
ಇಂದು ಛಾಯಾಗ್ರಹಣವು ಯುವಜನತೆಯ ನೆಚ್ಚಿನ ವೃತ್ತಿ ಕ್ಷೇತ್ರವಾಗಿದೆ ಎನ್ನಬಹುದು. ಹೌದು ಅನೇಕರು ಇಂದು ಇದನ್ನೇ ತನ್ನ ಜೀವನಾಧಾರವಾಗಿ ಮಾಡಿಕೊಂಡಿದ್ದು ಇನ್ನೂ ಕೆಲವರು ಛಾಯಾಗ್ರಹಣವನ್ನು ಫ್ಯಾಷನ್ ಆಗಿ ಮಾಡಿಕೊಂಡಿದ್ದಾರೆ.
ಹೌದು ಛಾಯಾಗ್ರಹಣವು ಕಣ್ಣಾರೆ ಕಂಡಿರುವುದನ್ನು ದಾಖಲೆಯ ರೂಪದಲ್ಲಿ ಇರಿಸಿಕೊಳ್ಳುವ ಒಂದು ಸಾಧನವಾಗಿದ್ದು ಈ ಕಲಾ ಪ್ರಕಾರವನ್ನು ಆಚರಿಸಲು ಪ್ರತಿ ವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಕೂಡ ಆಚರಿಸಲಾಗುತ್ತದೆ. ಛಾಯಾಗ್ರಹಣ ಕಲೆಗೆ ಗೌರವ ಮತ್ತು ಅದರ ಬಗ್ಗೆ ಆಸಕ್ತಿ ಹೊಂದಿರುವ ಜನರಿಗೆ ಪ್ರೋತ್ಸಾಹವನ್ನು ನೀಡುವ ದಿನ ಇದಾಗಿದ್ದು ಅಷ್ಟೇ ಅಲ್ಲದೆ ಇದು ಛಾಯಾಗ್ರಹಣದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಜನರಿಗೆ ಪ್ರೇರಣೆ ಕೂಡ ನೀಡುತ್ತದೆ.
1837 ರಲ್ಲಿ ಫ್ರೆಂಚ್‌ನ ಜೋಸೆಫ್ ನೈಸ್‌ಫೋರ್ ನೀಪ್ಸ್ ಹಾಗೂ ಲೂಯಿಸ್ ಡಾಗುರ್ರೆ ಅವರು ಡಾಗ್ಯುರೋಟೈಪ್ ಎಂಬ ಪೆಟ್ಟಿಗೆ ಆಕಾರದ ಸಾಧನವನ್ನು ಕಂಡುಹಿಡಿದಿದ್ದು ಇದು ವಿಶ್ವದ ಮೊದಲ ಛಾಯಾಗ್ರಹಣ ಪ್ರಕ್ರಿಯೆಯಾಗಿದೆ. 1839 ಜನವರಿ 9 ರಂದು ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಅಧಿಕೃತವಾಗಿ ಡಾಗ್ಯುರೋಟೈಪ್ ಅನ್ನು ಅನುಮೋದಿಸಿದ್ದು ಇದಾದ ಏಳು ತಿಂಗಳ ನಂತರ ಅಂದರೆ ಆಗಸ್ಟ್ 19 ರಂದು ಫ್ರೆಂಚ್ ಸರ್ಕಾರವು ಸಾಧನಕ್ಕಾಗಿ ಪೇಟೆಂಟ್ ಅನ್ನು ಖರೀದಿಸಿದೆ ಎಂದು ನಂಬಲಾಗಿದೆ.
ಹೌದು ಅವರು ಡಾಗ್ಯುರೊಟೈಪ್ನ ಆವಿಷ್ಕಾರವನ್ನು ಜಗತ್ತಿಗೆ ಉಡುಗೊರೆಯಾಗಿ ಘೋಷಿಸುವುದರ ಜೊತೆಗೆ ಅದು ಎಲ್ಲರಿಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಿದರು. ಇನ್ನು ಕಾಲಾನಂತರದಲ್ಲಿ ಈ ದಿನವನ್ನು ವಿಶ್ವ ಛಾಯಾಗ್ರಹಣ ದಿನವೆಂದು ಗುರುತಿಸಲು ಪ್ರಾರಂಭಿಸಲಾಯಿತು.
