ಲೀಲಾವತಿ

ಕೊನೆಗೂ ನನಸಾಯ್ತು ಲೀಲಾವತಿಯವರ ಕನಸು,ಸಾರ್ವಜನಿಕ ಆರೋಗ್ಯ ಕಾಳಜಿಯಲ್ಲಿ ನಿರ್ಮಿಸಿದ್ದ ಆಸ್ಪತ್ರೆ ಲೋಕಾರ್ಪಣೆ.

Today News / ಕನ್ನಡ ಸುದ್ದಿಗಳು

ಸಾರ್ವಜನಿಕರ ಆರೋಗ್ಯ ಕಾಳಜಿಯಲ್ಲಿ ನಿರ್ಮಿಸಿದ್ದ ಆಸ್ಪತ್ರೆ ಲೋಕಾರ್ಪಣೆ ||ನಟಿ ಲೀಲಾವತಿಯವರು ಮೂಲತಃ ದಕ್ಷಿಣ ಭಾರತದ ನಟಿ ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸುಮಾರು 600 ಚಿತ್ರಗಳಲ್ಲಿ ನಟಿಸಿದ್ದಾರೆ ನಮ್ಮ ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಡಾಕ್ಟರ್ ರಾಜ್ ಕುಮಾರ್ ಪ್ರಶಸ್ತಿಯನ್ನು 1999 2000 ನೇ ಸಾಲಿನಲ್ಲಿ ಪಡೆದ ಲೀಲಾವತಿ ಅವರು ತುಮಕೂರು ವಿಶ್ವವಿದ್ಯಾಲ ಯದ ಗೌರವ ಡಾಕ್ಟರೇಟ್ ಪದವಿಯನ್ನು 2008ರಲ್ಲಿ ಪಡೆದರು ಲೀಲಾವತಿಯವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸುತ್ತಾರೆ ನಾಟಕ ರಂಗಭೂಮಿ ಬಗೆಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಲೀಲಾ ಅವರು ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟ ಪ್ರಸ್ತುತ ತಾಯಿ-ಮಗ ಇಬ್ಬರೂ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ವಿನೋದ್ ರಾಜ್ ಈಗಲೂ ಕೂಡ ಮದುವೆಯಾಗದೆ ಒಬ್ಬಂಟಿಯಾಗಿ ತಮ್ಮ ತಾಯಿಯನ್ನು ನೋಡಿಕೊಳ್ಳುತ್ತಾ ಇದ್ದಾರೆ.ಹಾಗೂ ಲೀಲಾವತಿ ಅವರು 1949 ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರವನ್ನು ಮಾಡುವುದರ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡುತ್ತಾರೆ ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗ ಭೂಮಿ ಕಲಾವಿದೆಯಾಗಿದ್ದಂತಹ ಲೀಲಾವತಿಯವರು ಚಿತ್ರರಂಗದಲ್ಲಿ ಮೊಟ್ಟಮೊದಲನೆಯದಾಗಿ ಸಖಿಯ ಪಾತ್ರವನ್ನು ನಿಭಾಯಿಸುತ್ತಾರೆ ಹೀಗೆ ಹಲವಾರು ರಂಗಭೂಮಿ ನಾಟಕಗಳಲ್ಲಿ ನಟನೆ ಮಾಡುವುದರ ಮೂಲಕ ಲೀಲಾವತಿಯವರು ಸಿನಿಮಾ ರಂಗಕ್ಕೆ ಪಾದಾರ್ಪಣೆಯನ್ನು ಮಾಡುತ್ತಾರೆ ಹಾಗೂ ನಟಿ ಲೀಲಾವತಿ ಅವರು ಮೊಟ್ಟ ಮೊದಲು ಸಣ್ಣ ಪುಟ್ಟ ಪಾತ್ರಗಳನ್ನು ಮಾಡುವುದರ ಮುಖಾಂತರ ಸಿನಿಮಾರಂಗಕ್ಕೆ ಬರುತ್ತಾರೆ.ಆನಂತರ ನಟಿ ಲೀಲಾವತಿ ಅವರು ಮೊಟ್ಟ ಮೊದಲನೆಯ ಬಾರಿಗೆ ನಟಿಯಾಗಿ ನಟಿಸಿದಂತಹ ಚಲನಚಿತ್ರ ಮಾಂಗಲ್ಯ ಯೋಗ ಹಾಗೂ

