ಪ್ರೀತಿ ಮಾಯೆ ಹುಷಾರು ಅಂತಾರಲ್ಲ ಕೆಲವೊಂದು ಸರಿ ಅದು ನಿಜ ಅನಿಸುತ್ತೆ. ಇಂದಿನ ಜಮಾನದಲ್ಲಿ ನಿಜ ಪ್ರೀತಿ ಸಿಗೋದು ತುಂಬಾ ಕಡಿಮೆ. ಪ್ರೀತಿ ಹೆಸರಲ್ಲಿ ಕೆರಳದಲ್ಲಿ ನಡೆದ ಘಟನೆಯೊಂದು ಹೃದಯ ವಿದ್ರಾಹಕವಾಗಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಯುವಕನ್ನು ಸ್ವಾರ್ಥಕ್ಕಾಗಿ ಯುವತಿಯೊರ್ವಳು ನಿರ್ದಯವಾಗಿ ಕೊಂದಿದ್ದಾಳೆ. ಈ ಘಟನೆ ದೇವರನಾಡಿನ ತಿರುವನಂತಪುರಂನ ಪರಸಾಲದಲ್ಲಿ ನಡೆದಿದೆ.ಪ್ರೀತಿ ಮಾಯೆ ಹುಷಾರು ಅಂತಾರಲ್ಲ ಕೆಲವೊಂದು ಸರಿ ಅದು ನಿಜ ಅನಿಸುತ್ತೆ. ಇಂದಿನ ಜಮಾನದಲ್ಲಿ ನಿಜ ಪ್ರೀತಿ ಸಿಗೋದು ತುಂಬಾ ಕಡಿಮೆ. ಪ್ರೀತಿ ಹೆಸರಲ್ಲಿ ಕೆರಳದಲ್ಲಿ ನಡೆದ ಘಟನೆಯೊಂದು ಹೃದಯ ವಿದ್ರಾಹಕವಾಗಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಯುವಕನ್ನು ಸ್ವಾರ್ಥಕ್ಕಾಗಿ ಯುವತಿಯೊರ್ವಳು ನಿರ್ದಯವಾಗಿ ಕೊಂದಿದ್ದಾಳೆ. ಈ ಘಟನೆ ದೇವರನಾಡಿನ ತಿರುವನಂತಪುರಂನ ಪರಸಾಲದಲ್ಲಿ ನಡೆದಿದೆ.
ತಮಿಳುನಾಡು ಗಡಿಗೆ ಹೊಂದಿರುವ ಕೇರಳದ ಪರಸಾಲ ಪ್ರದೇಶದ ವಿದ್ಯಾರ್ಥಿ ಶರೋನ್ ರಾಜ್ ಕನ್ಯಾಕುಮಾರಿ ಜಿಲ್ಲೆಯ ನೆಯೂರ್‌ನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ಬಿಎಸ್‌ಸಿ ರೇಡಿಯಾಲಜಿ ಓದುತ್ತಿದ್ದ. ಕಾರಕೋಣಂ ಪ್ರದೇಶದ ಯುವತಿ ಗ್ರೀಷ್ಮಾ (22 ವರ್ಷ) ಕೂಡ ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಆರಂಭದಲ್ಲಿ ಇಬ್ಬರ ನಡುವೆ ಸ್ನೇಹವಿದ್ದು, ಕೊನೆಗೆ ಪ್ರೀತಿಗೆ ತಿರುಗಿತ್ತು.
ಗಾಢವಾದ ಪ್ರೀತಿಯಲ್ಲಿರುವಾಗಲೇ ಯುವತಿಯ ಮನೆಯವರು ಆಕೆಗೆ ನಿಶ್ಚಿತಾರ್ಥ ಮಾಡುತ್ತಾರೆ. ಇದಾದ ಬಳಿಕ ಇದೆ ತಿಂಗಳು 17ರಂದು ಗ್ರೀಷ್ಮಾ, ಶರೋನ್‌ಗೆ ಕರೆ ಮಾಡಿ ಮನೆಯಲ್ಲಿ ಯಾರೂ ಇಲ್ಲ ಬಾ ಎಂದು ಕರೆದಿದ್ದಳು. ಬಳಿಕ ಶರೋನ್ ರಾಜ್ ತನ್ನ ಗೆಳೆಯನ ಜೊತೆ ಪ್ರೇಯಸಿಯ ಮನೆಗೆ ಹೋಗಿದ್ದ. ಆಗ ಗ್ರೀಷ್ಮಾ ಶರೋನ್‌ಗೆ ಕುಡಿಯಲು ಜ್ಯೂಸ್ ಕೊಟ್ಟಳು. ಜ್ಯೂಸ್ ಕುಡಿದ ನಂತರ ಶರೋನ್ ಅವರ ದೇಹದಲ್ಲಿ ಕೆಲವು ಬದಲಾವಣೆ ಕಂಡು ಬಂದವರು.
