ಹೆಂಡತಿ

ಪ್ರಿಯಕರನ ಜೊತೆ ಹೆಂಡತಿಯ ಮದುವೆ ಮಾಡಿಸಿದ ಗಂಡ..ಆದರೆ ಮರುಕ್ಷಣವೇ ಆಕೆ ಮಾಡಿದ ಕೆಲಸವೇ ಬೇರೆ..ಶಾಕ್‌ ಆದ ಗಂಡ..

CINEMA/ಸಿನಿಮಾ

ವಯಸ್ಸಿನಲ್ಲಿ ಪ್ರೀತಿಯಲ್ಲಿ ಬೀಳೋದು ಸಹಜ.. ಆದರೆ ಮದುವೆಯಾದ ಮೇಲೆ ಮತ್ತೊಬ್ಬ ಪುರುಷನೊಂದಿಗೆ ಪ್ರೀತಿಯಲ್ಲಿ ಬೀಳೋದು ಒಂದು ರೀತಿ ನಮ್ಮ ಸಮಾಜ ಒಪ್ಪದ ವಿಚಾರ.. ಗಂಡನಿಗಾಗಿ ಸರ್ವಸ್ವವನ್ನಿ ತ್ಯಾಗ ಮಾಡಿ ಮುಂದಿನ ಬದುಕು ಕಟ್ಟಿಕೊಳ್ಳುವುದಾಗಿ ಹೆಂಡತಿಯು.. ಇತ್ತ ಹೆಂಡತಿಯೇ ತನಗೆಲ್ಲಾ.. ಆಕೆಯ ಮುಂದಿನ ಸಂಪೂರ್ಣ ಜವಾಬ್ದಾರಿ ನನ್ನದೇ.. ಆಕೆಯನ್ನು ಪ್ರೀತಿಯಿಂದಲೂ ಕಾಳಜಿಯಿಂದಲೂ ನೋಡಿಕೊಳ್ಳುವುದಾಗಿ ಗಂಡನೂ ಸಹ ಮದುವೆ ಸಮಯದಲ್ಲಿ ಪ್ರಮಾಣ ಮಾಡಿಯೇ ದಾಂಪತ್ಯ ಜೀವನಕ್ಕೆ ಕಾಲಿರಿಸಿರುತ್ತಾರೆ.. ಆದರೂ ಸಹ ಮದುವೆಯ ನಂತರ ಗಂಡನಿಗೆ ಪರಸ್ತ್ರೀ ಜೊತೆಗೆ.. ಹೆಂಡತಿಗೆ ಪರ ಪುರುಷನ ಜೊತೆಗೆ ಒಮ್ಮೊಮ್ಮೆ ಪ್ರೀತಿಯಾಗಿ ಬಿಡುತ್ತದೆ.. ಆದರೆ ಅಂತಹ ವಿಚಾರ ತಿಳಿದಾಗ ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯ ಮೂಡಿ ದೂರಾಗೋದು ಸಹಜ..

