ಸ್ವಂತ ಪತ್ನಿ ಜೊತೆ ತಾಯಿಯ ಹುಟ್ಟು ಹಬ್ಬ ಆಚರಿಸಿದ ಲೀಲಾವತಿ ಮಗ,ಮೆಚ್ಚಿಕೊಂಡ ಕರುನಾಡು

CINEMA/ಸಿನಿಮಾ Entertainment/ಮನರಂಜನೆ Today News / ಕನ್ನಡ ಸುದ್ದಿಗಳು

ಹಿರಿಯ ನಟಿ ಲೀಲಾವತಿ ಕೆಲವು ದಿನಗಳಿಂದ ವಯೋಸಹಜ ಕಾಯಿಲೆ ಬಳಲುತ್ತಿರುವುದರಿಂದ ಎಲ್ಲಾ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಆದರೆ ಈಗ ಅವರ ಹುಟ್ಟುಹಬ್ಬದ ದಿನ ಮಗ ವಿನೋದ್ ರಾಜ್ಕುಮಾರ್ ಅವರು ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿ ಲೀಲಾವತಿ ಅವರ ಮುಖದಲ್ಲಿ ನಗುವನ್ನು ಮೂಡಿಸಿದ್ದಾರೆ. ಇನ್ನು ಈ ಅದ್ಭುತ ಕ್ಷಣವನ್ನು ಚಿತ್ರರಂಗದ ಹಲವು ಗಣ್ಯರು ಕೂಡ ಕಣ್ತುಂಬಿಕೊಂಡಿದ್ದಾರೆ.

ಇನ್ನು ಅದೇ ಸುಸಂದರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಹಿರಿಯ ನಟಿ ಲೀಲಾವತಿ ಅವರಿಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಲೀಲಾವತಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಈ ಹಿಂದೆಯೇ ಆಯೋಜಿಸಲಾಗಿತ್ತು. ಆದರೆ ವಯೋಸಹಜ ಕಾಯಿಲೆಯಿಂದ ಅವರು ಕಾರ್ಯಕ್ರಮಕ್ಕೆ ಬರಲು ಆಗಿರಲಿಲ್ಲ

Vinod Raj: 'ಮದುವೆ ಆಗಿದ್ದೀನ್ರಿ ಸ್ವಾಮಿ, ಏನ್‌ ಭಯೋತ್ಪಾದನೆ ಮಾಡಿದೀನಾ?';  ಟೀಕಿಸಿದವರಿಗೆ ವಿನೋದ್‌ ರಾಜ್‌ ಮಾತಿನ ಏಟು..-vinod raj clarified the statements  of prakash raj mehu mnk

ಹೀಗಾಗಿ ಬುಧವಾರ 50ಕ್ಕೂ ಕಲಾವಿದರು ಲೀಲಾವತಿ ಅವರ ಮನೆಗೆ ತೆರಳಿ ಸನ್ಮಾನಿಸಿದ್ದಾರೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ನಟಿ ಲೀಲಾವತಿ ಅವರ ತೋಟದ ಮನೆಗೆ ಕನ್ನಡ ಕಲಾಬಳಗ ಭೇಟಿ ನೀಡಿತ್ತು. ಈ ವೇಳೆ ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ಪ್ರದಾನ ಮಾಡಿ ಹಿರಿಯ ಚೇತನವನ್ನು ಕಲಾವಿದರು ಗೌರವಿಸಿದ್ದಾರೆ. ಇದೇ ವೇಳೆ ನಟ, ನಟಿಯರು ಲೀಲಾವತಿಯರೊಂದಿಗೆ ಇದ್ದ ಒಡನಾಟವನ್ನು ಹಂಚಿಕೊಂಡರು.

ಲೀಲಾವತಿ ಅವರ ಮಗ ವಿನೋದ್ ರಾಜ್ ಕಲಾವಿದರನ್ನು ಬರಮಾಡಿಕೊಂಡು, ಅವರಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಿದರು. ಇದಕ್ಕೂ ಮುನ್ನಾ ಲೀಲಾವತಿ ಅವರ ಸಿನಿಮಾಗಳ ಹಾಡುಗಳನ್ನು ಹಾಡಿ ನೃತ್ಯ ಮಾಡುವ ಮೂಲಕ ಕಲಾವಿದರು ಸಂಭ್ರಮಿಸಿದರು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.