬಿಟ್ಟಿದ್ದರು, ಅವರು ಎಲ್ಲಿಗೆ ಹೋದರು, ಏನಾದರು ಎಂಬಿತ್ಯಾದಿ ವಿಷ್ಯಗಳು ಯಾರಿಗೂ ತಿಳಿದಿರಲಿಲ್ಲ.. ಅವರ ಸಾವಿರಾರು ಅಭಿಮಾನಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ಇಷ್ಟು ದಿನ ಕಾಣೆಯಾಗಿದ್ದ ನಟಿ ಮಾಧವಿ ಈಗ ಪತ್ತೆಯಾಗಿದ್ದಾರೆ. ಈಗ ಅವ್ರು ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಅಂತೀರಾ? ಮುಂದೆ ಓದಿ.
ಭಾರತೀಯ ಮತ್ತು ಜರ್ಮನ್ ಹೆಸರಿನ ಔಷಧೀಯ ಉದ್ಯಮಿಯಾದ ರಾಲ್ಫ್ ಶರ್ಮಾ ಅವರನ್ನ 1996ರಲ್ಲಿ ಮಾಧವಿ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲೇ ಮಾಧವಿ ತನ್ನ ಗಂಡನ ಜೊತೆ ಅಮೆರಿಕಾಗೆ ಹೊರಟು ಹೋದರು. ಅಲ್ಲಿ ತನ್ನ ಪತಿಯ ಮೆಡಿಕಲ್ ಫಾರ್ಮಸಿ ಕಂಪನಿಗೆ ಸ್ವತಃ ಮಾಧವಿ ಅವರೇ ಸಿಇಓ ಆಗ್ತಾರೆ. ತಮ್ಮ ಕಂಪನಿಯ ಕೆಲಸಗಳಲ್ಲಿ ಬ್ಯುಸಿಯಾದರು. ಕೆಲವೇ ವರ್ಷಗಳಲ್ಲಿ ಸಾಂಸಾರಿಕ ಜೀವನದ ಕಡೆಗೂ ಗಮನಹರಿಸಿದ ಮಾದವಿಯವರಿಗೆ ಟಿಫಾನಿ ಶರ್ಮಾ, ಎವೆಲಿನ್ ಶರ್ಮಾ, ಪ್ರಿಸ್ಸಿಲಾ ಶರ್ಮಾ ಎಂಬ ಮೂರು ಮುದ್ದಾದ ಹೆಣ್ಣು ಮಕ್ಕಳು ಜನಿಸಿದ್ದಾರೆ.
ಸತತ ಇಪ್ಪತ್ತು ವರ್ಷಗಳ ಕಾಲ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಮೆರೆದು ಆ ದಶಕಗಳ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಮಾಧವಿ ಈಗ ಅಮೆರಿಕಾದ ಸೌತ್ ಜರ್ಸಿಯಲ್ಲಿ ತಮ್ಮ ಪತಿ ಮತ್ತು ಮೂರು ಮಕ್ಕಳೊಂದಿಗೆ ಸುಖ ಜೀವನ ನಡೆಸುತ್ತಿದ್ದಾರೆ.. ಮತ್ತೊಮ್ಮೆ ಚಿತ್ರಗಳಲ್ಲಿ ಆಫರ್ ಬಂದರೆ ನಟಿಸುತ್ತೀರಾ ಎನ್ನುವ ಪ್ರಶ್ನೆಗೆ ಸುತರಾಂ ಇಲ್ಲ ಎಂದು ಹೇಳಿದ್ದಾರೆ.