love-story

ಈಕೆ ಸ್ಟೋರಿನಾ ಸಿನಿಮಾದವು ನೋಡಿದ್ರೆ ನಾಳೆಯೇ ಸಿನಿಮಾ ಮಾಡ್ತಾರೆ ಅನ್ಸುತ್ತೆ..! ಮದುವೆಯಾದ ಎರಡೇ ವಾರಕ್ಕೆ ಎಂತ ಪ್ಲಾನ್ ಮಾಡಿದ್ಲು ಗೊತ್ತಾ..!ನೋಡಿ

Today News / ಕನ್ನಡ ಸುದ್ದಿಗಳು

ನಮಸ್ತೆ ಸ್ನೇಹಿತರೆ, ಇತ್ತೀಚೆಗೆ ದಿನಗಳಲ್ಲಿ ಈ ಪ್ರೀತಿಯ ಹೆಸರಲ್ಲಿ ಅದೆಷ್ಟೋ ಕೊಲೆಗಳು ನಡೆಯುವುದು ಕಾಮನ್ ಆಗಿಬಿಟ್ಟಿದೆ, ತನ್ನ ಸ್ವಾರ್ಥಕ್ಕಾಗಿ ಒಬ್ಬರ ಕೊಲೆ ಮಾಡುವ ಬದಲು ತನ್ನ ಪ್ರೇಮಿಯ ಜೊತೆ ಓಡಿಹೋಗೋದೇ ಬೆಸ್ಟ್ ಅಲ್ವಾ.. ಇವತ್ತು ನಾವು ಹೇಳುವ ಈ ಕಥೆ ಕೂಡ ನಿಮಗೆ ಇದೇ ರೀತಿ ಅನ್ನಿಸುವಂತೆ ಮಾಡುತ್ತದೆ, ಆತನ ಹೆಸರು ಆನಂದ್ ಕಾಂಬ್ಲಿ . ಪುಣೆಯಲ್ಲಿ ರೇಡಿಯಂ ನಂಬರ್ ಪ್ಲೇಟ್ ವಿಲೇವಾರಿ ಕೆಲಸ ಮಾಡುತ್ತಿದ್ದ . ಅಷ್ಟೇ ಅಲ್ಲ ಆತ ಆರ್ ಪಿ ಐ ಅನ್ನುವ ರಾಜಕೀಯ ಸಂಘ ಸಂಸ್ಥೆಯಲ್ಲಿಯೂ ಸಕ್ರಿಯನಾಗಿದ್ದ . ತನ್ನ ಕುಟುಂಬದ ನಿರ್ವಹಣೆಗಾಗಿ ಆತ ತನ್ನ ತಮ್ಮನಿಗೆ ಮದುವೆ ಆದರೂ ತಾನು ಹಾಗೇ ಉಳಿದುಕೊಂಡಿದ್ದ ..

ಕೊನೆಗೆ ತನ್ನ ಉದ್ಯಮದಲ್ಲಿ ಸುಧಾರಣೆ ಕಂಡ ನಂತರ ತಾಯಿಯ ಮಾತಿನಂತೆ ಮದುವೆ ಆಗಲು ಒಪ್ಪಿದ್ದ . ಅದೇ ರೀತಿ ತಮ್ಮ ದೂರದ ಸಂಬಂಧಿಯೇ ಆಗಿದ್ದ ದೀಕ್ಷಾ ಅನ್ನುವವಳ ಜೊತೆ 2018 ಮೇ ನಲ್ಲಿ ಮದುವೆ ಆಗಿದ್ದ.ಹಾಗೇ ಜೂನ್ 2 ರಂದು ಇವರು ಹನಿಮೂನ್ ಗೆ ಪುಣೆಯ ಹಿಲ್ ಸ್ಟೇಷನ್ ಮಹಬಲೇಶ್ವರ ಹಾಗೂ ಪಂಚದಂಡಿಗೆ ಹೋಗಲು ನಿರ್ಧರಿಸುತ್ತಾರೆ . ಇವರ ಜೊತೆ ಆನಂದ್ ಗೆಳೆಯ ರಾಜೇಶ್ ಹಾಗೂ ಆತನ ಪತ್ನಿ ಕಲ್ಯಾಣಿಯೂ ಇರುತ್ತಾರೆ . ಹೀಗೆ ಹಿಲ್ ಸ್ಟೇಷನ್‌’ನ ಸೌಂದರ್ಯ ಸವಿಯುತ್ತಾ ಸುಮಾರು 90 ಕಿ ಮೀ ಸಾಗುವ ವೇಳೆಗೆ ದೀಕ್ಷಾ ತನಗೆ ಸುಸ್ತಾಗುತ್ತಿದೆ ಎಂದು ಹೇಳಿ ಕಾರಿಂದ ಇಳಿದು ಸ್ವಲ್ಪ ದೂರ ಹೋಗುತ್ತಾಳೆ .