ಯುವತಿಯ ಮನೆಯಿಂದ ವಾಂತಿ ಮಾಡುತ್ತಲೇ ಹೊರ ಬಂದ ಶರೋನ್‌ನನ್ನು ಮನೆಯ ಹೊರಗಿದ್ದ ಆತನ ಗೆಳೆಯ ಆಸ್ಪತ್ರೆಗೆ ಸೇರಿದ್ದಾನೆ. ಆದರೂ, ಕೆಲವು ದಿನಗಳ ನಂತರ ಅವರ ದೇಹದ ಕೆಲವು ಭಾಗಗಳಿಗೆ ಹಾನಿಯಾಯಿತು ಮತ್ತು ಅವರ ಸ್ಥಿತಿಯು ಹದಗೆಟ್ಟಿತು ಮತ್ತು ಅವರು ನಾಲ್ಕು ದಿನಗಳ ಹಿಂದೆ ನಿಧನರಾದರು. ಯುವತಿ ನೀಡಿದ ಜ್ಯೂಸ್ ಕುಡಿದು ಮಗ ಮೃತಪಟ್ಟಿದ್ದಾನೆ ಎಂದು ಶರೋನ್ ರಾಜ್ ತಂದೆ ಜಯರಾಜ್ ಪಾರಸಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ ವಿಶೇಷ ಪಡೆ ರಚಿಸಿದ ಪೊಲೀಸರು ಗಂಭೀರ ತನಿಖೆ ಆರಂಭಿಸಿದರು. ಆಗ ಹಲವು ದಿಗ್ಭ್ರಮೆಗೊಳಿಸುವ ಮಾಹಿತಿ ಹೊರಬಿದ್ದಿದ್ದು, ಪ್ರೀತಿಸಿದ ಯುವಕನ್ನು ಕೊಲೆ ಮಾಡಲು ಜಾತಕ ಕಾರಣವಾಗಿತ್ತು ಎಂಬ ಅಂಶ ಬಯಲಿಗೆ ಬಿದ್ದಿದೆ.
ಯುವತಿ ಗ್ರೀಷ್ಮಾ ಜಾತಕದ ಪ್ರಕಾರ ಮೊದಲ ಪತಿ ಸಾಯುತ್ತಾನೆ ಮತ್ತು ಎರಡನೇ ಗಂಡನೊಂದಿಗೆ ಸಂತೋಷವಾಗಿರುತ್ತಾಳೆ ಎಂದು ಜ್ಯೋತಿಷಿ ಹೇಳಿದ್ದರಂತೆ. ಹಾಗಾಗಿ ಶರೋನ್‌ನನ್ನು ಪ್ರೀತಿಸಿ ಅವನನ್ನು ಕೊಂದು ನಂತರ, ಅವಳಿಗೆ ತೋರಿಸಿದ್ದ ಶ್ರೀಮಂತನನ್ನು ಮದುವೆಯಾಗಿ ಐಷಾರಾಮಿ ಜೀವನ ನಡೆಸಬೇಕು ಎಂದು ಅಂದುಕೊಂಡಿದ್ದಳು. ಸದ್ಯ ಈ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಪ್ರಕರಣದಲ್ಲಿ ಯುವತಿ ಕೊಲೆಗಾರ್ತಿ ಎಂದು ಸಾಭೀತಾದ ಹಿನ್ನೆಲೆ ಯುವತಿ ಗ್ರೀಷ್ಮಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದು ಬಂದಿದೆ.