ಆದರೆ ಇಲ್ಲೊಬ್ಬ ಪತಿ ಮಹಾಶಯ ತನ್ನ ಹೆಂಡತಿ ಪ್ರೀತಿಸುತ್ತಿದ್ದ ಹುಡುಗನ ಜೊತೆಯೇ ಆಕೆಯ ಮದುವೆಯನ್ನು ಮಾಡಿಸಿ ಸಂತೋಷವಾಗಿ ಕಳುಹಿಸಿಕೊಟ್ಟಿದ್ದಾನೆ.. ಆದರೆ ಮದುವೆಯಾದ ಮರುಕ್ಷಣವೇ ಆಕೆ ಗಂಡನ ಬಗ್ಗೆ ಕೊಟ್ಟ ಹೇಳಿಕೆ ಮಾತ್ರ ನಿಜಕ್ಕೂ ಆಶ್ಚರ್ಯವಾಗಿದೆ.. ಹೌದು ಹೆಂಡತಿ ಹೇಳಿದ ಮಾತು ಕೇಳಿ ಆಕೆಯ ಗಂಡ ಬೆಚ್ಚಿಬಿದ್ದಿದ್ದಾನೆ.. ಹೌದು ಮದುವೆ ನಂತರ ಹೆಂಡತಿ ಮತ್ತೊಬ್ಬನ ಜೊತೆ ಸಂಬಂಧ ಹೊಂದಿದರೆ ಉರಿದು ಬೀಳುವ ಗಂಡಸರ ನಡುವೆ ಇಲ್ಲೊಬ್ಬ ತನ್ನ ಪತ್ನಿಯ ಇಚ್ಛೆಯಂತೆ ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.. ಸಾಮಾಜಿಕ ಜಾಲತಾಣದಲ್ಲಿ ಆಕೆಯ ಗಂಡನ ಕಾರ್ಯಕ್ಕೆ ಮರುಗಿ ತ್ಯಾಗಮಯಿ ಗುರು ನೀನು ಎಂದು ಕಮೆಂಟ್ ಮಾಡುತಲಿದ್ದಾರೆ.. ಆದರೆ ಇದೆಲ್ಲಾ ಮದುವೆಯ ಹಿಂದೆ ಅಸಲಿ ವಿಚಾರಗಳು ಬೇರೆಯೇ ಇದ್ದಂತೆ ಕಾಣುತ್ತಿದೆ.. ಹೌದು ಮದುವೆಯ ನಂತರ ಗಂಡ ಹೆಂಡತಿ ಇಬ್ಬರ ಹೇಳಿಕೆಯೂ ಬೇರೆ ಬೇರೆ ತರನಾಗಿದ್ದು ಯಾವುದು ಸುಳ್ಳೋ ಯಾವುದು ಸತ್ಯವೋ ಎನಿಸುತ್ತಿದೆ..

ಹೌದು ಬಿಹಾರದ ಛಪ್ರಾ ಎಂಬ ಗ್ರಾಮದಲ್ಲಿ ಸಿನಿಮೀಯ ಶೈಲಿಯಲ್ಲಿ ಗಂಡ ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿದ್ದಾನೆ.. ಹೌದು ಮದುವೆಯಾಗಿ ವರ್ಷಗಳು ತನ್ನ ಜೊತೆ ಸಂಸಾರ ಮಾಡಿಕೊಂಡಿದ್ದ ಹೆಂಡತಿ ನಿಕ್ಕಿ ಕಳೆದ ಆರು ತಿಂಗಳಿಂದ ಮತ್ತೊಬ್ಬ ಯುವಕನ ಪ್ರೇಮ ಪಾಶಕ್ಕೆ ಬಿದ್ದಿದ್ದಳು.. ಈ ವಿಚಾರ ತಿಳಿದ ಗಂಡ ಆಕೆಯನ್ನು ಪ್ರಿಯಕರನ ಜೊತೆ ಸೇರಿಸಿ ತ್ಯಾಗಮಯಿ ಯಾಗಿದ್ದಾನೆ.. ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆ ವೀಡಿಯೋ ವೈರಲ್ ಆಗಿದ್ದು ವೀಡಿಯೋದಲ್ಲಿ ಗಂಡ ಸಂತೋಷದಿಂದಲೇ ಹೆಂಡತಿಗೆ ಹರಸಿದ್ದಾನೆ.. ನಂತರ ಮಾತನಾಡಿರುವ ಗಂಡ ನನ್ನ ಕತೆ ಬಿಡಿ ಹೆಂಡತಿ ಚೆನ್ನಾಗಿದ್ದರೆ ಸಾಕು.. ನಮಗೆ ಒಂದು ಹೆಣ್ಣು ಮಗು ಇದೆ..‌ ಅದನ್ನು ನಾನೇ ಸಾಕುತ್ತೇನೆ.. ಅವಳು ಆ ಯುವಕನ ಜೊತೆ ಚೆನ್ನಾಗಿರಲಿ ಎಂದು ಹರಸಿದ್ದಾನೆ..