ತನ್ನ ಪತ್ನಿ ಒಬ್ಬಳೇ ಹೋಗುವುದನ್ನು ನೋಡಿದ ಆನಂದ್ ತಾನೂ ಕಾರಿಂದ ಇಳಿದು ಆಕೆಯನ್ನು ಹಿಂಬಾಲಿಸುವಾಗ ಅದೆಲ್ಲಿಂದಲೋ ಎರಡು ಬೈಕಿನಲ್ಲಿ ಬಂದ ನಾಲ್ವರು ಆನಂದ್ ಕಾಂಬ್ಲಿ ಮೇಲೆ ಎರಗಿ ಹರಿತವಾದ ಚೂರಿಯಿಂದ ಬರ್ಬರವಾಗಿ ಹಲ್ಲೆ ಮಾಡುತ್ತಾರೆ . ಈ ಸಮಯದಲ್ಲಿ ದೀಕ್ಷಾ ಜೋರಾಗಿ ಕಿರುಚಿದಾಗ ತಕ್ಷಣ ಏನೋ ಆಗಿದೆ ಎಂದು ಅಲ್ಲಿಗೆ ರಾಜೇಶ್ ಹಾಗೂ ಕಲ್ಯಾಣಿ ಬಂದು ನೋಡಿದಾಗ ಆನಂದ್ ಶರೀರ ರಕ್ತ ಸಿಕ್ತವಾಗಿ ಬಿದ್ದಿತ್ತು . ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನ ಆಗದೆ ಆನಂದ್ ಕೊನೆಯುಸಿರೆಳೆದಿದ್ದ..

ಇತ್ತ ರಾಜೇಶ್ ತನ್ನ ಗೆಳೆಯ ಸಾವಿನ ಬಗ್ಗೆ ಪೋಲಿಸ್ ರಿಗೆ ದೂರು ಕೊಟ್ಟಿದ್ದ.ಅದರಂತೆ ತನಿಖೆ ನಡೆಸಿದಾಗ ಎಲ್ಲರೂ ಬೆಚ್ಚಿ ಬೀಳುವಂತಹ ಒಂದು ಸತ್ಯ ಬೆಳಕಿಗೆ ಬಂದಿತ್ತು . ಆನಂದ್ ಕಾಂಬ್ಲಿ ಸಾವಿಗೆ ಆತನ ಪತ್ನಿಯೇ ಕಾರಣ ಆಗಿದ್ದಳು . ಆಕೆ ತರುಣ್ ಅನ್ನುವವನ್ನು ಪ್ರೀತಿಸಿ ಮದುವೆಯೂ ಅಗಿದ್ದಳು , ಆದರೆ ಇದು ಆಕೆಯ ಮನೆಯವರಿಗೆ ಇಷ್ಟ ಇಲ್ಲದ ಕಾರಣ ಆ ವಿಷಯವನ್ನು ಮುಚ್ಚಿಟ್ಟು ಆನಂದ್ ಜೊತೆ ಮದುವೆ ಮಾಡಿಸಿದ್ದರು.ಇತ್ತ ದೀಕ್ಷಾ ಹಾಗು ತರುಣ್ ಇಬ್ಬರೂ ಆನಂದ್ ನನ್ನು ಸಾಯಿಸಿ ತಾವಿಬ್ಬರೂ ಒಂದಾಗುವ ಪ್ಲಾನ್ ಹಾಕಿದ್ದರು..

ಅದರಂತೆ ಹನಿಮೂನ್ ಹೋಗಿದ್ದಾಗ ಯಾರಿಗೂ ಸಂದೇಹ ಬಾರದಂತೆ ಯಾರೋ ಕಳ್ಳರು ತನ್ನ ಚಿನ್ನ ದೋಚುವಾಗ ಅಡ್ಡ ಹೋದ ಆನಂದ್ ನನ್ನು ಸಾಯಿಸಿದ್ದಾರೆ ಅನ್ನುವಂತೆ ಷಡ್ಯಂತ್ರ ರೂಪಿಸಿದ್ದರು . ಆದರೆ ಪೊಲೀಸ್ ತನಿಖೆ ವೇಳೆ ದೀಕ್ಷಾಳ ಮೊಬೈಲ್ ಪರಿಶೀಲನೆ ಮಾಡುವಾಗ ಎಲ್ಲ ಸತ್ಯ ಹೊರ ಬಿದ್ದಿದ್ದು , ಇಬ್ಬರೂ ಕಂಬಿಯೊಳಗೆ ಇರುವಂತಾಗಿಧ.ಇತ್ತ ಆನಂದ್ ಕಾಂಬಿ ಅನ್ಯಾಯವಾಗಿ ಜೀವನ ಕಳೆದುಕೊಂಡಿದ್ದ.ಈ ಧಾರುಣ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ ..

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.