
ಸ್ನೇಹಿತರೆ, ಕರೋನಾ ಸಂಕಷ್ಟದ ಸಮಯದಲ್ಲಿ ಬಡವರ ನೆರವಿಗೆ ಧಾವಿಸಿರುವ ಹಿರಿಯ ನಟಿ ಲೀಲಾವತಿ ಹಾಗೂ ನಟ ವಿನೋದ್ ರಾಜ್ ಅವರು ಇತ್ತೀಚಿಗಷ್ಟೇ ಫುಡ್ ಕಿಟ್ ವಿತರಣೆ ಮಾಡಿ ಮಾನವೀಯತೆಯನ್ನು ಮೆರೆದಿದ್ದರು. ಆದರೆ ತಮ್ಮ ಜೀವನದಲ್ಲಿ ಎದುರಾದ ಕಷ್ಟಗಳನ್ನು ನೆನೆಸಿಕೊಂಡು ನಟಿ ಲೀಲಾವತಿ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಲೀಲಾವತಿಯವರು ಯಾಕಷ್ಟು ಬೇಜಾರು ಮಾಡಿಕೊಂಡಿದ್ದಾರೆ? ನಟಿ ಲೀಲಾವತಿಯವರ ಹೇಳಿದ ಮಾತುಗಳಾದರೂ ಯಾವುದು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ತಮ್ಮ ಮಗನ ಉಜ್ವಲ ಭವಿಷ್ಯ ಹಾಗೂ ಎದುರಾದ ಅವಮಾನಗಳ ಕುರಿತು ನಟಿ ಲೀಲಾವತಿ ಮಾತನಾಡಿದ್ದಾರೆ. ವಿನೋದ್ ರಾಜ್ ಬಹಳ ಶ್ರಮಜೀವಿ ನನ್ನ ಮಗನ ಮೇಲೆ ನನಗೆ ತುಂಬಾ ಪ್ರೀತಿಯಿದೆ. ತಾಯಿ ಮಕ್ಕಳಿಗೆ ಏನು ಬೇಕಾದರೂ ಮಾಡಬಲ್ಲರು ಅದನ್ನು ಲೀಲಾವತಿ ಮಾಡಿಲ್ಲ ಎಂದು ಕೆಲವರು ತಿಳಿದುಕೊಂಡಿದ್ದಾರೆ ಅದು ನಿಜ ಕೂಡ ಹಾಗಿರಬಹುದು ಅಥವಾ ಸುಳ್ಳು ಆಗಿರಬಹುದು. ಸಮಯ ಬಂದಾಗ ಎಲ್ಲವೂ ತಾನಾಗೆ ಗೊತ್ತಾಗುತ್ತದೆ ಎಂದು ನಟಿ ಲೀಲಾವತಿ ಹೇಳಿದ್ದಾರೆ. ಹೌದು ಯಾವ ತಾಯಿ ತಾನೇ ತನ್ನ ಮಗನ ಭವಿಷ್ಯ ಉಜ್ವಲವಾಗಿರಲಿ ಎಂದು ಬಯಸುವುದಿಲ್ಲ.
ಆದರೆ ವಿನೋದ್ ರಾಜ್ ಅವರ ಬಾಲಲ್ಲಿ ಸಾಕಷ್ಟು ಹಿಂಸೆ ನೋವುಗಳು ಎದುರಾದವು. ಹಲವರು ರೀತಿಯಾದಂತಹ ಅವಮಾನಗಳನ್ನು ಅನುಭವಿಸಬೇಕಾಗಿತ್ತು ಎಂದು ಲೀಲವತಿ ಬೇಸರ ವ್ಯಕ್ತಪಡಿಸಿದರು. ಅಲ್ಲದೆ ನನ್ನ ಮಗ ಮೈಕಲ್ ಜಾಕ್ಸನ್ ಅನ್ನು ನೋಡಿಕೊಂಡು ಡ್ಯಾನ್ಸ್ ಕಲಿಯುತ್ತಿದ್ದ, ಡ್ಯಾನ್ಸ್ ಮಾಡುವಾಗ ಶೋಲ್ಡರ್ ಸ್ಪಿನ್ ಮಾಡುವ ಸಮಯದಲ್ಲಿ ಅಮ್ಮ ನನ್ನನ್ನು ಹಿಡಿದುಕೊ ಎಂದು ಕರೆಯುತ್ತಿದ್ದ. ಆತನಿಗೆ ಡ್ಯಾನ್ಸ್ ಅಂದರೆ ಅಷ್ಟು ಹುಚ್ಚು, ಅಷ್ಟು ಚೆನ್ನಾಗಿ ಡ್ಯಾನ್ಸ್ ಆಕ್ಟಿಂಗ್ ಮಾಡುತ್ತಿದ್ದ ಅವನಿಗೆ ಯಾರೂ ಕೂಡ ಒಂದು ಚಾನ್ಸ್ ಕೊಡಲಿಲ್ಲ. ನನ್ನ ಮಗ ಮಾಡಿದ ತಪ್ಪಾದರೂ ಏನು ಎಂದು ಹೇಳುತ್ತಾ ಭಾವುಕರಾದರು ನಟಿ ಲೀಲಾವತಿ.
ನನ್ನ ಪಾಲಿಗೆ ಅವನೊಬ್ಬನೇ ಆಧಾರ ಅವನು ಇಲ್ಲದಿದ್ದರೆ ನಾನು ಏನ್ ಆಗುತ್ತಿದ್ದೇನೋ? ಸದ್ಯಕ್ಕೆ ನನ್ನ ಮಗ ಕೃಷಿ ಮಾಡುತ್ತಿದ್ದಾನೆ ನಮ್ಮ ತೋಟಕ್ಕೆ ಬಂದವರೆಲ್ಲ ಸ್ವರ್ಗದಂತಿದೆ ಎಂದು ಹೇಳುವುದೇ ನನಗೆ ಖುಷಿ ತಂದುಕೊಡುತ್ತದೆ. ಸದ್ಯ ನಾವಿಬ್ಬರೂ ಸಂತೋಷದಿಂದ ಇದ್ದೇವೆ ಹಿಂದೆ ನಾವು ಅನುಭವಿಸಿದ ನೋವು ಕಷ್ಟಗಳು ಆ ದೇವರಿಗೆ ಗೊತ್ತು ಎಂದು ನಟಿ ಲೀಲಾವತಿ ಕಣ್ಣೀರಿಟ್ಟರು. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…
Comments are closed.