ಆದರೆ ಇತ್ತ ಪತ್ನಿ ನಿಕ್ಕಿ ತನ್ನ ಗಂಡನ ಬಗ್ಗೆ ಹೇಳಿದ್ದೇ ಬೇರೆ.. ಹೌದು ನನ್ನ ಗಂಡ ನನಗೆ ಪ್ರತಿದಿನ ನೋವು ನೀಡುತ್ತಿದ್ದ.. ಅದೇ ಕಾರಣಕ್ಕೆ ನಾನು ಈ ಯುವಕನ ಜೊತೆ ಬಂದಿದ್ದೇನೆ.. ನನಗೆ ಕೈ ಮಾಡುತ್ತಿದ್ದ.. ಆದರೆ ಈಗ ಆ ರೀತಿ ಮಾಡಿದರೆ ತಿರುಗಿಸಿ ನಾನು ಸಹ ಕೈ ಮಾಡುವೆ ಎಂದಿದ್ದು ಪತ್ನಿಯ ಹೇಳಿಕೆ ಕಂಡು ಇತ್ತ ಗಂಡ ಶಾಕ್ ಆಗಿದ್ದಾನೆ.. ಜೊತೆಗೆ ಆಕೆಯ ಪ್ರಿಯಕರ ಸಹ ಅವಳ ಮಾತಿನಂತೆಯೇ ಆಕೆಯ ಗಂಡ ಇವಳಿಗೆ ನೋವು ನೀಡುತ್ತಿದ್ದ ಅದಕ್ಕೆ ನಾನು ಮದುವೆಯಾದೆ ಎಂದಿದ್ದಾನೆ.. ಆದರೆ ಪುಣ್ಯಾತ್ಗಿತ್ತಿ ತನ್ನ ಹೊಸ ಪ್ರಿಯಕರನ ಜೊತೆ ಮದುವೆಯಾಗಿ ನೆಮ್ಮದಿಯಾಗಿ ಸಂಸಾರ ನಡೆಸಲು ಮುಂದಾಗಿದ್ದು.. ತನ್ನ ಹಳೆಯ ಗಂಡನಿಗೆ ಹುಟ್ಟಿದ ಮಗಳ ಬಗ್ಗೆ ಚಕಾರವೂ ಸಹ ಎತ್ತಿಲ್ಲ..

ಅತ್ತ ಮಗಳನ್ನು ನಾನೇ ಸಾಕುವೆ ಎಂದಿರುವ ಮಾಜಿ ಪತಿ ಹೆಂಡತಿ ಆತನ ಜೊತೆ ಚೆನ್ನಾಗಿರಲಿ ಎಂದಿದ್ದಾನೆ.. ಅಷ್ಟೇ ಅಲ್ಲದೇ ನಾನಿ ಸಹ ಇನ್ನೊಂದು ಮದುವೆ ಮಾಡಿಕೊಂಡು ನನ್ನ ಮಗಳನ್ನು ನೋಡಿಕೊಳ್ತೇನೆ ಎಂದಿದ್ದಾನೆ.. ಒಟ್ಟಿನಲ್ಲಿ ಇಬ್ಬರ ಹೇಳಿಕೆಗಳಲ್ಲಿ ಯಾವುದು ನಿಜವೋ ಯಾವುದು ಸುಳ್ಳೊ ತಿಳಿಯದು.. ಆದರೆ ಇವರಿಬ್ಬರ ಮೂರು ದಿನದ ಸಂಸಾರದ ಆಟಕ್ಕೆ ಬಲಿಯಾಗಿದ್ದು ಮಾತ್ರ ಆ ಪುಟ್ಟ ಹೆಣ್ಣು ಮಗಳು.. ಒಟ್ಟಿನಲ್ಲಿ ಒಲ್ಲದ ಮನಸ್ಸಿನಿಂದ ಸಂಸಾರ ನಡೆಸುತ್ತಿದ್ದ ಆಕೆ ಇಂದು ಗಂಡನಿಂದ ದೂರಾಗಿದ್ದು ಆ ಪ್ರಿಯಕರನ ಜೊತೆಯಾದರೂ ಚೆನ್ನಾಗಿರಲಿ.. ಇತ್ತ ಅವನು ಮತ್ತೊಂದು ಮದುವೆ ಆಗೋದಂತೂ ಸತ್ಯ.. ಆ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಹೆಣ್ಣು ಅವನಿಗೆ ಪತ್ನಿಯಾಗಿ ಸಿಗಲಷ್ಟೇ.. ಇವರುಗಳ ಮೂರು ದಿನದತೀ ಟೆಯ ಸಂಸಾರಕ್ಕೆ ಆ ಹೆಣ್ಣು ಮಗುವಿನ ಭವಿಷ್ಯ ಹಾಳಾಗದಿದ್ದರೆ ಅಷ್ಟೇ ಸಾಕು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...