ಕಾಂತಾರ ಸೆಟ್ ನಲ್ಲಿ ಪ್ರೇಗ್ನನ್ಟ್ ಲೀಲಾ ಶೂಟಿಂಗ್ ಹೇಗಿತ್ತು ನೋಡಿ…

ಕಾಂತಾರ ಸಿನಿಮಾವು ತೆರೆ ಕಂಡು ಇಷ್ಟು ದಿನಗಳಾದರೂ ಹವಾ ಕಡಿಮೆಯಾಗುವುದಿಲ್ಲ. ಹೊಂಬಾಳೆ ಸಂಸ್ಥೆ ನಿರ್ಮಾಣದ `ಕಾಂತಾರಾ’ ಚಿತ್ರವನ್ನು ರಿಷಬ್ ಶೆಟ್ಟಿ, ನಟನೆಯ ಜೊತೆ ನಿರ್ದೇಶಿಸಿದ್ದಾರೆ. ಕಳೆದ ಸೆಪ್ಟೆಂಬರ್ 30ರಂದು ರಿಲೀಸ್ ಆಗಿರುವ `ಕಾಂತಾರಾ’ ಸಿನಿಮಾ ಏಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಈ ಸಿನಿಮಾದಲ್ಲಿ ನಟಿಸಿದ್ದ ಸಪ್ತಮಿಗೌಡರವರ ಬೇಡಿಕೆಯೂ ಹೆಚ್ಚಾಗಿದೆ. ಲೀಲಾ ಲುಕ್, ಕಾಸ್ಟ್ಯೂಮ್ ಹಾಗೂ ನಟನೆಗೆ ಫಿದಾ ಆಗಿದ್ದಾರೆ. ಸಪ್ತಮಿ ಗೌಡರವರು ಖಡಕ್ ಹಳ್ಳಿ ಹುಡುಗಿಯಾಗಿ ಲೀಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

2020ರಲ್ಲಿ ತೆರೆಕಂಡ ಧನಂಜಯ್ ಅಭಿನಯದ ಪಾಪ್​​ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಕಾಂತಾರಾದ ಲೀಲಾಳಾಗಿ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾದ ಶೂಟಿಂಗ್ ನಡೆದಿರುವುದು ರಿಷಬ್ ಶೆಟ್ಟಿ ಹುಟ್ಟಿದ ಊರಲ್ಲಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರಾಡಿ ಎಂಬಲ್ಲಿ ಸೆಟ್‌ ಹಾಕಿ, ಕಾಂತಾರ ಶೂಟಿಂಗ್ ಮಾಡಲಾಗಿತ್ತು. ಈ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ನಟಿ ಸಪ್ತಮಿ ಗೌಡ ನಟಿಸಿದ್ದರು.

ಈ ಸಿನಿಮಾದ ಲಾಸ್ಟ್‌ ಡೇ ಶೂಟಿಂಗ್‌ನ ವಿಡಿಯೋವನ್ನು ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಸಪ್ತಮಿ ಗೌಡ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಕಾಂತಾರ ಲಾಸ್ಟ್ ಸೀನ್‌ನಲ್ಲಿ ಲೀಲಾ ಗರ್ಭಿಣಿಯಾಗಿರುತ್ತಾಳೆ. ಹೀಗಾಗಿ ಸಪ್ತಮಿ ಗೌಡ ಗರ್ಭಿಣಿ ಗೆಟಪ್‌ನಲ್ಲಿ ಲಾಸ್ಟ್‌ ಡೇ ಶೂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಕೈಯಲ್ಲಿ ಬನ್ ಹಿಡಿದು, ನಿಧಾನಕ್ಕೆ ಒಂದೊಂದೇ ಪೀಸ್ ತಿನ್ನುತ್ತಾ, ನಿಧಾನಕ್ಕೆ ಓಡಾಡುತ್ತಾ ಇದ್ದರು. ಈ Videoವನ್ನು ಶೇರ್ ಮಾಡಿಕೊಂಡ ಸಪ್ತಮಿ ಗೌಡ, ಕಾಂತಾರ ಚಿತ್ರದ ಸೆಟ್‌ನಲ್ಲಿ ಇರುವುದನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ.

ರಾತ್ರಿಯ ಚಿತ್ರೀಕರಣದ ಸಮಯದಲ್ಲಿ ನಾನು ಸೇವಿಸಿದ ಎಲ್ಲಾ ಬನ್‌ಗಳನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ನನ್ನ ತಂಡವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದು ಸೆಟ್‌ನಲ್ಲಿ ನನ್ನ ಕೊನೆಯ ಶೂಟಿಂಗ್ ದಿನವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ, ಬೆಂಗಳೂರಿನವರಾದ ಸಪ್ತಮಿ ಗೌಡ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಸುಪುತ್ರಿ ಯಾಗಿದ್ದು, ಸದ್ಯಕ್ಕೆ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದ ಮೂಲಕ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಸದ್ಯಕ್ಕೆ ನಟಿ ಸಪ್ತಮಿ ಗೌಡರವರಿಗೆ ಸಾಕಷ್ಟು ಅವಕಾಶಗಳು ಬರುತ್ತಿದ್ದು, ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಫುಲ್ ಡಿಮ್ಯಾಂಡ್ ಬರುತ್ತಿದ್ದು, ಸದ್ಯ ಅವರು ಕಾಳಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

You might also like

Comments are closed.