ಮಹಿಳೆ

ಮಹಿಳೆಯರು ತುಟಿ ಕಚ್ಚಿದರೆ ಅದರ ಅರ್ಥವೇನು ಗೊತ್ತೇ? ತುಟಿಗಳಿಂದ ನೀಡುವ ಸನ್ನೆಗಳಿಗೆ ನಿಜವಾದ ಅರ್ಥವೇನು ನೋಡಿ!!

Girls Matter/ಹೆಣ್ಣಿನ ವಿಷಯ

ಹೆಣ್ಣನ್ನು ಮಾಯೆ ಅನ್ನುತ್ತಾರೆ, ಆಕೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಆಗುವುದಿಲ್ಲ, ಆಕೆಯ ಮನಸ್ಸು ಒಂದು ಬಾರಿ ಇದ್ದ ಹಾಗೆ ಇರುವುದಿಲ್ಲ , ಹೆಣ್ಣು ಚಂಚಲೆ ಎಂದೆಲ್ಲಾ ಹೇಳಲಾಗುತ್ತದೆ. ಅದು ನಿಜವೂ ಹೌದು. ಆದರೆ ಹೆಣ್ಣಿನ ಭಾವನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ,ಆಕೆಯ ಭಾವನೆಗಳನ್ನು ಸರಿಯಾಗಿ ತಿಳಿದುಕೊಂಡರೆ ಹೆಣ್ಣು ಹೇಗೆ ಅನ್ನುವುದು ಗೊತ್ತಾಗುತ್ತದೆ. ಇನ್ನು ಹೆಣ್ಣಿನ ಕೆಲವು ಸನ್ನೆಗಳ ಮೂಲಕವೂ ಆಕೆಯ ಮನಸ್ಸು ಹೇಗೆ, ಆಕೆ ಏನನ್ನು ಬಯಸುತ್ತಾಳೆ ಅನ್ನವುದನ್ನು ಅರ್ಥ ಮಾಡಿಕೊಳ್ಳಬಹುದು.

ನಾವಿವತ್ತು ಹೆಣ್ಣಿನ‌ ಯಾವ ಯಾವ ಸನ್ನೆಗಳು ಏನನ್ನು ಸೂಚಿಸುತ್ತದೆ ಎಂದು ಹೇಳುತ್ತೇವೆ. ‌ಮೊದಲನೆಯದಾಗಿ ಒಂದು ಹೆಣ್ಣನ್ನು ನೀವು ಆಕೆ ಮುದುಡಿದಂತೆ ಕೂರುವುದನ್ನು, ಒಂದು ಮೂಲೆಯಲ್ಲಿ ಹೋಗಿ ನಿಂತು ಕೊಳ್ಳುವುದನ್ನು ಹೆಚ್ಚಾಗಿ ಗಮನಿಸಿದರೆ ಆಕೆ ಮನೆಯಲ್ಲಿ ಎಲ್ಲರಿಂದಲೂ ಧೋರಣೆಗೆ ಒಳಗಾಗಿದ್ದಾಳೆ, ಪುರುಷನಿಗೆ ಶರಣಾಗಿ ಜೀವನ ನಡೆಸುತ್ತಿದ್ದಾಳೆ, ಆಕೆ ಭಯಭೀತಳಾಗಿ ಜೀವನ ಮಾಡುತ್ತಿದ್ದಾಳೆ ಎಂದು ಅರ್ಥ.‌ ಎರಡನೆಯದಾಗಿ ಒಂದು ಹೆಣ್ಣು ನೇರವಾಗಿ ಕುಳಿತುಕೊಳ್ಳುವುದು, ಕಾಲು ಅಗಲಿಸಿ, ಭುಜ‌‌ ಹಿಂದೆ ಮಾಡಿ ಆರಾಮವಾಗಿ ಕೂರುವ ಹೆಣ್ಣು ತಾನು ಸ್ವಾವಲಂಬಿ ಹಾಗೂ ಅಧಿಕಾರ ಚಲಾಯಿಸುವ ಮನಸ್ಥಿತಿ ತೋರಿಸುತ್ತದೆ.‌

