LINK-ADHAAR-PAN-CARD

ಮಾರ್ಚ್ 31 ರೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ ನೀವು ಈ ಸಮಸ್ಯೆಗಳನ್ನು ಎದುರಿಸಬಹುದು

Free Govt Schemes/ಸರ್ಕಾರಿ ಉಚಿತ ಯೋಜನೆಗಳು

ಪ್ಯಾನ್ ಕಾರ್ಡ್ ನಮ್ಮ ಬಹಳ ಮುಖ್ಯವಾದ ದಾಖಲೆಯಾಗಿದೆ. ಶಾಲೆಗೆ ಪ್ರವೇಶದಿಂದ ಕೆಲಸದವರೆಗೆ ಪ್ಯಾನ್ ಕಾರ್ಡ್ ಅಗತ್ಯವಿದೆ. ಇದಲ್ಲದೆ, ಸ್ಟಾಕ್ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ನಮಗೆ ಈ ಕಾರ್ಡ್ ಅಗತ್ಯವಿದೆ.

ಈಗ ಪ್ಯಾನ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾರ್ಚ್ 31 ರೊಳಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ಗೆ ಲಿಂಕ್ ಮಾಡದಿದ್ದರೆ. ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅನೇಕ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಮಾರ್ಚ್ 31 ರೊಳಗೆ ನಿಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ. ಈ ಸಂದರ್ಭದಲ್ಲಿ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ.

ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ, ನೀವು ಮ್ಯೂಚುವಲ್ ಫಂಡ್ಗಳು ಮತ್ತು ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ಅನೇಕ ಹಣಕಾಸು ವಹಿವಾಟುಗಳನ್ನು ಮಾಡಲು ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಸರ್ಕಾರದ ಅನೇಕ ಯೋಜನೆಗಳ ಲಾಭ ಪಡೆಯಲು ಪ್ಯಾನ್ ಕಾರ್ಡ್ ಅಗತ್ಯವಿದೆ. ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾದರೆ. ಈ ಪರಿಸ್ಥಿತಿಯಲ್ಲಿ, ನೀವು ಈ ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಒಂದು ವೇಳೆ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲಿಲ್ಲ ಎಂದರೆ ನಿಮ್ಮ ಪಾನ್ ಕಾರ್ಡ್ ಮಾನ್ಯವಾಗಿರುವುದಿಲ್ಲ. ಆಗ ಪಾನ್ ಕಾರ್ಡ್ ನಿಶ್ಕ್ರಿಯ ವಾಗುತ್ತದೆ, ನಂತರ ಸಾಕಷ್ಟು ತೊಂದರೆಗಳು ಆಗುತ್ತವೆ. ಪ್ಯಾನ್ ಕಾರ್ಡ್ ಮಾನ್ಯವಾಗಿಲ್ಲ ಎಂದರೆ ಬ್ಯಾಂಕ್ ಖಾತೆ ತೆರೆಯಲು ಕೂಡ ಸಾಧ್ಯವಿಲ್ಲ. ಐಪಿಆರ್ ಅನ್ನು ಮರುಪಾವತಿಸಲು ಆಗುವುದಿಲ್ಲ. ಶೇರ್ ಮ್ಯೂಚುಯಲ್ ಫಂಡ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡಲು ಆಗುವುದಿಲ್ಲ. ಅಲ್ಲದೆ ಟಿಡಿಎಸ್ ಹೆಚ್ಚು ಕಡಿತವಾಗಲಿದೆ. ಪ್ಯಾನ್ ಗೆ ಆದರ್ ಕಾರ್ಡ್ ಲಿಂಕ್ ಮಾಡುವ ವಿಳಂಬ ಶುಲ್ಕ 1,000 ಹಾಗಾಗಿ ಈ ರೀತಿ ಸಾಕಷ್ಟು ತೊಂದರೆಗಳು ಆಗುತ್ತವೆ, ಇವುಗಳೆಲ್ಲರಿಂದ ದೂರ ಉಳಿಯಲು ಆದಷ್ಟು ಬೇಗ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ.

ಮುಂಗಡ ತೆರಿಗೆ ಗಡುವು ಮಾರ್ಚ್ 15 ಆಗಿದ್ದು ಅದರಿಂದ ನೀವು 2022-23ರ ಹಣಕಾಸು ವರ್ಷದಲ್ಲಿ ಮುಂಗಡ ಪಾವಿತಸಬೇಕಾಗಿದ್ದರೆ ಈ ಕೂಡಲೇ ಪಾವತಿಸಿ. ಪ್ರಧಾನಮಂತ್ರಿ ಅವರ ವಯಾವಂದನಾ ಯೋಜನೆಯು ಮಾರ್ಚ್ 31ನೇ ತಾರೀಖಿನ ತನಕ ಮಾತ ಲಭ್ಯವಿದೆ. ಯಾವುದೇ ಹಿರಿಯ ನಾಗರಿಕರು ಈ ಯೋಜನೆಗೆ ಸೇರಲು ಬಯಸಿದ್ದರೆ ತಕ್ಷಣವೇ ಮಾಡಿ ಪ್ರಸ್ತುತ ಈ ಯೋಜನೆಯ ಬಡ್ಡಿಯು 7.4% ರಷ್ಟಿದೆ. ಈ ಯೋಜನೆಯ ಪಕ್ವತ ಅವಧಿಯು 10 ವರ್ಷಗಳು. ಈ ವಯವಂದನ ಯೋಜನೆಯಲ್ಲಿ ಹಿರಿಯ ನಾಗರಿಕರು ರೂಪಾಯಿ 15 ಲಕ್ಷದವರೆಗೆ ಹಣವನ್ನು ಇಡಬಹುದು. ಮತ್ತು ಮಾಸಿಕವಾಗಿ ಕನಿಷ್ಠ ಒಂದು ಸಾವಿರದಿಂದ ಗರಿಷ್ಠ 9,250 ವರೆಗೆ ಪಿಂಚಣಿ ಪಡೆಯಬಹುದು ಹಾಗಾಗಿ ಈ ಯೋಜನೆ ಹೊಂದಲು ಬಯಸುವವರು ಮಾರ್ಚ್ 31ನೇ ಒಳಗೆ ಈ ಕಾರ್ಯ ಮಾಡಬೇಕಿದೆ.

ಯಾರಾದರೂ 2022-23ನೇ ಸಾಲಿನಲ್ಲಿ ತೆರಿಗೆ ಉಳಿತಾಯ ಪಡೆಯಲು ಬಯಸಿದ್ದರೆ ಅಂಥವರು ಮಾರ್ಚ್ 31ರ ಒಳಗೆ ಹಣವನ್ನು ಹೂಡಿಕೆ ಮಾಡಬೇಕು. ವಿವಿಧ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ 15 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. 2019-20ರ ಹಣಕಾಸಿನ ವರ್ಷಕ್ಕೆ ನವೀಕರಿಸಿದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕ ಮಾರ್ಚ್ 31 ಆಗಿದೆ. ಐಟಿಆರ್ ನಲ್ಲಿ ಯಾವುದೇ ಆದಾಯವನ್ನು ಸೇರಿಸಲು ಮರೆತವರು ಈ ನವೀಕರಿಸಿದ ಐಟಿಆರ್ ಅನ್ನು ಸಲ್ಲಿಸಬಹುದು. ಹಾಗಾಗಿ ಈ ಎಲ್ಲಾ ಕೆಲಸಗಳನ್ನು ಮಾರ್ಚ್ 31ರ ಒಳಗೆ ಮಾಡಿ ಮುಗಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.