ಲವ್ವರ್

ಮಗಳ ಲವ್ವರ್ ಜೊತೆ ಸೇರಿಕೊಂಡು ಗಂಡನನ್ನೇ ಮುಗಿಸೋಕೆ ಮಾಸ್ಟರ್ ಮೈಂಡ್ ಪ್ಲಾನ್ ಮಾಡಿದ ಮಹಿಳೆ

Today News / ಕನ್ನಡ ಸುದ್ದಿಗಳು

ಈ ಘಟನೆ ನಡೆದಿರುವುದು ಬೇರೆ ಯಾವುದು ದೇಶದಲ್ಲಿ ಅಥವಾ ಬೇರೆ ಯಾವುದು ರಾಜ್ಯದಲ್ಲಿ ಅಲ್ಲ ಬದಲಾಗಿ ನಮ್ಮ ರಾಜ್ಯದ ಬೆಳಗಾವಿಯಲ್ಲಿ. 57 ವರ್ಷ ಸುಧೀರ್ ಕಾಂಬಳೆ ದುಬೈ ನಿಂದ ಊರಿಗೆ ಬಂದು ನೆಲೆಸಿ ಸಣ್ಣದಾಗಿ ರಿಯಲ್ ಎಸ್ಟೇಟ್ ಉದ್ಯಮವನ್ನು ಪ್ರಾರಂಭಿಸಿಕೊಂಡಿದ್ದರು ಆದರೆ ಊರಿನಲ್ಲಿ ಆತನ ಮರಣ ಶಾಸನ ಲಿಖಿತವಾಗಿತ್ತು. ಹೌದು ಮಿತ್ರರೇ ಈ ಘಟನೆ ನಡೆದಿರುವುದು ಸೆಪ್ಟೆಂಬರ್ 16ರಂದು.

ಮಗಳ ಲವ್ವಿ ಡವಿಯನ್ನು ಪ್ರಶ್ನಿಸಿದ್ದಕ್ಕಾಗಿ ತಂದೆಗೆ ಸುಪಾರಿಯನ್ನು ನೀಡಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ. ವಿಚಾರಣೆ ಸಂದರ್ಭದಲ್ಲಿ ಮೊದಲಿಗೆ ತಂದೆ ಒಂದು ರೂಮಿನಲ್ಲಿ ರೂಮಿನಲ್ಲಿ ಮತ್ತೆರಡು ಮಕ್ಕಳು ಇನ್ನೊಂದು ರೂಮಿನಲ್ಲಿ ಮಲಗಿದ್ದರು ಹೀಗಾಗಿ ನಡೆದಿರುವ ಘಟನೆ ಬಗ್ಗೆ ನಮಗೆ ಚೂರು ಕೂಡ ಸುಳಿವು ಇಲ್ಲ ಎಂಬುದಾಗಿ ನಟಿಸಿದರು. ತನಿಖೆಯನ್ನು ಚುಡುಕು ಗೊಳಿಸಿದ ಪೊಲೀಸರಿಗೆ ಕೋಣೆಯಲ್ಲಿರುವ ಲವರ್ ಅನ್ನು ಕರೆಸಿ ತಂದೆಯ ಮಾರಣ ಹೋಮವನ್ನು ಮಾಡಿಸಿದ್ದು ಅತಿ ಶೀಘ್ರವಾಗಿ ತಿಳಿದು ಬಂದಿತ್ತು.

ಮಗಳು ಅಕ್ಷಯ್ ಎನ್ನುವವನನ್ನು ಪ್ರೀತಿಸುತ್ತಿದ್ದಳು ಹಾಗೂ ಮನೆಯಲ್ಲಿ ತಾಯಿ ಇಷ್ಟ ಬಂದಂತೆ ಇರುತ್ತಿದ್ದಳು. ಇಬ್ಬರಿಗೂ ಕೂಡ ತಂದೆ ಸಾಕಷ್ಟು ಕಿರುಕುಳ ನೀಡುತ್ತಿದ್ದನಂತೆ. ಇದಕ್ಕೆ ತಾಯಿ ಮಗಳು ಇಬ್ಬರೂ ಕೂಡ ಪ್ಲಾನ್ ಮಾಡಿ ತನ್ನ ಪ್ರಿಯಕರನನ್ನು ಕರೆಸಿ ಲಾಡ್ಜ್ ನಲ್ಲಿ ರೂಮ್ ಬುಕ್ ಮಾಡಿ ಅಲ್ಲಿಂದಲೇ ತಂದೆಯನ್ನು ಮುಗಿಸಿದ್ದಾರೆ. ಜಾಡು ಹಿಡಿದ ಪೊಲೀಸರಿಗೆ ಹತ್ತಿರದಲ್ಲೇ ಇದ್ದ ಲಾಡ್ಜ್ ನಲ್ಲಿ ಒಬ್ಬ ವ್ಯಕ್ತಿ ಸಿಸಿಟಿವಿ ಕ್ಯಾಮೆರನಲ್ಲಿ ಹೊರಗೆ ಹೋಗಿ ರಾತ್ರಿ ಕೆಲವು ಗಂಟೆಗಳ ಸಮಯದ ನಂತರ ಮತ್ತೆ ರೂಮಿಗೆ ಮರಳಿ ಬಂದಿದ್ದು ತಿಳಿದು ಬಂದಿದೆ ಇದೆ ಸುಳಿವನ್ನು ಹಿಡಿದು ಹೊರಟು ಆತನನ್ನು ಪೊಲೀಸ್ ಭಾಷೆಯಲ್ಲಿ ವಿಚಾರಿಸಿ ಬಾಯಿ ಬಿಡಿಸಿದ್ದಾರೆ.

ಈ ಸಂದರ್ಭದಲ್ಲಿ ತಂದೆ ಸುಧೀರ್ ಪ್ರತಿರೋಧ ತೋರಿಸಿದ ಕಾರಣದಿಂದಾಗಿ ಕೂಡ ಅಕ್ಷಯ್ ಕೈಗೆ ಕೊಂಚಮಟ್ಟಿಗೆ ಗಾಯವಾಗಿತ್ತು. ಇದರಿಂದಲೇ ಪೊಲೀಸರಿಗೆ ಈ ಪ್ರಕರಣದ ಕುರಿತಂತೆ ಕನ್ಫರ್ಮ್ ಆಗಿತ್ತು. ಇವರ ಪ್ಲಾನಿಂಗ್ ಬಗ್ಗೆ ಸಾಕ್ಷಾಧಾರಗಳು ಸಿಕ್ಕಾಗ ಸ್ವತಹ ಪೊಲೀಸರೇ ಇವರ ಕುರಿತಂತೆ ದಂಗಾಗಿ ಹೋಗಿದ್ದರಂತೆ. ಈ ಘಟನೆಯ ಬಗ್ಗೆ ತಪ್ಪದೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.