ಅಂದಿನಿಂದ ಛಾಯಾಗ್ರಹಣವು ತಂತ್ರಜ್ಞಾನದಲ್ಲಿನ ಬೆಳವಣಿಗೆಗಳು ಮತ್ತು ಪ್ರಗತಿಗಳೊಂದಿಗೆ ವಿಕಸನಗೊಳ್ಳುತ್ತಿದ್ದು ಮೊದಲ ಬಾಳಿಕೆ ಬರುವ ಬಣ್ಣದ ಛಾಯಾಚಿತ್ರವನ್ನು 1861ರಲ್ಲಿ ಸೆರೆಹಿಡಿಯಲಾಯಿತು. ಹೌದು ಆದರೆ ಮೊದಲ ಡಿಜಿಟಲ್ ಛಾಯಾಚಿತ್ರವನ್ನು 1957 ರಲ್ಲಿ ರಚಿಸಲಾಯಿತು. ಇನ್ನು ವಿಶ್ವ ಛಾಯಾಗ್ರಹಣ ದಿನವು ಛಾಯಾಗ್ರಹಣದ ಕಲೆ ಹಾಗೂ ಕರಕುಶಲತೆಯನ್ನು ಮತ್ತು ಈ ಮಾಧ್ಯಮದ ಬಗ್ಗೆ ಜನರು ಹೊಂದಿರುವ ಉತ್ಸಾಹವನ್ನು ಆಚರಿಸುತ್ತದೆ.
ಛಾಯಾಗ್ರಹಣದ ಉದ್ದೇಶವು ಹೇಗೆ ವಿಕಸನಗೊಂಡಿತು ಎಂಬುದನ್ನು ಕೂಡ ಈ ದಿನವು ತಿಳಿಸುತ್ತದೆ.ಇನ್ನು ಕಳೆದ ದಶಕದಲ್ಲಿ ಬಹಳಷ್ಟು ಯುವಕರು ಛಾಯಾಗ್ರಹಣವನ್ನು ಹವ್ಯಾಸವಾಗಿ ತೆಗೆದುಕೊಳ್ಳಲು ತಾಂತ್ರಿಕ ಸಾಧನಗಳಲ್ಲಿ ಆದ ಪ್ರಗತಿ ಮತ್ತು ಅವುಗಳ ಬಳಕೆಯ ಸುಲಭತೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಆಗಸ್ಟ್ 19 ಹೆಚ್ಚು ಮಹತ್ವದ್ದಾಗಿದೆ ಏಕೆಂದರೆ ಇದು ಹೆಚ್ಚಿನ ಜನರನ್ನು ಛಾಯಾಗ್ರಹಣವನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಅಥವಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ವ್ಯಕ್ತಪಡಿಸಲು ಪ್ರೇರೇಪಿಸುತ್ತದೆ.
ಸದ್ಯ ಛಾಯಾಗ್ರಾಹಣ ಕ್ಷೇತ್ರದ ಬಗ್ಗೆ ಇದೀಗ ಮಾತನಾಡಲು ಒಂದು ಕಾರಣವಿದೆ. ಈ ಅರಣ್ಯದ ಸುಂದರ ಫೋಟೋಗಳನ್ನು ತೆಗೆಯುವ ಛಾಯಾಗ್ರಹಕರು ಜೀವವನ್ನು ಕೂಡ ಲೆಕ್ಕಿಸದೆ ಸುಂದರ ಫೋಟೋಗಳನ್ನು ತೆಗೆಯುತ್ತಾರೆ ಕೆಲವೊಮ್ಮೆ ಫೋಟೋ ತೆಗೆಯುವ ಸಮಯದಲ್ಲಿ ಪ್ರಾಣಿಗಳು ಹತ್ತಿರ ಬಂದು ಬಿಡುತ್ತವೆ. ಹೌದು ಇದೀಗ ಅಂತಹದ್ದೆ ವಿಡಿಯೋ ವೊಂದು ವೈರಲ್ ಆಗಿದ್ದು ಪೋಟೋಗ್ರಾಫರ್ ಬಳಿ ಸಿಂಹ ಬಂದು ಏನು ಮಾಡಿದೆ ನೀವೆ ಕೆಳಗಿನ ವಿಡಿಯೋದಲ್ಲಿ ನೋಡಿ.
Comments are closed.