ಡಾಕ್ಟರ್ ರಾಜಕುಮಾರ್ ಅವರ ಜೊತೆಗೆ ಮೊದಲನೆಯದಾಗಿ ನಟಿಸಿದಂತಹ ಚಿತ್ರ ರಣಧೀರ ಕಂಠೀರವ ನಟಿ ಲೀಲಾವತಿ ಹಾಗೂ ಡಾಕ್ಟರ್ ರಾಜಕುಮಾರ್ ಅವರು ನಟಿಸಿದಂತಹ ಹಲವಾರು ಚಿತ್ರಗಳು ಹೆಚ್ಚಿನ ಯಶಸ್ಸನ್ನು ಪಡೆದು ಇವರಿಬ್ಬರೂ ಹೆಚ್ಚಿನ ಹೆಸರನ್ನು ಪಡೆಯಲು ಕಾರಣವಾಯಿತು ಇವರಿಬ್ಬರ ಅಭಿನಯವನ್ನು ಜನರು ಮೆಚ್ಚಿಕೊಳ್ಳುತ್ತಿದ್ದರು.ಇವರ ಚಿತ್ರ ಬಿಡುಗಡೆಯಾಯಿತು ಎಂದ ತಕ್ಷಣವೇ ಹೆಚ್ಚಿನ ಪ್ರೇಕ್ಷಕರು ಸಿನಿಮಾವನ್ನು ವೀಕ್ಷಿಸಲು ರಂಗ ಮಂದಿರ ಗಳಿಗೆ ಬರುತ್ತಿದ್ದರು ಅಷ್ಟರಮಟ್ಟಿಗೆ ಇವರಿಬ್ಬರು ನಟನೆಯನ್ನು ಮಾಡಿ ಜನರನ್ನು ಆಕರ್ಷಿ ಸುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಇವರು ಅನಾರೋಗ್ಯ ದಿಂದ ಬಳಲುತ್ತಿದ್ದು ಇವರ ಕನಸಿನಂತೆಯೇ ತಮ್ಮ ಊರಿನಲ್ಲಿ ಒಂದು ಆಸ್ಪತ್ರೆಯನ್ನು ತೆಗೆಯಬೇಕು ಇದರಿಂದ ಬಡ ಜನಗಳಿಗೆ ಅಂದರೆ ಸಾರ್ವಜನಿಕರಿಗೆ ಅನುಕೂಲವಾಗಬೇಕು ಎಂಬ ಇವರ ಕನಸನ್ನು ಮಗ ವಿನೋದ್ ರಾಜ್ ಈಡೇರಿಸಿದ್ದಾರೆ ಹಾಗೂ ಅದರ ಫೋಟೋಗಳನ್ನು ವಿನೋದ್ ರಾಜ್ ಅವರು ತಮ್ಮ ಜಾಲತಾಣಗಳಲ್ಲಿ ಹಾಕಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
ಇದನ್ನೂ ಓದಿ >>>  ಸ್ಟಾರ್ ನಟರು ಬೆಡ್ ರೂಮ್ ಗೆ ಕರೆದು ಏನೇ ಮಾಡಿದರೂ ನಾವು ಮಾಡಿಸಿಕೊಳ್ಳಬೇಕು ಎಂದ ನಟಿ ಕಂಗನಾ ರಾಣಾವತ್! ಬಾಲಿವುಡ್ ನಟರ ಬಗ್ಗೆ ನಟರ ಬಗ್ಗೆ ಕಂಗನಾ ಹೇಳಿದ್ದೇನು ನೋಡಿ!!
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...