ಮೂರನೆಯದಾಗಿ ಯಾವುದೇ ಹೆಣ್ಣು ಒಬ್ಬರ ಜೊತೆ ಮಾತನಾಡುವಾಗ ಕೂದಲ‌ ಜೊತೆ, ಒಡವೆ ಜೊತೆ, ತಾಳಿ ಜೊತೆ ಕೈಯಾಡಿಸುತ್ತಾ ಮಾತನಾಡಿದರೆ ಆಕೆ ವೈಯಾರ ಮಾಡುತ್ತಿದ್ದಾಳೆ ಎಂದು ಅನೇಕರು ಭಾವಿಸುತ್ತಾರೆ.‌ ಆದರೆ ವಾಸ್ತವವಾಗಿ ಆಕೆ ಯಾವುದೋ ಒತ್ತಡಕ್ಕೆ ಒಳಗಾಗಿದ್ದಾಳೆ ಎಂದು ಅರ್ಥ. ಈ ಸಮಯದಲ್ಲಿ ಆಕೆಯ ಸ್ನೇಹಿತರು ಅಥವಾ ಪತಿ ಆಕೆಯನ್ನು ‌ಕಂಫರ್ಟ್ ಮಾಡಿಸುವ ಯತ್ನ ಮಾಡಬೇಕು. ನಾಲ್ಕನೆಯದಾಗಿ ಹೆಣ್ಣು ಸಣ್ಣ ಸಣ್ಣ ವಿಷಯಕ್ಕೂ ನಗುತ್ತಿದ್ದರೆ, ಸಂದರ್ಭವಲ್ಲದ ಸಂದರ್ಭದಲ್ಲಿ ನಗುತ್ತಿದ್ದಾಳೆ ಎಂದರೆ ಆಕೆ ನರ್ವಸ್ ಆಗಿದ್ದಾಳೆ ಎಂದು ತಿಳಿದುಕೊಳ್ಳಬೇಕು.

ಐದನೆಯದಾಗಿ ಆಕೆ ಪ್ರತಿ ಮಾತಿಗೂ ತಲೆಯಾಡಿಸುತ್ತಿದ್ದಾಳೆ ಎಂದರೆ ಆಕೆ ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತಿದ್ದಾಳೆ, ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದಾಳೆ, ನೀವು ಮಾತು ಮುಂದುವರೆಸಲು ಪ್ರೋತ್ಸಾಹಿಸುತ್ತಿದ್ದಾಳೆಂದು ತಿಳಿಯಬಹುದು. ಅದೇ ರೀತಿ ಮಾತನಾಡುವಾಗ ವಿಪರೀತ ಕೈ ಬಳಸಿದರೆ ಆಕೆ ನಿಯಂತ್ರಣ ಕಳೆದುಕೊಂಡಿದ್ದಾಳೆ, ಶೇಕ್ ಹ್ಯಾಂಡ್ ಮಾಡುವಾಗ ಆಕೆಯ ಕೈಯಲ್ಲಿ ಬಲ‌ ಇಲ್ಲದಂತೆ ಕಂಡರೆ ಆಕೆ ನಾಚಿಕೆ ಪಟ್ಟುಕೊಂಡಿದ್ದಾಳೆ, ಸ್ಟ್ರಾಂಗ್ ಆಗಿ ಕುಳುಕಿಸದರೆ ಆಕೆ ಆತ್ಮ ವಿಶ್ವಾಸ ಹೊಂದಿದ್ದಾಳೆ ಎಂದು ಅರ್ಥ.‌

ಇನ್ನು ಹೆಣ್ಣು ಮಕ್ಕಳು ಕೆಳಗಿನ ತುಟಿ ಕಚ್ವಿದರೆ ಪುರುಷರು ತಮ್ಮ ಮೇಲೆ ಆಸೆ ಆಕರ್ಷಣೆಯ ಸೂಚನೆ ಎಂದು ಭಾವಿಸುತ್ತಾರೆ. ಮಾದಕತೆ ಎಂದುಕೊಳ್ಳುತ್ತಾರೆ. ಆದರೆ, ಸಾಮಾನ್ಯವಾಗಿ ಮಹಿಳೆಯು ಚಿಂತಿಸುವಾಗ, ಒತ್ತಡದಲ್ಲಿದ್ದಾಗ, ಆತಂಕಕ್ಕೊಳಗಾದಾಗ ಹೀಗೆ ಕೆಳಗಿನ ತುಟಿ ಕಚ್ಚುತ್ತಾರೆ. ಈ ಮಾಹಿತಿಯ ಬಗ್ಗೆ ನಿಮ್ಮ‌ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...